8.4 C
Munich
Thursday, March 2, 2023

19 20 21 Kannada movie is about Vittal Malekudiya: Meet the real character of Mansore film | Vittal Malekudiya: ‘19.20.21’ ಚಿತ್ರದಲ್ಲಿರುವ ರಿಯಲ್​ ಕಥೆ ಯಾರದ್ದು? ಫೋಟೋ ಸಹಿತ ಮಾಹಿತಿ ಹಂಚಿಕೊಂಡ ಚಿತ್ರತಂಡ

ಓದಲೇಬೇಕು

Madan Kumar |

Updated on: Mar 02, 2023 | 5:28 PM

19.20.21 Movie | Mansore: ವಿಠಲ್ ಮಲೆಕುಡಿಯ ಅವರ ಪಾತ್ರವನ್ನು ರಂಗಭೂಮಿ ಕಲಾವಿದ ಶೃಂಗ ಬಿ.ವಿ. ನಿಭಾಯಿಸಿದ್ದಾರೆ. ವಿಠಲ್ ಅವರ ಹೋರಾಟದ ಕಥೆ ‘19.20.21’ ಚಿತ್ರದಲ್ಲಿದೆ.

Mar 02, 2023 | 5:28 PM

ಖ್ಯಾತ ನಿರ್ದೇಶಕ ಮಂಸೋರೆ ಅವರ ಬಹುನಿರೀಕ್ಷಿತ ‘19.20.21’ ಸಿನಿಮಾ ಮಾರ್ಚ್​ 3ರಂದು ತೆರೆಗೆ ಬರುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ನಡೆದ ರಿಯಲ್​ ಘಟನೆಗಳ ವಿವರ ಈ ಚಿತ್ರದಲ್ಲಿದೆ.

2012ರ ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರ ಕಾನೂನು ಹೋರಾಟದ ಕಥೆಯೇ ‘19.20.21’ ಸಿನಿಮಾ. ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ-ಮಗನನ್ನು ಬಂಧಿಸಲಾಗಿತ್ತು.

ಬಂಧನಕ್ಕೆ ಒಳಗಾದ ಸಮಯದಲ್ಲಿ ವಿಠಲ್ ಅವರು ಮಂಗಳೂರಿನ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಓದುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಕೈಯಲ್ಲಿದ್ದ ಕೋಳ ಕೂಡ ತೆಗೆದಿರಲಿಲ್ಲ. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು.

ವಿಠಲ್ ಅವರು ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದರು. 2021ರಲ್ಲಿ ಅವರು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಈ ಸಿನಿಮಾದಲ್ಲಿ ವಿಠಲ್ ಮಲೆಕುಡಿಯ ಅವರ ಪಾತ್ರವನ್ನು ರಂಗಭೂಮಿ ಕಲಾವಿದ ಶೃಂಗ ಬಿ.ವಿ. ನಿಭಾಯಿಸಿದ್ದಾರೆ.

ದೇವರಾಜ್ ಆರ್. ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ. ಶೃಂಗ ಬಿ.ವಿ. ಜೊತೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ. ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಮುಂತಾದವರು ನಟಿಸಿದ್ದಾರೆ. ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.

ತಾಜಾ ಸುದ್ದಿ

Most Read Stories

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!