‘ಕೋವಿಡ್ ಸಮಯದ ದೇವರುಗಳು ಇಂದು ರಸ್ತೆಯಲ್ಲಿದ್ದಾರೆ’ ಧರಣಿನಿರತ ನೌಕರರ ಪರ ನಟ ಅನಿರುದ್ಧ್ ದನಿ ಎತ್ತಿದ್ದು, ಗುತ್ತಿಗೆ ನೌಕರರ ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯ ಮಾಡಿದ್ದಾರೆ.
(ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಳಗುತ್ತಿಗೆ ನೌಕರರು ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಹಾಗೂ ಕನಿಷ್ಠ ವೇತನ ಜಾರಿಗೊಳಿಸಿರೆಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಕೂತಿದ್ದು, ನೌಕರರಿಗೆ ಬೆಂಬಲ ಸೂಚಿಸಿ ನಟ ಅನಿರುದ್ಧ್ ಅವರು ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿ ಪರ ಬೆಂಬಲ ಸೂಚಿಸಿದರು ಹಾಗೂ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು)