5.5 C
Munich
Friday, March 3, 2023

Aam Aadmi Party leader Manish Sisodia moves Delhi court for bail in liquor scam case | Manish Sisodia: ದೆಹಲಿ ಅಬಕಾರಿ ನೀತಿ ಪ್ರಕರಣ: ಜಾಮೀನು ಮನವಿಯನ್ನು ಸುಪ್ರೀಂ ತಿರಸ್ಕರಿಸಿದ ನಂತರ ದೆಹಲಿ ಕೋರ್ಟ್​​ ಮೊರೆ ಹೋದ ಸಿಸೋಡಿಯಾ

ಓದಲೇಬೇಕು

ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಶುಕ್ರವಾರ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ  ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಮನೀಶ್ ಸಿಸೋಡಿಯಾ

ದೆಹಲಿ ಅಬಕಾರಿ ನೀತಿಯಲ್ಲಿನ (liquor excise policy) ಅಕ್ರಮಗಳ ಆರೋಪದ ಮೇಲೆ ಈ ವಾರ ಬಂಧಿಸಿದ ನಂತರ ಆಮ್ ಆದ್ಮಿ ಪಕ್ಷದ (Aam Aadmi Party) ನಾಯಕ ಮನೀಶ್ ಸಿಸೋಡಿಯಾ (Manish Sisodia) ಶುಕ್ರವಾರ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ  ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ದೆಹಲಿ ಕ್ಯಾಬಿನೆಟ್‌ನಿಂದ ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಸೋಡಿಯಾ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದ ನಂತರ  ಕೆಳ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಂತಹ ವಿಷಯದಲ್ಲಿ ನಾವು ಮೊದಲ ಹಂತದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ನಿಮ್ಮ ಎಲ್ಲಾ ಅಂಶಗಳನ್ನು ನೀವು ಹೈಕೋರ್ಟಿನ ಮುಂದೆ ಹೇಳಬಹುದು ಎಂದು ಸುಪ್ರೀಂ ಹೇಳಿದ್ದು, ಕೆಳ ನ್ಯಾಯಾಲಯವನ್ನು ಸಂಪರ್ಕಿಸದೆ ನೇರ ಸುಪ್ರೀಂ ಮೆಟ್ಟಿಲು ಹತ್ತಿದ್ದಕ್ಕೆ ಅಸಮಾಧಾನವನ್ನು ಸೂಚಿಸಿತು. ನಿಮಗೆ ಸಂಪೂರ್ಣ ಪರ್ಯಾಯ ಪರಿಹಾರಗಳು ಲಭ್ಯವಿವೆ (ಆದರೆ) ನೀವು ನೇರವಾಗಿ ಈ ನ್ಯಾಯಾಲಯಕ್ಕೆ ಬಂಧನದ ವಿರುದ್ಧ ಮತ್ತು ಜಾಮೀನು ಬಯಸಿ ನ್ಯಾಯಾಲಯಕ್ಕೆ ಬಂದಿದ್ದೀರಿ. ನಾವು ಇದನ್ನು ಹೇಗೆ ಸ್ವೀಕರಿಸಲಿ ಎಂದು ಸಿಜೆಐ ಹೇಳಿದ್ದರು.

ನ್ಯಾಯಾಲಯಕ್ಕೆ ಅಧಿಕಾರ ಇಲ್ಲದಿರುವ ಬಗ್ಗೆ ಅಲ್ಲ ಪ್ರಶ್ನೆ. ನಾವು ನಿಸ್ಸಂದೇಹವಾಗಿ ಈ ಅಸಾಧಾರಣ ಅಧಿಕಾರವನ್ನು ಚಲಾಯಿಸಬೇಕೇ ಎಂಬ ಪ್ರಶ್ನೆಯನ್ನು ಹೊಂದಿದ್ದೇವೆ. ಇದು ತುಂಬಾ ತಪ್ಪು ಪೂರ್ವನಿದರ್ಶನವನ್ನು ಹೊಂದಿಸುತ್ತದೆ.”

ದೆಹಲಿ ಸರ್ಕಾರದ ಅಬಕಾರಿ ಮತ್ತು ಶಿಕ್ಷಣ ಖಾತೆಗಳನ್ನು ಹೊಂದಿರುವ ಸಿಸೋಡಿಯಾ ಸುಪ್ರೀಂಕೋರ್ಟ್ ತನ್ನ ಮನವಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ಮಂಗಳವಾರ ರಾಜೀನಾಮೆ ನೀಡಿದರು. ಮನಿ ಲಾಂಡರಿಂಗ್ ಆರೋಪದ ಮೇಲೆ ಒಂಬತ್ತು ತಿಂಗಳ ಕಾಲ ನಗರದ ತಿಹಾರ್ ಜೈಲಿನಲ್ಲಿರುವ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೂಡಾ ಅಂದೇ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ:Meghalaya Power: ಈಶಾನ್ಯದಲ್ಲಿ ಬಿಜೆಪಿಗೆ 3ಕ್ಕೆ 3: ಮೇಘಾಲಯದಲ್ಲೂ ಕಮಲಕ್ಕೆ ಸಿಗ್ತಿದೆ ಪವರ್

ಅವರ ರಾಜೀನಾಮೆಯ ಸಮಯದಲ್ಲಿ ಸಿಸೋಡಿಯಾ ಅವರು 33 ಇಲಾಖೆಗಳಲ್ಲಿ 18 ಅನ್ನು ಹೊಂದಿದ್ದರು. ಎಂಟು ಗಂಟೆಗಳ ಕಾಲ ಕೇಂದ್ರೀಯ ತನಿಖಾ ದಳದಿಂದ ವಿಚಾರಣೆ ನಡೆಸಿದ ನಂತರ ಭಾನುವಾರ ರಾತ್ರಿ ಅವರನ್ನು ಬಂಧಿಸಲಾಯಿತು. ತಮ್ಮ ಪ್ರಶ್ನೆಗಳಿಗೆ ನುಣುಚಿಕೊಳ್ಳುವ ಉತ್ತರದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ.

ದೆಹಲಿ ರೂಸ್ ಅವೆನ್ಯೂ ಕೋರ್ಟ್ ಸೋಮವಾರ ಸಿಸೋಡಿಯಾ ಅವರನ್ನು ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ.

ಸಿಸೋಡಿಯಾ ಅವರ ಬಂಧನವನ್ನು ಎಎಪಿ ಮತ್ತು ಇತರ ವಿರೋಧ ಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ, ಅವರು ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ತನ್ನ ವ್ಯಾಪ್ತಿಯಲ್ಲಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!