10.3 C
Munich
Thursday, March 23, 2023

Actor, Politician Pawan Kalyan Reveled His Remuneration He Charge 2 Crore Rs Per Day Of Shooting | Pawan Kalyan: ತಮ್ಮ ಸಂಭಾವನೆ ಮೊತ್ತವನ್ನು ತಾವೇ ಬಹಿರಂಗಪಡಿಸಿದ ನಟ ಪವನ್ ಕಲ್ಯಾಣ್

ಓದಲೇಬೇಕು

ಸ್ಟಾರ್ ನಟರು ಭಾರಿ ಮೊತ್ತದ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ ಆದರೆ ಅವೆಲ್ಲ ಅಧಿಕೃತ ಆಗಿರುವುದಿಲ್ಲ. ಇದೀಗ ನಟ ಪವನ್ ಕಲ್ಯಾಣ್, ತಾವು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು ಎಂಬುದನ್ನು ಅವರೇ ಬಹಿರಂಗಗೊಳಿಸಿದ್ದಾರೆ.

ಪವನ್ ಕಲ್ಯಾಣ್

ಸಿನಿಮಾ ನಟರ ಅದರಲ್ಲಿಯೂ ಸ್ಟಾರ್ ನಟರ ಸಂಭಾವನೆ (Remunearation) ಬಗ್ಗೆ ಆಗಾಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಆ ಸ್ಟಾರ್ ನಟ, ಆ ಸಿನಿಮಾಕ್ಕಾಗಿ ನೂರು ಕೋಟಿ ಪಡೆದರಂತೆ. ಶಾರುಖ್ ಖಾನ್ (Shah Rukh Khan) ತಮ್ಮ ಸಿನಿಮಾಕ್ಕೆ 200 ಕೋಟಿ ಪಡೆದರಂತೆ ಇತರೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ ಇವ್ಯಾವುವೂ ಅಧಿಕೃತವಲ್ಲ. ಆದರೆ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ನಟ ಪವನ್ ಕಲ್ಯಾಣ್, ತಮ್ಮ ಸಂಭಾವನೆ ಎಷ್ಟು? ಒಂದು ಸಿನಿಮಾಕ್ಕೆ ತಾವು ಎಷ್ಟು ಕೋಟಿ ಹಣ ಪಡೆಯುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಪವನ್ ಹೇಳಿರುವ ಮೊತ್ತ ಹುಬ್ಬೇರುವಂತೆ ಮಾಡಿದೆ.

ರಾಜಕಾರಣಿಯೂ ಆಗಿರುವ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿ ಮುಂದಿನ ಆಂಧ್ರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಜ್ಜಾಗಿದ್ದಾರೆ. ಇತ್ತೀಚೆಗೆ ಪವನ್ ಕಲ್ಯಾಣ್, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಜೊತೆ ಕೈ ಸೇರಿಸಿದ್ದಾರೆ. ಪವನ್​ರ ಈ ನಡೆಯನ್ನು ಟೀಕಿಸುತ್ತಲೇ ಬರುತ್ತಿರುವ ಆಂಧ್ರದ ಆಡಳಿತ ಪಕ್ಷದ ನಾಯಕರು, ಹಣಕ್ಕಾಗಿ ಪವನ್ ಕಲ್ಯಾಣ್ ಚಂದ್ರಬಾಬು ನಾಯ್ಡು ಜೊತೆ ಸೇರಿದ್ದಾರೆ, ಅವರೊಬ್ಬ ಪ್ಯಾಕೆಜ್ ಸ್ಟಾರ್ ಎಂದು ಹಿಯಾಳಿಸಿದ್ದಾರೆ.

ಆಡಳಿತ ಪಕ್ಷಗಳ ಹೀಗಳಿಕೆಗೆ ಈ ಹಿಂದೆಯೇ ಒಮ್ಮೆ ಕಠುವಾಗಿ ಪ್ರತ್ಯುತ್ತರ ನೀಡಿದ್ದ ಪವನ್ ಕಲ್ಯಾಣ್, ಇತ್ತೀಚೆಗೆ ತಮ್ಮ ಪಕ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ”ಹಣ ಎಂಬುದು ನನಗೆ ಪ್ರಮುಖ ವಿಷಯವೇ ಅಲ್ಲ. ನಾನು ಈಗಾಗಲೇ ದೊಡ್ಡ ಮೊತ್ತದ ಹಣ ಸಂಪಾದನೆ ಮಾಡುತ್ತಿದ್ದೇನೆ. ಇತ್ತೀಚೆಗೆ ನಾನು ಸಿನಿಮಾ ಒಂದರಲ್ಲಿ ನಟಿಸಿದೆ. ಆ ಸಿನಿಮಾಕ್ಕಾಗಿ 22 ದಿನಗಳ ಕಾಲ ನಾನು ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ಒಂದು ದಿನಕ್ಕೆ ನಾನು ಎರಡು ಕೋಟಿ ಸಂಭಾವನೆ ಪಡೆಯುತ್ತೇನೆ. 22 ದಿನಕ್ಕೆ 44 ಕೋಟಿ ಸಂಪಾದನೆ ಮಾಡಿದೆ. ಸಿನಿಮಾಗಳಿಂದಲೇ ನನಗೆ ಅಗತ್ಯಕ್ಕಿಂತಲೂ ಹೆಚ್ಚು ಹಣ ಬರುತ್ತದೆ, ಬೇರೆ ಹಣಕ್ಕೆ ಆಸೆಪಡುವ ಅಗತ್ಯವೇ ಇಲ್ಲ” ಎಂದರು ಪವನ್ ಕಲ್ಯಾಣ್.

ಸಿನಿಮಾಗಳಲ್ಲಿ ಇಷ್ಟು ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಕ್ಕೆ ಅಭಿಮಾನಿಗಳೇ ಕಾರಣ ಎಂದು ಹೇಳಿದ ನಟ ಪವನ್ ಕಲ್ಯಾಣ್, ”ತಮ್ಮ ಸಂಭಾವನೆಯು ಸಿನಿಮಾದಿಂದ ಸಿನಿಮಾಕ್ಕೆ ಬದಲಾಗುತ್ತಲೇ ಇರುತ್ತದೆ” ಎಂದೂ ಸಹ ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡುತ್ತಾ, ”ಎಲ್ಲ ಜಾತಿಯ, ಧರ್ಮದ ಅಭಿಮಾನಿಗಳು ನನಗೆ ಇದ್ದಾರೆ. ಅದನ್ನು ನಾನು ದೇವರ ದಯೆ ಎಂದೇ ಭಾವಿಸುತ್ತೇನೆ. ನಾನು ಹೋದಲ್ಲೆಲ್ಲ ಲಕ್ಷಾಂತರ ಜನ ಸೇರುತ್ತಾರೆ ಆದರೆ ಮತ ಚಲಾಯಿಸುವ ವಿಷಯ ಬಂದಾಗ ಮಾತ್ರ ನನ್ನ ಜಾತಿಯವನಿಗೇ ಮತ ನೀಡುತ್ತೇನೆ ಎಂದು ಹೇಳುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪವನ್ ಕಲ್ಯಾಣ್ ಪ್ರಸ್ತುತ ‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಬಳಿಕ ಇನ್ನೂ ಹೆಸರಿಡದ ಎರಡು ಸಿನಿಮಾಗಳಿಗೆ ನಟಿಸಲಿದ್ದಾರೆ. ಪ್ರಸ್ತುತ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ಪವನ್ ಸಜ್ಜಾಗಿದ್ದು ತುರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!