8.6 C
Munich
Wednesday, March 22, 2023

8 years on, woman held for for chopping brother into pieces in Bengaluru | ಲವ್ವಿಡವ್ವಿಗೆ ಅಡ್ಡಿಯಾದ ಸ್ವಂತ ತಮ್ಮನನ್ನೇ ಕೊಂದು 20 ಪೀಸ್​ ಮಾಡಿದ್ದ ಅಕ್ಕ, ಮರ್ಡರ್‌ ಮಿಸ್ಟ್ರಿಯ ಸ್ಫೋಟಕ ಮಾಹಿತಿ ಬಯಲು..!

ಓದಲೇಬೇಕು

ಅದು ಬರೋಬ್ಬರಿ 8 ವರ್ಷಗಳ ಹಿಂದಿನ ಕೊಲೆ ಕೇಸ್‌. ಅದೊಬ್ಬನನ್ನ ಕೊಂದಿದ್ದ ಹಂತಕರು, ದೇಹವನ್ನ ಹತ್ತಾರು ತುಂಡು ಮಾಡಿದ್ರು. ನೂರಾರು ಪೊಲೀಸರು ಆ ಕೇಸ್‌ನ ಹಿಂದೆ ಬಿದ್ರೂ ಕೊಲೆ ಪಾತಕಿಗಳು ಮಾತ್ರ ಸಿಕ್ಕಿರಲಿಲ್ಲ. ಮುಚ್ಚಿ ಹೋಗಿದ್ದ ಅದೇ ಕೇಸ್‌ ರೀ ಓಪನ್ ಆಗಿದೆ. ಹಂತಕರ ಕೈಗೆ ಕೋಳ ಬಿದ್ದಿದ್ದು, ತನಿಖೆ ವೇಳೆ ಕೊಲೆಗಾರರ ಸ್ಫೋಟಕ ಮಾಹಿತಿ ಬಟಾಬಯಲಾಗಿದೆ.

ಕೊಲೆ ಆರೋಪಿಗಳು

ಬೆಂಗಳೂರು: ತನ್ನ ಅಕ್ರಮ ಸಂಬಂಧಕ್ಕೆ ಸಹೋದರ ಅಡ್ಡಿಯಾಗಿದ್ದಾನೆಂದು ಅಕ್ಕ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಭೀಕರ ಹತ್ಯೆ ಮಾಡಿದ್ದು, ಇದೀಗ 8 ವರ್ಷಗಳ ಹಿಂದಿನ ಕೊಲೆ ಪ್ರಕರಣವನ್ನು ಜಿಗಿಣಿ ಪೊಲೀಸರು ಭೇದಿಸಿದ್ದಾರೆ. ಹೌದು..2015 ರ ಆಗಸ್ಟ್‌ 11 ರಂದು ಬೆಂಗಳೂರಿನ ಜಿಗಣಿ ಬಳಿ ನಿರ್ಜನ ಪ್ರದೇಶದಲ್ಲಿ ರಕ್ತಸಿಕ್ತವಾಗಿದ್ದ ಬ್ಯಾಗ್‌ ಸಿಕ್ಕಿತ್ತು. ಓಪನ್‌ ಮಾಡಿ ನೋಡಿದಾಗ ಪುರುಷನ ಮೃತದೇಹದ ಅಂಗಾಂಗಳುಗಳು ಪತ್ತೆಯಾಗಿದ್ದವು. ಇಷ್ಟೊಂದು ಭೀಕರವಾಗಿ ಹತ್ಯೆಯಾಗಿರುವುದು ಯಾರು ಎಂದು ತಿಳಿದುಕೊಳ್ಳಬೇಕು ಅಂದ್ರೆ ರುಂಡವೇ ಇರಲಿಲ್ಲ. ಇದಾದ ನಾಲ್ಕು ದಿನಗಳ ಬಳಿಕ ಕೆರೆಯೊಂದರ ಬಳಿ ರುಂಡವೂ ಪತ್ತೆಯಾಗಿತ್ತು. ಅಂದು ಬರ್ಬರವಾಗಿ ಹತ್ಯೆಯಾಗಿರುವುದು ನಿಂಗರಾಜು ಪೂಜಾರಿ ಎನ್ನುವುದು ಗೊತ್ತಾಗಿತ್ತು. ಇದೇ ಕೊಲೆ ಕೇಸನ್ನ ಸವಾಲ್ ಆಗಿ ಸ್ವೀಕರಿಸಿದ್ದ ಪೊಲೀಸರಿಗೆ ಒಂದೇ ಒಂದು ಸುಳಿವು ಸಿಕ್ಕಿರಲಿಲ್ಲ. ಆದ್ರೆ ಅದೇ ಕೇಸ್‌ನ ಹಂತಕರು 8 ವರ್ಷಗಳ ಬಳಿಕ ಸಿಕ್ಕಿಬಿದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಅಡಗಿದ್ದ ಆರೋಪಿಗಳನ್ನ ಹೆಡೆಮುರಿ ಕಟ್ಟಿರುವ ಪೊಲೀಸರು. ಎ1 ಆರೋಪಿ ಶಿವಪುತ್ರ ಹಾಗೂ ನಿಂಗರಾಜ ಸಹೋದರಿ ಭಾಗ್ಯಶ್ರೀಯನ್ನ ಅರೆಸ್ಟ್‌ ಮಾಡಿ ಕರೆತಂದಿದ್ದು, ತನಿಖೆ ವೇಳೆ ಎರಡೆರಡು ಪ್ರೇಮ ಪುರಾಣಗಳು ಬಯಲಾಗಿವೆ.

ಇದನ್ನೂ ಓದಿ: 8 ವರ್ಷದ ಬಳಿಕ ಯುವಕನ ಭೀಭತ್ಸ ಕೊಲೆ ರಹಸ್ಯ ಬೆಳಕಿಗೆ: ತಮ್ಮನನ್ನೇ ಹತ್ಯೆ ಮಾಡಿದ್ದ ಅಕ್ಕ, ಪ್ರಿಯಕರ ಅರೆಸ್ಟ್​​

ಅಷ್ಟಕ್ಕೂ ಮೃತ ನಿಂಗರಾಜು ಪೂಜಾರಿ ವಿಜಯಪುರ ಮೂಲದವನು. ಈತ ಹಾಗೂ ಈತನ ಸಹೋದರಿ ಭಾಗ್ಯಶ್ರೀ ಕೆಲಸಕ್ಕೆ ಎಂದು ಬೆಂಗಳೂರಿಗೆ ಬಂದು ಜಿಗಣಿಯಲ್ಲಿ ವಾಸವಾಗಿದ್ದರು. ಇದರ ನಡುವೆ ವಿಜಯಪುರ ಮೂಲದ ಶಿವಪುತ್ರ ಎನ್ನುವಾತ ತನ್ನ ಪತ್ನಿಯನ್ನ ಊರಲ್ಲಿ ಬಿಟ್ಟು ಬೆಂಗಳೂರನ್ನ ಸೇರಿಕೊಂಡಿದ್ದ. ಇಲ್ಲಿ ಭಾಗ್ಯಶ್ರೀ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ಸಹೋದರ ನಿಂಗರಾಜು ಗೊತ್ತಾಗ್ತಿದ್ದಂತೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದ, ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ, ಇಬ್ಬರು ಸೇರಿಕೊಂಡು ನಿಂಗರಾಜು ಕತೆ ಮುಗಿಸಿದ್ದರು. ಶವವನ್ನ ತುಂಡು ತುಂಡು ಮಾಡಿ ಎಸ್ಕೇಪ್‌ ಆಗಿದ್ದರು. ಕಾಲುಗಳನ್ನ ತುಂಡು ತುಂಡು ಮಾಡಿದ್ದರು. ಕೈಗಳನ್ನೂ ತುಂಡರಿಸಿದ್ದರು. ದೇಹವನ್ನೇ ಹತ್ತಾರು ಭಾಗ ಮಾಡಿದ್ದವರು, ರುಂಡವನ್ನೇ ನಾಪತ್ತೆ ಮಾಡಿದ್ದರು. ಹೀಗೆ ಭೀಕರವಾಗಿ ಕೊಂದಿದ್ದ ಹಂತಕರು ಇದೀಗ 8 ವರ್ಷಗಳ ಬಳಿಕ ಖಾಕಿ ಬಲೆಗೆ ಬಿದ್ದಿದ್ದಾರೆ.

ಕೊಲೆಯ ಹಿಂದಿತ್ತು ಎರಡೆರಡು ಪ್ರೇಮ ಪುರಾಣ

ಇನ್ನು ಎಂಟು ವರ್ಷಗಳ ಬಳಿಕ ಪೊಲೀಸರ ಬಲೆ ಬಿದ್ದಿರುವ ಹಂತಕರ ಸ್ಫೋಟಕ ಮಾಹಿತಿ ತನಿಖೆಯಿಂದ ಬಟಾಬಯಲಾಗಿದೆ. ಹೇಗೆ ಕೊಲೆ ಮಾಡಿದ್ದರು?  ಬಳಿಕ ಹೇಗೆ ತಲೆಮರೆಸಿಕೊಂಡಿದ್ದರು? ಎನ್ನುವ ಅಂಶಗಳನ್ನು ತನಿಖೆ ವೇಳೆ ಬಾಯ್ವಿಟ್ಟಿದ್ದಾರೆ. ಅದು ಈ ಕೆಳಗಿನಂತಿದೆ.

2011-12ರಲ್ಲಿ ಭಾಗ್ಯಶ್ರೀ ಹಾಗೂ ಶಿವಪುತ್ರ ನಡುವೆ ಪ್ರೇಮಾಂಕುರವಾಗಿತ್ತು. ನಂತರ ಇಬ್ಬರು ವಿವಾಹವಾಗಬೇಕು ಎಂದು ತೀರ್ಮಾನಿಸಿದ್ದರು. ಆದ್ರೆ, ಇವರ ಈ ಪ್ರೀತಿಗೆ ಮನೆಯಲ್ಲಿ ಜಾತಿ ಅಡ್ಡಿಯಾಗಿತ್ತು. ನಂತರ 2014ರಲ್ಲಿ ಶಿವಪುತ್ರನಿಗೆ ಕುಟುಂಬಸ್ಥರು ಬೇರೆ ಯುವತಿ ಜೊತೆಗೆ ಮದುವೆ ಮಾಡಿದ್ದರು. ಅದಾಗಿಯೂ ಭಾಗ್ಯಶ್ರೀ ಮತ್ತು ಶಿಪುತ್ರ ದೂರವಾಗಿರಲಿಲ್ಲ. ಇಬ್ಬರು ಪರಸ್ಪರ ಸಂಪರ್ಕದಲ್ಲೇ ಇದ್ದರು. ಅದೇ ವೇಳೆ ಶಿವಪುತ್ರ ಪತ್ನಿ ಜೊತೆ ಜಗಳಮಾಡಿದ್ದ. ಇದರಿಂದ ಪತ್ನಿ ಮದುವೆಯಾಗಿ 6 ತಿಂಗಳಲ್ಲಿ ಪತಿ ಶಿವಪುತ್ರನನ್ನು ಬಿಟ್ಟು ತವರು ಮನೆ ಸೇರಿದ್ದಳು. ನಂತರ ಶಿವಪುತ್ರ ಬೆಂಗಳೂರು ಸೇರಿಕೊಂಡು ಜಿಗಣಿಯ ಬಂದು ಖಾಸಗಿ ಕಂಪನಿಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ

ಬಳಿಕ ಶಿವಪುತ್ರ ಪ್ರಯತಮೆ ಭಾಗ್ಯಶ್ರೀ ಮತ್ತು ಆಕೆಯ ಸಹೋದರ ಲಿಂಗರಾಜುನನ್ನ(ಕೊಲೆಯಾದವನು) ಜಿಗಣಿಗೆ ಕರೆಯಿಸಿಕೊಕೊಳ್ಳುತ್ತಾನೆ. ಈ ಮೂವರು ಒಂದೇ ಮನೆಯಲ್ಲಿದ್ದರು. ಅಲ್ಲಿವರೆಗೆ ಭಾಗ್ಯಶ್ರೀ ಮತ್ತು ಶಿಪುತ್ರ ಲವ್ ಸ್ಟೋರಿ ಲಿಂಗರಾಜ್​ಗೆ ಗೊತ್ತೇ ಇರಲಿಲ್ಲ. ಬೆಂಗಳೂರಿಗೆ ಬಂದ ಒಂದು ತಿಂಗಳ ಬಳಿಕ ಇವರ ಪ್ರೇಮಪುರಾಣ ಗೊತ್ತಾಗಿದೆ. ಅಂದಿನಿಂದ ಮೂವರ ನಡುವೆ ಜಗಳ ಶುರುವಾಗಿತ್ತು. ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಕೊನೆಗೆ ಭಾಗ್ಯಶ್ರೀ ತನ್ನ ಸಹೋದರ ಲಿಂಗರಾಜು ಪೂಜಾರ್​ನನ್ನು ಕೊಲೆಗೆ ಸ್ಕೆಚ್​ ಹಾಕಿದ್ದಳು.

ಮೃತದೇಹವನ್ನು 20 ಪೀಸ್ ಮಾಡಿದ್ದ ಹಂತಕರು

2015, ಆಗಸ್ಟ್ 10ರಂದು ಮದ್ಯಪಾನ ಮಾಡಿ ಬಂದಿದ್ದ ಲಿಂಗರಾಜು, ಅಕ್ಕ ಭಾಗ್ಯಶ್ರೀ ಜೊತೆಗೆ ಜಗಳವಾಡಿ ಹೊಡಿಯಲು ಮುಂದಾಗಿದ್ದ. ಆ ವೇಳೆ ಭಾಗ್ಯಶ್ರೀ ಹಾಗೂ ಶಿವಪುತ್ರ ಸೇರಿ ಹೊಡೆದು ಕೊಂದಿದ್ದರು. ಹತ್ಯೆ ಬಳಿಕ ಅಂದು ಇಡೀ ರಾತ್ರಿ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದರು. ಈ ವಿಷಯ ಮನೆಯವರಿಗೆ ಗೊತ್ತಾದರೆ ನಮ್ಮನ್ನ ಕೊಲೆ ಮಾಡುತ್ತಾರೆ ಎಂದು ಹೆದರಿ ಆಗಸ್ಟ್​ 11ರಂದು ಜಿಗಣಿಗೆ ಬಂದು ಬ್ಯಾಗ್ ಹಾಗೂ ಮಚ್ಚು ಖರೀದಿ ಮಾಡಿ ಬಳಿಕ ಇಡೀ ದಿನ ಕುಳಿತು ಲಿಂಗರಾಜ್ ಮೃತದೇಹವನ್ನು 20 ಪೀಸ್ ಗಳನ್ನಾಗಿ ಮಾಡಿದ್ದರು. ರುಂಡ, ದೇಹದ ಭಾಗ, ತೊಡೆಯನ್ನು ಕೆರೆಗೆ ಬಿಸಾಡಿದ್ದರು. ನಂತರ ಕೈಕಾಲು ಹಾಗೂ ಕಟ್​ ಮಾಡಲು ಖರೀದಿಸಿದ್ದ ಮಚ್ಚನ್ನು ಪೊದೆಯೊಂದರಲ್ಲಿ ಬಿಸಾಡಿದ್ದರು. ನಂತರ ಬಸ್ ಹಿಡಿದು ಪುಣೆಗೆ ತೆರಳಿದ್ದರು.

ಅಲ್ಲಿಂದ ಮುಂಬೈ, ಮುಂಬೈನಿಂದ ನಾಸಿಕ್ ಗೆ ಹೋಗಿದ್ದರು. ಮನೆಯವರ ಸಂಪರ್ಕ ಕೂಡ ಮಾಡದ ಭಾಗ್ಯಶ್ರೀ, ಶಿಪುತ್ರ ಸಿಕ್ಕಿಹಾಕಿಕೊಳ್ಳುವ ಭಯಕ್ಕೆ ಇಬ್ಬರು ಫೋನ್ ಕೂಡ ಇಟ್ಟುಕೊಂಡಿರಲಿಲ್ಲ. ಮನೆಯವರು ಕೂಡ ಇವರು ಮೃತಪಟ್ಟಿದ್ದಾರಂತಲೇ ತಿಳಿದುಕೊಂಡಿದ್ದರು. ನಂತರ ಇವರು ಮಹಾರಾಷ್ಟ್ರದಲ್ಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಅಲ್ಲದೇ ಶಂಕರಪ್ಪ ಮತ್ತು ಪ್ರಿಯಾಂಕ ಎಂದು ಹೆಸರು ಬದಲಾವಣೆ ಮಾಡಿಕೊಂಡು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಒಟ್ಟಿನಲ್ಲಿ ಛಲಬಿಡದ ಜಿಗಣಿ ಪೊಲೀಸರು 8 ವರ್ಷಗಳಿಂದಲೂ ಪ್ರಕರಣದ ಹಿಂದೆ ಬಿದ್ದು ಅಂತಿಮವಾಗಿ ಕೊನೆಗೂ ಹಂತಕರ ಕೈಗೆ ಕೋಳ ತೊಡಿಸಿದ್ದಾರೆ. ಪೊಲೀಸರ ಇದೇ ಕಾರ್ಯ ಎಲ್ಲರ ಶ್ಲಾಘನೆಗೆ ಕಾರಣವಾಗಿದೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!