10.1 C
Munich
Thursday, March 9, 2023

Afghanistan most repressive country for women, Security Council hears | Repressive Country For Women: ಮಹಿಳಾ ಹಕ್ಕುಗಳ ದಮನ, ಯಾವ ದೇಶದಲ್ಲಿ ಹೆಚ್ಚು? ವಿಶ್ವಸಂಸ್ಥೆ ನೀಡಿರುವ ಮಾಹಿತಿ ಇಲ್ಲಿದೆ

ಓದಲೇಬೇಕು

ಮಹಿಳೆಯರ ಹಕ್ಕುಗಳಿಗಾಗಿ ಸಾಕಷ್ಟು ದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತದೆ. ಯಾವ ದೇಶದಲ್ಲಿ ಮಹಿಳಾ ಹಕ್ಕುಗಳನ್ನು ಹೆಚ್ಚು ಹತ್ತಿಕ್ಕಲಾಗುತ್ತಿದೆ ಎನ್ನುವ ಕುರಿತು ವಿಶ್ವ ಸಂಸ್ಥೆ ವರದಿಯೊಂದನ್ನು ಸಿದ್ಧಪಡಿಸಿದೆ

ಅಫ್ಘಾನಿಸ್ತಾನದ ವಿದ್ಯಾರ್ಥಿನಿಯರು

ಮಹಿಳೆಯರ ಹಕ್ಕುಗಳಿಗಾಗಿ ಸಾಕಷ್ಟು ದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತದೆ. ಯಾವ ದೇಶದಲ್ಲಿ ಮಹಿಳಾ ಹಕ್ಕುಗಳನ್ನು ಹೆಚ್ಚು ಹತ್ತಿಕ್ಕಲಾಗುತ್ತಿದೆ ಎನ್ನುವ ಕುರಿತು ವಿಶ್ವ ಸಂಸ್ಥೆ ವರದಿಯೊಂದನ್ನು ಸಿದ್ಧಪಡಿಸಿದೆ.ಅದರ ಪ್ರಕಾರ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಮಹಿಳೆಯರು ಮತ್ತು ಬಾಲಕಿಯರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದು, ಅಫ್ಘಾನಿಸ್ತಾನವು ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ವಿಶ್ವದ ಅತ್ಯಂತ ಗಮನಕಾರಿ ದೇಶವಾಗಿದೆ ಎಂದು ಹೇಳಿದೆ.

2021ರ ಆಗಸ್ಟ್​ನಲ್ಲಿ ಮತ್ತೆ ಅಧಿಕಾರ ಪಡೆಯುವುದಕ್ಕೂ ಮುನ್ನ ನೀಡಿದ್ದ ಮಾತುಗಳನ್ನು ಗಾಲಿಗೆ ತೂರಿ ಅದಕ್ಕೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ.

ಅಫ್ಘಾನಿಸ್ತಾನದ ಹೊಸ ಆಡಳಿತಗಾರರು ಮಹಿಳೆಯರು ಮತ್ತು ಬಾಲಕಿಯರನ್ನು ಅವರ ಮನೆಯೊಳಗೆ ನಿರ್ಬಂಧಿಸುವ ಮೂಲಕ ಮಹಿಳೆಯರ ಹಕ್ಕುಗಳನ್ನು ದಮನಿಸುವ ಉದ್ದೇಶಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

ಮತ್ತಷ್ಟು ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಉದ್ಯೋಗಿಗಳು ಗಡ್ಡ ಬಿಡುವುದು ಕಡ್ಡಾಯ; ಸೂಟ್ ಧರಿಸಿದವರಿಗೆ ನೋ ಎಂಟ್ರಿ!

ಹೆಣ್ಣುಮಕ್ಕಳು 6ನೇ ತರಗತಿ ಬಳಿಕ ಶಿಕ್ಷಣವನ್ನು ಮುಂದುವರೆಸುವಂತಿಲ್ಲ, ಮಹಿಳೆಯರು ಪಾರ್ಕ್​ ಮತ್ತು ಜಿಮ್​ನಂತಹ ಸಾರ್ವಜನಿಕ ಪ್ರದೇಶಗಳಿಗೆ ತೆರಳುವಂತಿಲ್ಲ. ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಿಲ್ಲ. ಮಹಿಳೆಯರು ತಲೆಯಿಂದ ಪಾದದವರೆಗೆ ಸಂಪೂರ್ಣವಾಗಿ ಮೈ ಮುಚ್ಚಿಕೊಂಡಿರಬೇಕು.

ಅಫ್ಘಾನಿಸ್ತಾನದಲ್ಲಿ 11.6 ದಶಲಕ್ಷ ಮಹಿಳೆಯರು ಮತ್ತು ಬಾಲಕಿಯರು ಮಾನವೀಯ ನೆರವಿನ್ನು ಬಯಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ತಾಲಿಬಾನ್ ಭದ್ರತಾ ಸಿಬ್ಬಂದಿ ಜಲಾಲಾಬಾದ್‌ನ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಕಾವಲು ನಿಂತಿದ್ದರು, ಮಾನವ ಹಕ್ಕುಗಳ ಮೇಲಿನ ಮತ್ತೊಂದು ದಾಳಿಯಲ್ಲಿ ರಾಷ್ಟ್ರದ ತಾಲಿಬಾನ್ ಆಡಳಿತಗಾರರು ಉನ್ನತ ಶಿಕ್ಷಣದಿಂದ ಮಹಿಳೆಯರನ್ನು ನಿಷೇಧಿಸಿದ ಬಳಿಕ ನೂರಾರು ಯುವತಿಯರನ್ನು ಅಫ್ಘಾನ್ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಿಗೆ ಪ್ರವೇಶಿಸದಂತೆ ಶಸ್ತ್ರಸಜ್ಜಿತ ಕಾವಲುಗಾರರು ತಡೆದಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!