8.4 C
Munich
Thursday, March 23, 2023

A woman from Punjab, who experienced divorce from her spouse after she unexpectedly developed a beard | Woman with Beard: ಹೆಂಡತಿ ಮುಖದಲ್ಲಿ ಬೆಳೆಯಿತು ಗಡ್ಡ ಮೀಸೆ, ಪತ್ನಿಯಿಂದ ದೂರವಾದ ಪತಿ

ಓದಲೇಬೇಕು

ಪಂಜಾಬ್​​ ಮೂಲದ ಮಹಿಳೆ ತನ್ನ ಮುಖದ ಮೇಲೆ ಗಡ್ಡ ಮೀಸೆ ಬೆಳೆಯುತ್ತಿರುವುದನ್ನು ಕಂಡು ದೃತಿಗೆಡದೆ, ಪತಿಯಿಂದ ದೂರವಾಗಿ ಇದೀಗಾ ವಾಸ್ತವವನ್ನು ಅರಿತು ಹೊಸ ಜೀವನವನ್ನು ನಡೆಸುತ್ತಿದ್ದಾಳೆ.

ಮಂದೀಪ್ ಕೌರ್

Image Credit source: HuffPost UK

ಪಂಜಾಬ್​​ ಮೂಲದ ಮಹಿಳೆ ತನ್ನ ಮುಖದ ಮೇಲೆ ಗಡ್ಡ ಮೀಸೆ ಬೆಳೆಯುತ್ತಿರುವುದನ್ನು ಕಂಡು ದೃತಿಗೆಡದೆ, ಪತಿಯಿಂದ ದೂರವಾಗಿ ಇದೀಗಾ ವಾಸ್ತವವನ್ನು ಅರಿತು ಹೊಸ ಜೀವನವನ್ನು ನಡೆಸುತ್ತಿದ್ದಾರೆ. 2012 ರಲ್ಲಿ ಮಂದೀಪ್ ಕೌರ್ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಆದರೆ ಕೆಲ ವರ್ಷಗಳ ನಂತರ ದೇಹದಲ್ಲಿನ ಹಾರ್ಮೋನ್​ ಬದಲಾವಣೆಯಿಂದಾಗಿ ಆಕೆಯ ಮುಖದಲ್ಲಿ ಕೆನ್ನೆ ಮತ್ತು ಗಲ್ಲದ ಮೇಲೆ ಕೂದಲು ಬೆಳೆಯಲು ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ಖಿನ್ನತೆಗೆ ಒಳಗಾದ ಈಕೆ, ಇದಾದ ನಂತರ ನಂತರ ವಾಸ್ತವವನ್ನು ಅರಿತು ಮುಖದಲ್ಲಿರುವ ಗಡ್ಡ ಮೀಸೆಯನ್ನು ಬೆಳೆಯಲು ಬಿಟ್ಟಿದ್ದಾಳೆ. ಗಡ್ಡ ಮೀಸೆ ಬೆಳೆದಿರುವ ಮಹಿಳೆಯೊಂದಿಗೆ ಜೀವನ ನಡೆಸುವುದು ನಾಚಿಕೆಗೀಡಿನ ಸಂಗತಿ ಎಂದು ಆಕೆಯ ಗಂಡ ವಿಚ್ಛೇದನ ನೀಡಿದ್ದಾನೆ. ಇಷ್ಟೆಲ್ಲಾ ನೋವುಗಳಿದ್ದರೂ ದೃತಿಗೆಡದೇ ತನ್ನ ಹೊಸ ಜೀವನವನ್ನು ನಡೆಸುತ್ತಿದ್ದಾಳೆ.

ಈಗ 31 ವಯಸ್ಸಿಗೆ ಕಾಯಿಟ್ಟ ಈಕೆಯ ಜೀವನ ಶೈಲಿಯೇ ಬದಲಾಗಿದೆ. ರೈತ ಕುಟುಂಬದಲ್ಲಿ ಜನಿಸಿದ ಈಕೆ ಕೃಷಿ ಜೀವನ ನಡೆಸಿಕೊಂಡು ಸುಂದರ ಜೀವನ ಕಟ್ಟಿಕೊಂಡಿದ್ದಾಳೆ. ಅದರಂತೆಯೇ ತನ್ನ ಮುಖದ ಮೇಲೆ ಬೆಳೆದ ಕೂದಲನ್ನು ತೆಗೆಯದೆ ದಪ್ಪ ಗಡ್ಡ, ಪೇಟವನ್ನು ಧರಿಸಿ, ಜೊತೆಗೊಂದು ದ್ವಿಚಕ್ರ ವಾಹನ. ಈ ರೀತಿಯಾಗಿ ತನ್ನ ವಾಸ್ತವದೊಂದಿಗೆ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಂಟ ಪೂರ್ತಿ ಕುಡಿದು ತನ್ನ ಮದುವೆ ಮರೆದು ಬಿಟ್ಟ ವರ, ವಧು ಮಾಡಿದೇನು ಗೊತ್ತಾ?

ಇಂತಹ ಸಮಸ್ಯೆ ಕೇವಲ ಈಕೆಯಲ್ಲಿ ಮಾತ್ರವಲ್ಲ, ಇಂಗ್ಲೆಂಡಿನ ಮೂಲದ ಇನ್ನೊಬ್ಬ ಮಹಿಳೆ ಇದೇ ರೀತಿ ಜೀವನ ನಡೆಸುತ್ತಿದ್ದಾರೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಪಿಸಿಓಎಸ್, ಮಹಿಳೆಯರ ಹಾರ್ಮೋನ್ ಮಟ್ಟವನ್ನು ಪರಿಣಾಮ ಬೀರುವ ಸ್ಥಿತಿಯ ಕಾರಣದಿಂದಾಗಿ ಈ ರೀತಿಯಾಗಿ ಕೂದಲು ಬೆಳೆಯಿತು ಎಂದು ತನ್ನ ಜೀವನದ ಸಂಪೂರ್ಣ ಘಟನೆಯನ್ನು ಇತ್ತೀಚೆಗಷ್ಟೇ TED Talksನಲ್ಲಿ ಹಂಚಿಕೊಂಡಿದ್ದು, ಇದು ಭಾರೀ ಸುದ್ದಿಯಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!