7.9 C
Munich
Tuesday, March 14, 2023

Aamir Khan Birthday Bollywood Superstar working out 3 hours per day | Aamir Khan Birthday: ಆಮಿರ್ ಖಾನ್ ಜನ್ಮದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಇವರು ಮಾಡುವ ಕಸರತ್ತು ನೋಡಿದರೆ ತಲೆತಿರುಗುತ್ತೆ..

ಓದಲೇಬೇಕು

ಪಾತ್ರಕ್ಕಾಗಿ ಆಮಿರ್ ಖಾನ್ ಅವರು ಬಾಡಿ ಟ್ರಾನ್ಸ್​​ಫಾರ್ಮೇಷನ್ ಮಾಡಿಕೊಳ್ಳುತ್ತಾರೆ. ‘ದಂಗಲ್’ ಸಿನಿಮಾದಲ್ಲಿ ಅವರು ಪಾತ್ರಕ್ಕಾಗಿ ಬದಲಾಗಿದ್ದು ನೋಡಿ ಅನೇಕರಿಗೆ ಅಚ್ಚರಿ ಆಗಿತ್ತು.

ಆಮಿರ್ ಖಾನ್

ನಟ ಆಮಿರ್ ಖಾನ್ (Aamir Khan Birthday) ಅವರಿಗೆ ಇಂದು (ಮಾರ್ಚ್ 14) ಬರ್ತ್​ಡೇ ಸಂಭ್ರಮ. ಅವರು 58ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಆಮಿರ್​ ಖಾನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ, ಇತ್ತೀಚೆಗೆ ಅವರು ಸಾಲು ಸಾಲು ಫ್ಲಾಪ್ ಕೊಡುತ್ತಿರುವುದರಿಂದ ಅವರ ವೃತ್ತಿಜೀವನದ ಮೈಲೇಜ್ ಕಡಿಮೆ ಆಗಿದೆ. ಸದ್ಯ ನಟನೆಯಿಂದ ಆಮಿರ್ ಖಾನ್ ಬ್ರೇಕ್ ಪಡೆದುಕೊಂಡಿದ್ದಾರೆ. ಆಮಿರ್ ಖಾನ್ ಅವರು ಫಿಟ್ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ವರ್ಕೌಟ್ ಮಾಡುತ್ತಾರೆ.

 ಪಾತ್ರಕ್ಕಾಗಿ ಬಾಡಿ ಟ್ರಾನ್ಸ್​​ಫಾರ್ಮೇಷನ್

ಪಾತ್ರಕ್ಕಾಗಿ ಆಮಿರ್ ಖಾನ್ ಅವರು ಬಾಡಿ ಟ್ರಾನ್ಸ್​​ಫಾರ್ಮೇಷನ್ ಮಾಡಿಕೊಳ್ಳುತ್ತಾರೆ. ‘ದಂಗಲ್’ ಸಿನಿಮಾದಲ್ಲಿ ಅವರು ಪಾತ್ರಕ್ಕಾಗಿ ಬದಲಾಗಿದ್ದು ನೋಡಿ ಅನೇಕರಿಗೆ ಅಚ್ಚರಿ ಆಗಿತ್ತು. ಅವರು ಈ ಪಾತ್ರಕ್ಕಾಗಿ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದರು. ಅವರಿಗೆ ದೊಡ್ಡ ಹೊಟ್ಟೆ ಕೂಡ ಬಂದಿತ್ತು. ನಂತರ ವರ್ಕೌಟ್ ಮಾಡಿ ಕರಗಿಸಿಕೊಂಡಿದ್ದರು. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅವರು 7 ಗಂಟೆ ಜಿಮ್​ನಲ್ಲಿ ಕಳೆಯುತ್ತಿದ್ದರು. ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ ಬಾಕ್ಸ್ ಆಫೀಸ್​ನಲ್ಲೂ ಒಳ್ಳೆಯ ಕಮಾಯಿ ಮಾಡಿತ್ತು.

ಆಮಿರ್ ಖಾನ್ ವರ್ಕೌಟ್

ವಾರದಲ್ಲಿ ಆಮಿರ್ ಖಾನ್ ಆರು ದಿನ ವರ್ಕೌಟ್ ಮಾಡುತ್ತಾರೆ. ನಿತ್ಯ ಅವರು ಮೂರು ಗಂಟೆ ಜಿಮ್​ನಲ್ಲಿ ಕಳೆಯುತ್ತಾರೆ. 10 ನಿಮಿಷ ಸ್ಟ್ರೆಚ್ಚಿಂಗ್​, 40 ನಿಮಿಷ ಆ್ಯಬ್ಸ್ ಹಾಗೂ ಉಳಿದ ಸಮಯ ದೇಹದ ತೂಕಕ್ಕೆ ಸಂಬಂಧಿಸಿದ ವರ್ಕೌಟ್ ಇರುತ್ತದೆ. ಸೋಮವಾರ ಚೆಸ್ಟ್, ಮಂಗಳವಾರ ಶೋಲ್ಡರ್, ಬುಧವಾರ ಬ್ಯಾಕ್, ಗುರುವಾರ ಬೈಸೆಪ್ಸ್ ಶುಕ್ರವಾರ ಟ್ರೈಸೆಪ್ ಹಾಗೂ ಶನಿವಾರ ಅವರು ಲೆಗ್ ವರ್ಕೌಟ್ ಮಾಡುತ್ತಾರೆ.

ಇದನ್ನೂ ಓದಿ‘ದಂಗಲ್’ ಚಿತ್ರಕ್ಕಾಗಿ ಕಷ್ಟಪಟ್ಟಿದ್ದ ಆಮಿರ್ ಖಾನ್

‘ದಂಗಲ್’ ಚಿತ್ರದಲ್ಲಿ ಆಮಿರ್ ಖಾನ್ ಮೊದಲು ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ನಂತರ ಅವರು ತೆಳ್ಳಗಾಗೋಕೆ ಸಾಕಷ್ಟು ಶ್ರಮ ಹಾಕಿದ್ದರು. ಬೆಟ್ಟ ಏರುತ್ತಿದ್ದರು. ಜಿಮ್​ ಮಾಡುತ್ತಿದ್ದರು. ಎರಡು ಗಂಟೆ ಸೈಕಲಿಂಗ್ ಮಾಡುತ್ತಿದ್ದರು. ಪ್ರತಿ ವಾರ ಅವರು ಎರಡು ಕೆಜಿ ದೇಹದ ತೂಕ ಕಳೆದುಕೊಳ್ಳುತ್ತಿದ್ದರು.

ಇದನ್ನೂ ಓದಿ: ‘ಲಾಲ್​ ಸಿಂಗ್ ಚಡ್ಡಾ’ ಸೋತ ಬೆನ್ನಲ್ಲೇ ಕ್ಷಮೆ ಕೇಳಿದ ಆಮಿರ್ ಖಾನ್; ಫ್ಯಾನ್ಸ್​ಗೆ ಮೂಡಿದೆ ದೊಡ್ಡ ಅನುಮಾನ

ಆಹಾರದ ಬಗ್ಗೆ ಕಾಳಜಿ

ಆಮಿರ್ ಖಾನ್ ಅವರು ಆಹಾರದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಸೆಲೆಬ್ರಿಟಿ ಡಯಟೀಶಿಯನ್ ಡಾ. ವಿನೋದ್ ಧುರಂದರ್ ಅವರು ಆಮಿರ್​ಗೆ ಯಾವ ಆಹಾರ ತೆಗೆದುಕೊಳ್ಳಬೇಕು ಎನ್ನುವ ಟ್ರೇನಿಂಗ್ ನೀಡುತ್ತಾರೆ.  ಮುಂಜಾನೆ ತಿಂಡಿಗೆ ಆಮಿರ್ ಖಾನ್ ಮೊಟ್ಟೆಯ ಬಿಳಿ ಭಾಗ ಹಾಗೂ ಹಣ್ಣು ತಿನ್ನುತ್ತಾರೆ. 10 ಗಂಟೆ ಸುಮಾರಿಗೆ ಮತ್ತೆ ಹಣ್ಣನ್ನು ತಿನ್ನುತ್ತಾರೆ. ಮಧ್ಯಾಹ್ನ ಚಿಕನ್, ತರಕಾರಿ ತಿನ್ನುತ್ತಾರೆ. ಇದರ ಜೊತೆಗೆ ರೋಟಿ, ಮೀನು, ಮೊಟ್ಟೆ ಇರುತ್ತದೆ. ಹೆಚ್ಚು ನೀರು ಕುಡಿಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!