10.5 C
Munich
Wednesday, March 8, 2023

Actor Dhanush Faced Body Shaming In His Initial Days, Says I Used To Cry After Listening To Them | ಜನರ ಚುಚ್ಚು ಮಾತಿಗೆ ದಿನವೂ ಕಣ್ಣೀರು ಹಾಕುತ್ತಿದ್ದೆ: ಧನುಶ್

ಓದಲೇಬೇಕು

Actor Dhanush: ಇಂದು ಸ್ಟಾರ್ ಹೀರೋಗಳಲ್ಲಿ ಒಬ್ಬರೆಂದು ಗುರುತಿಸಿಕೊಳ್ಳುವ ನಟ ಧನುಶ್, ಒಂದು ಸಮಯದಲ್ಲಿ ತೀವ್ರ ವ್ಯಂಗ್ಯ, ಟ್ರೋಲ್ ಗೆ ಗುರಿಯಾಗಿದ್ದರಂತೆ. ಜನರು ತಮ್ಮ ಬಗ್ಗೆ ಆಡುತ್ತಿದ್ದ ಮಾತುಗಳು ಕೇಳಿ ದಿನವೂ ಅಳುತ್ತಿದ್ದರಂತೆ.

ತಮಿಳು ನಟ ಧನುಶ್ (Dhanush) ಈಗ ಪ್ಯಾನ್ ವರ್ಲ್ಡ್ ಸ್ಟಾರ್. ತಮಿಳು ಸಿನಿಮಾ (Kollywood) ಗಡಿ ಮೀರಿ ಹಿಂದಿ ಬಳಿಕ ಹಾಲಿವುಡ್​ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಧನುಶ್​ರ ಸಿನಿಮಾಗಳಿಗೆ ನೂರಾರು ಕೋಟಿ ಗಳಿಕೆ ಎಂಬುದು ನೀರು ಕುಡಿದಂತೆ. ಅವರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಅವರ ನಟನೆಯನ್ನು ಮೆಚ್ಚುವ ಹಲವು ಸಿನಿಮಾ ವಿಮರ್ಶಕರಿದ್ದಾರೆ. ಆದರೆ ಒಂದು ಸಮಯದಲ್ಲಿ ಇದೇ ಧನುಶ್ ತಮ್ಮ ಲುಕ್ಸ್​ನಿಂದಾಗಿ ತೀವ್ರ ಟೀಕೆಗೆ ಒಳಗಾಗಿದ್ದರಂತೆ. ಪ್ರತಿದಿನವೂ ಕಣ್ಣೀರು ಹಾಕುತ್ತಿದ್ದರಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ಬಾಡಿ ಶೇಮಿಂಗ್ (Body Shaming) ಎಂಬುವುದು ನಟಿಯರನ್ನು ಮಾತ್ರವಲ್ಲ ನಟರಲ್ಲೂ ಬಾಧಿಸಿದೆ. ಅದಕ್ಕೆ ಸ್ಟಾರ್ ನಟ ಧನುಶ್ ಉದಾಹರಣೆ. ಈಗ ಸಖತ್ ಹ್ಯಾಂಡ್ಸಮ್ ಆಗಿ ಕಾಣುವ ಧನುಶ್ ಚಿತ್ರರಂಗಕ್ಕೆ ಕಾಲಿಟ್ಟಾಗ ಹೀಗಿರಲಿಲ್ಲ. ಆಗ ಲುಕ್ಸ್, ದೇಹಾಕಾರ, ಬಣ್ಣದ ಬಗ್ಗೆ ವಿಪರೀತ ಟೀಕೆಗಳನ್ನು, ಟ್ರೋಲ್​ಗಳನ್ನು ಎದುರಿಸಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಧನುಶ್, ”ನಾನು ‘ಕಾದಲ್ ಕೊಂಡೇನ್’ ಸಿನಿಮಾ ಮಾಡುವಾಗ ಸೆಟ್​ನಲ್ಲಿ ಯಾರಾದರೂ ಯಾರು ಹೀರೋ ಎಂದು ಕೇಳಿದರೆ, ನಾನು ಬೇರೆಯವರನ್ನು ತೋರಿಸುತ್ತಿದ್ದೆ. ಅಷ್ಟು ಕೀಳರಿಮೆಯಿಂದ ಕೊರಗುತ್ತಿದ್ದೆ. ಆದರೆ ನಾನೇ ಹೀರೋ ಎಂದು ತಿಳಿದಾಗ ಅವರು ನನ್ನನ್ನು ವ್ಯಂಗ್ಯ ಮಾಡುತ್ತಿದ್ದರು. ನನ್ನ ಆಕಾರ, ಬಣ್ಣ ಕಂಡು ನನ್ನನ್ನು ಆಟೋ ಡ್ರೈವರ್ ಎಂದು ಕರೆಯುತ್ತಿದ್ದರು. ಆಟೋ ಡ್ರೈವರ್ ನಟನಾಗಲು ಬಂದಿದ್ದಾನೆ ಎನ್ನುತ್ತಿದ್ದರು” ಎಂದು ನೆನಪು ಮಾಡಿಕೊಂಡಿದ್ದಾರೆ.

”ಆಗೆಲ್ಲ ನನಗೆ ಬಹಳ ದುಃಖವಾಗುತ್ತಿತ್ತು, ಆಗ ನಾನಿನ್ನೂ ಚಿಕ್ಕವನು, ಅವರಿಗೆ ಎದುರು ಹೇಳುವ ಧೈರ್ಯ ನನಗೆ ಇರಲಿಲ್ಲ. ಹಾಗಾಗಿ ನಾನು ಕಾರಿನಲ್ಲಿ ಕುಳಿತು ಜೋರಾಗಿ ಅಳುತ್ತಿದ್ದೆ. ನನ್ನನ್ನು ಗೇಲಿ ಮಾಡದ ಒಬ್ಬೇ ಒಬ್ಬ ವ್ಯಕ್ತಿಯೂ ಆ ಸಿನಿಮಾದ ಸೆಟ್​ನಲ್ಲಿ ಇರಲಿಲ್ಲ” ಎಂದು ಬೇಸರದಿಂದ ಹೇಳಿದ್ದಾರೆ ನಟ ಧನುಶ್. ಅದೇ ಸಮಯಕ್ಕೆ ಅವರಿಗೆ ಅನ್ನಿಸಿತಂತೆ, ಯಾಕೆ ಒಬ್ಬ ಆಟೋ ಡ್ರೈವರ್ ಸಹ ಹೀರೋ ಆಗಬಾರದು ಎಂದು.

ಆರಂಭದ ಸಮಯದಲ್ಲಿ ಧನುಶ್ ತಮ್ಮ ಲುಕ್ಸ್​ಗಳಿಂದಾಗಿ ತೀವ್ರ ಟೀಕೆ, ಟ್ರೋಲ್​ಗಳನ್ನು ಎದುರಿಸಿದ್ದರು. ಸಣ್ಣನೆ ದೇಹದ, ಕೋಲು ಮುಖದ, ಕಪ್ಪು ಬಣ್ಣದ ಧನುಶ್ ಹೀರೋ ಮೆಟಿರಿಯಲ್ ಅಲ್ಲ ಎಂದು ಕೆಲವು ಪತ್ರಿಕೆಗಳು ಸಹ ಬರೆದಿದ್ದವು. ಆದರೆ ನಟ ಧನುಶ್ ತಮ್ಮನ್ನು ಟೀಕಿಸಿದ ಎಲ್ಲರನ್ನೂ ಸುಳ್ಳು ಮಾಡಿ ದೊಡ್ಡ ಸ್ಟಾರ್ ನಟನಾಗಿ ಬೆಳೆದರು.

‘ಹೀರೋ ಲುಕ್’ ಇಲ್ಲದ ಕಾರಣದಿಂದಲೇ ಹೀರೋ ಪಾತ್ರಗಳ ಜೊತೆಗೆ ಭಿನ್ನ ಮಾದರಿಯ ಪಾತ್ರಗಳನ್ನು ಮಾಡುತ್ತಾ, ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತ ಬಂದ ಧನುಶ್ ತಮಿಳಿನ ತಮ್ಮ ಸಮಕಾಲೀನ ನಟರಿಗಿಂತಲೂ ಹೆಚ್ಚು ಯಶಸ್ಸನ್ನು, ವಿಮರ್ಶಕರಿಂದ ಪ್ರಶಂಸೆಗಳನ್ನು ಪಡೆದುಕೊಂಡರು. ಅವರ ನಟನೆಗೆ ಮೆಚ್ಚಿ ಬಾಲಿವುಡ್, ಹಾಲಿವುಡ್ ನಿಂದಲೂ ಅವಕಾಶಗಳು ಅವರನ್ನು ಅರಸಿ ಬಂದವು. ತಂದೆಯ ಬೆಂಬಲದಿಂದಲೇ ಧನುಶ್ ಚಿತ್ರರಂಗಕ್ಕೆ ಬಂದರಾದರೂ ಇಲ್ಲಿ ನೆಲೆಗೊಂಡಿದ್ದು ಮಾತ್ರ ಸ್ವಂತ ಬಲದಿಂದಲೇ.

ಧನುಶ್ ನಟಿಸಿರುವ ‘ವಾತಿ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಕೆಲವೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿಕೊಂಡಿದೆ. ‘ಕ್ಯಾಪ್ಟನ್ ಮಿಲ್ಲರ್’ ಹೆಸರಿನ ಸಿನಿಮಾದಲ್ಲಿ ಧನುಶ್ ನಟಿಸುತ್ತಿದ್ದು ಈ ಸಿನಿಮಾದಲ್ಲಿ ಶಿವಣ್ಣ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಲಾನಿಧಿ ಮಾರನ್ ನಿರ್ಮಾಣದ ‘ರಾಯನ್’ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ಧನುಶ್. ಇದರ ನಡುವೆ ತೆಲುಗಿನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಇನ್ನೂ ಹೆಸರಿಡದ ದ್ವಿಭಾಷಾ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಸಾಯಿ ಪಲ್ಲವಿ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!