7.3 C
Munich
Saturday, April 1, 2023

Additional Central assistance Under NDRF to five States Karnataka to get 941 Crore Rupees | NDRF Assistance: ಕರ್ನಾಟಕಕ್ಕೆ ಹೆಚ್ಚುವರಿ 941 ಕೋಟಿ ರೂ. ಹಣಕಾಸು ನೆರವು ಘೋಷಿಸಿದ ಕೇಂದ್ರ

ಓದಲೇಬೇಕು

ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ ಅಡಿಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 941.04 ಕೋಟಿ ರೂ. ಹೆಚ್ಚುಚವರಿ ಅನುದಾನ ಘೋಷಿಸಿದೆ. ಅಸ್ಸಾಂ, ಹಿಮಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್​ಗಳಿಗೂ ಹೆಚ್ಚುವರಿ ಅನುದಾನ ಘೋಷಿಸಲಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ (NDRF) ಅಡಿಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ (Karnataka) 941.04 ಕೋಟಿ ರೂ. ಹೆಚ್ಚುಚವರಿ ಅನುದಾನ ಘೋಷಿಸಿದೆ. ಅಸ್ಸಾಂ, ಹಿಮಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್​ಗಳಿಗೂ ಹೆಚ್ಚುವರಿ ಅನುದಾನ ಘೋಷಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಐದು ರಾಜ್ಯಗಳಿಗೆ ಒಟ್ಟು 1,816.162 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 2022ರಲ್ಲಿ ಸಂಭವಿಸಿದ ಪ್ರವಾಹ, ಭೂಕುಸಿತ, ಮೇಘಸ್ಫೋಟ ಮತ್ತಿತರ ಪ್ರಾಕೃತಿಕ ವಿಪತ್ತುಗಳನ್ನು ಗಮನದಲ್ಲಿಟ್ಟುಕೊಂಡು ಈ ಅನುದಾನ ಘೋಷಿಸಲಾಗಿದೆ. ಪ್ರಾಕೃತಿಕ ವಿಕೋಪಗಳನ್ನು ಎದುರಿಸಿದ ಐದು ರಾಜ್ಯಗಳ ಜನರಿಗೆ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಹೊಂದಿರುವ ಒಲವನ್ನು ಇದು ತೋರಿಸಿಕೊಟ್ಟಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

ಕರ್ನಾಟಕಕ್ಕೇ ಹೆಚ್ಚು ಅನುದಾನ

ಕರ್ನಾಟಕಕ್ಕೆ 941.04 ಕೋಟಿ ರೂ, ಅಸ್ಸಾಂಗೆ 520.466 ಕೋಟಿ ರೂ, ಹಿಮಾಚಲ ಪ್ರದೇಶಕ್ಕೆ 239.3 ಕೋಟಿ ರೂ, ಮೇಘಾಲಯಕ್ಕೆ 47.326 ಕೋಟಿ ರೂ, ನಾಗಾಲ್ಯಾಂಡ್​ಗೆ 68.02 ಕೋಟಿ ರೂ. ದೊರೆಯಲಿದೆ.

ಈ ಹೆಚ್ಚುವರಿ ನೆರವು ಈಗಾಗಲೇ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಲ್ಲಿ (SDRF) ಮೀಸಲಿಟ್ಟಿರುವುದನ್ನು ಹೊರತುಪಡಿಸಿದ್ದಾಗಿದೆ. 2022-23ನೇ ಸಾಲಿನಲ್ಲಿ 25 ರಾಜ್ಯಗಳಿಗೆ ಎಸ್​​ಡಿಆರ್​ಎಫ್ ಅಡಿ 15,770.40 ಕೋಟಿ ರೂ ಹಾಗೂ ಎನ್​ಡಿಆರ್​​ಎಫ್ ಅಡಿ ನಾಲ್ಕು ರಾಜ್ಯಗಳಿಗೆ 502.744 ಕೋಟಿ ರೂ. ಅನುದಾನ ನೀಡಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಹೆಚ್ಚುವರಿ ಅನುದಾನ ಘೋಷಿಸಿರುವುದು ಗಮನಾರ್ಹ.

ಇದನ್ನೂ ಓದಿ: ಆರ್ಥಿಕವಾಗಿ ಶಕ್ತಿ ಇಲ್ಲ ಸರ್, ನಿಮ್ಮೊಂದಿಗೆ ನಾವಿದ್ದೇವೆ: ವೈಎಸ್​ವಿ ದತ್ತರಿಗೆ 101 ರೂ. ಹಣ ಕಳುಹಿಸಿದ ಅಭಿಮಾನಿ

ಕೇಂದ್ರ ಸರ್ಕಾರ ಉತ್ತರದ ರಾಜ್ಯಗಳಿಗೆ ವಿಶೇಷ ಹಣಕಾಸು ಅನುದಾನಗಳನ್ನು ನೀಡುತ್ತಿದ್ದು, ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳಿವೆ. ಜಿಎಸ್​ಟಿ ಪಾಲು ವಿಚಾರದಲ್ಲಿಯೂ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅನೇಕ ಬಾರಿ ಆಕ್ರೋಶ ವ್ಯಕ್ತಪಡಿಸಿವೆ. ಈ ಎಲ್ಲೆ ಬೆಳವಣಿಗೆಗಳ ಮಧ್ಯೆಯೇ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಹಠಾತ್ ನಿರ್ಧಾರ ಕೈಗೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!