1.2 C
Munich
Thursday, March 16, 2023

Actor Salaman Yusuff Khan Abuse Airport Official Who Questioned Him For Not Knowing Kannada Despite Being A Bengalurian | ‘ಬೆಂಗಳೂರಿಗನಾಗಿ ಕನ್ನಡ ಗೊತ್ತಿಲ್ವ’ ಎಂದ ಅಧಿಕಾರಿಯನ್ನು ನಿಂದಿಸಿದ ನಟ

ಓದಲೇಬೇಕು

ಬೆಂಗಳೂರಿಗನಾಗಿ ಕನ್ನಡ ಬರೋಲ್ವ ಎಂದು ಪ್ರಶ್ನಿಸಿದ ಏರ್​ಪೋರ್ಟ್ ಅಧಿಕಾರಿಯನ್ನು ಅನಕ್ಷರಸ್ಥ ಪಶು ಎಂದು ನಟನೊಬ್ಬ ನಿಂದಿಸಿದ್ದಾನೆ. ಅದು ಮಾತ್ರವೇ ಅಲ್ಲದೆ ಘಟನೆ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡು ‘ಧೈರ್ಯ ಪ್ರದರ್ಶಿಸಿ’ ಎಂದು ಉಪದೇಶ ಮಾಡಿದ್ದಾನೆ.

ಸಲ್ಮಾನ್ ಯೂಸುಫ್ ಖಾನ್

ಉತ್ತರದಿಂದ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದವರು ‘ಕನ್ನಡ್ ಗೊತ್ತಿಲ್ಲ’ ಎಂದರೆ ಅರ್ಥ ಮಾಡಿಕೊಳ್ಳಬಹುದು ಆದರೆ ಬೆಂಗಳೂರಿನಲ್ಲಿಯೇ (Bengaluru) ಜನಿಸಿ, ಇಲ್ಲಿಯೇ ನೆಲೆಸಿರುವ ನಟನೋರ್ವ ತಮಗೆ ಕನ್ನಡ ಬರುವುದಿಲ್ಲವೆಂದಿದ್ದಾರೆ ಮಾತ್ರವಲ್ಲ ಅವರ ಭಾಷಾ ಪ್ರೇಮದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಧಿಕಾರಿಯೊಬ್ಬರನ್ನು ನಿಂದಿಸಿದ್ದು ಮಾತ್ರವಲ್ಲದೆ ಅದನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ.

ಡ್ಯಾನ್ಸರ್, ಕೊರಿಯಾಗ್ರಾಫರ್ ಹಾಗೂ ನಟರಾಗಿರುವ ಸಲ್ಮಾನ್ ಯೂಸುಫ್ ಖಾನ್ (Salman Yusuff Khan) ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಯೊಬ್ಬರು ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾಗಿ ಹೇಳಿದ್ದಾರೆ. ಅಲ್ಲದೆ, ಆ ಅಧಿಕಾರಿಯನ್ನು ಅನಕ್ಷರಸ್ತ ಪಶು, ಇಂಥಹಾ ಅನಕ್ಷರಸ್ತರಿಂದಲೇ ಈ ದೇಶ ಅಭಿವೃದ್ಧಿ ಆಗುತ್ತಿಲ್ಲ ಎಂದು ವಿಡಿಯೋದಲ್ಲಿ ನಿಂದಿಸಿದ್ದಾರೆ.

ವಿಡಿಯೋದಲ್ಲಿ ಸಲ್ಮಾನ್ ಹೇಳಿರುವಂತೆ ಆಗಿರುವುದಿಷ್ಟು, ದುಬೈಗೆ ತೆರಳಲು ಸಲ್ಮಾನ್ ಯೂಸುಫ್ ಖಾನ್ ಏರ್​ಪೋರ್ಟ್​ಗೆ ತೆರಳಿ ಸೆಕ್ಯುರಿಟಿ ಚೆಕ್ ಮಾಡಿಸುತ್ತಿದ್ದಾಗ ಅವರ ಪಾಸ್​ಪೋರ್ಟ್​ ನೋಡಿದ ಅಧಿಕಾರಿ ಬೆಂಗಳೂರಿನವರೇ ಆದ ಸಲ್ಮಾನ್ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ. ಆಗ ಸಲ್ಮಾನ್ ತಮಗೆ ಕನ್ನಡ ಬರುವುದಿಲ್ಲ ಎಂದಿದ್ದಾರೆ. ಆಗ ಅಧಿಕಾರಿ, ನೀವು ಹುಟ್ಟಿರುವುದು ಬೆಂಗಳೂರಿನಲ್ಲಿ, ನಿಮ್ಮ ತಂದೆ ಹುಟ್ಟಿರುವುದು ಬೆಂಗಳೂರಿನಲ್ಲಿ ಆದರೂ ನಿಮಗೆ ಕನ್ನಡ ಬರುವುದಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಲ್ಮಾನ್ ನಾನು ಸೌದಿ ಹುಡುಗ, ನಾನು ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಶಾಲೆ ಕಲಿತಿದ್ದು ಸೌದಿನಲ್ಲಿ ಹಾಗಾಗಿ ನಾನು ಕನ್ನಡ ಕಲಿತಿಲ್ಲ ಎಂದಿದ್ದಾರೆ. ಆಗ ಅಧಿಕಾರಿ, ನಿಮಗೆ ಕನ್ನಡ ಬರುವುದಿಲ್ಲ ಎಂದಾದರೆ ನನಗೆ ಅನುಮಾನ ಬರುತ್ತಿದೆ ಎಂದಿದ್ದಾರೆ. ಇದಕ್ಕೆ ಸಿಟ್ಟಾದ ಸಲ್ಮಾನ್, ನನ್ನನ್ನು ಅನುಮಾನಿಸುತ್ತಿದ್ದೀರಾ? ಏಕೆ ಅನುಮಾನಿಸುತ್ತಿದ್ದೀರ? ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ಸಲ್ಮಾನ್ ಜೋರು ಧ್ವನಿಯಲ್ಲಿ ಮಾತನಾಡಿದ ಕೂಡಲೆ ಅಧಿಕಾರಿ ಸುಮ್ಮನಾಗಿದ್ದಾರಂತೆ. ಹೀಗೆಂದು ಸಲ್ಮಾನ್ ವಿಡಿಯೋದಲ್ಲಿ ಹೇಳಿದ್ದಾರೆ.

ಮುಂದುವರೆದು, ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡ ಬರಲೇ ಬೇಕು ಎಂಬ ನಿಯಮ ಇದೆಯೇ? ನಾನು ಬೆಂಗಳೂರಿನವನೇ ಆದರೆ ವಿಶ್ವದ ನಾನಾ ಕಡೆ ಟ್ರಾವೆಲ್ ಮಾಡುವ ಹಕ್ಕು ನನಗೆ ಇದೆ. ಈ ರೀತಿಯ ಅನಕ್ಷರಸ್ತ ಜನರು ಈ ದೇಶದಲ್ಲಿ ಇರುವವ ವರೆಗೆ ಈ ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ನನಗೆ ಬಹಳ ಸಿಟ್ಟು ಬಂತು. ನನ್ನದೇ ನಗರದಲ್ಲಿ ನನ್ನನ್ನು ನಾನು ಸಾಬೀತುಪಡಿಸಬೇಕಾಗಿ ಬಂದಿದೆ. ಈ ನಗರದಲ್ಲಿ ಹುಟ್ಟಿದೆ, ಈ ನಗರಕ್ಕೆ ನನ್ನ ಯೋಗದಾನವೂ ಇದೆ. ನಗರಕ್ಕಾಗಿ ಹಲವು ವೇದಿಕೆಗಳಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. ಆದರೆ ಈಗ ನಾನು ಭಾರತೀಯ ಎಂಬುದನ್ನು ನಾನು ಪ್ರೂವ್ ಮಾಡಬೇಕಾದ ಪರಿಸ್ಥಿತಿ ಬಂದಿದೆ. ನಾನು ಆ ವ್ಯಕ್ತಿಗೆ ಹೇಳಿದೆ, ನಮ್ಮ ಮಾತೃಭಾಷೆ ಹಿಂದೆ, ಆ ಭಾಷೆ ನನಗೆ ಬರುತ್ತದೆ ಅದು ಸಾಕಲ್ಲವೆ ಎಂದು. ಪ್ರಧಾನಿ ನರೇಂದ್ರ ಮೋದಿಗೆ ಕನ್ನಡದಲ್ಲಿ ಮಾತನಾಡುತ್ತಲು ಬರುತ್ತದೆಯೇ? ಈ ಅನಕ್ಷರಸ್ಥ ಪಶುಗಳಿಗೆ ಏನು ಹೇಳುವುದು? ನಾನು ಆ ಅಧಿಕಾರಿಯ ವಿರುದ್ಧ ದೂರು ನೀಡಲು ಯತ್ನಿಸಿದೆ ಆದರೆ ಯಾರೂ ನನಗೆ ಸರಿಯಾದ ಮಾಹಿತಿ ನೀಡಲಿಲ್ಲ ಎಂದಿದ್ದಾರೆ ನಟ ಸಲ್ಮಾನ್.

ಸಲ್ಮಾನ್ ಬೆಂಗಳೂರಿನವರೇ ಆಗಿದ್ದಾರೆ. ಅವರ ತಂದೆಯೂ ಹಲವು ವರ್ಷಗಳಿಂದಲೂ ಇಲ್ಲಿಯೇ ನೆಲೆಸಿರುವವರಾಗಿದ್ದಾರೆ. ಸಲ್ಮಾನ್ ಉತ್ತಮ ಡ್ಯಾನ್ಸರ್ ಆಗಿದ್ದು ಹಿಂದಿಯ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ.

ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!