1.8 C
Munich
Thursday, March 2, 2023

After the announcement of elections, Priyanka, Rahul campaign in the state; Satish Jarkiholi | ಚುನಾವಣೆ ಘೋಷಣೆ ಬಳಿಕ ಪ್ರಿಯಾಂಕಾ, ರಾಹುಲ್​ರಿಂದ ರಾಜ್ಯದಲ್ಲಿ ಪ್ರಚಾರ: ಸತೀಶ್ ಜಾರಕಿಹೊಳಿ

ಓದಲೇಬೇಕು

ಚುನಾವಣೆ ಘೋಷಣೆಯಾದಾಗ ಪ್ರಿಯಾಂಕಾ ಗಾಂಧಿ ಸೇರಿದಂತೆ ನಮ್ಮ ರಾಷ್ಟ್ರೀಯ ನಾಯಕರು ಬರುತ್ತಾರೆ ಎಂದು KPCC ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಯಾದಗಿರಿ: ಚುನಾವಣೆ (elections) ಘೋಷಣೆಯಾದಾಗ ಪ್ರಿಯಾಂಕಾ ಗಾಂಧಿ ಸೇರಿದಂತೆ ನಮ್ಮ ರಾಷ್ಟ್ರೀಯ ನಾಯಕರು ಬರುತ್ತಾರೆ ಎಂದು KPCC ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು. ಜಿಲ್ಲೆಯ ಮಗದಂಪೂರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅಧಿಕಾರ ಕಳೆದುಕೊಳ್ಳುತ್ತೇವೆ ಅಂತಾ ಬಿಜೆಪಿ ನಾಯಕರು ಹೆದರಿದ್ದಾರೆ. ಸೋಲುವ ಭೀತಿ, ಭಯದಿಂದ ಬಿಜೆಪಿಯವರು ಪದೇಪದೆ ಬರುತ್ತಿದ್ದಾರೆ. ನಮ್ಮ ಯೋಜನೆಗಳನ್ನು ಪ್ರಧಾನಿ ನರೆಂದ್ರ ಮೋದಿ ಉದ್ಘಾಟನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್​ ಟಿಕೆಟ್ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಆಯ್ಕೆಗೆ ಮಾರ್ಚ್ 8 ಮತ್ತು 9 ರಂದು ದೆಹಲಿಯಲ್ಲಿ ಸಭೆ ಇದೆ. ಒಂದು ಹಂತಕ್ಕೆ ತೀರ್ಮಾನ ಮಾಡ್ತಾರೆ. ಸಚಿವ ನಾರಾಯಣಗೌಡ ಕಾಂಗ್ರೇಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಬೇರೆ ಜೆಡಿಎಸ್ ನಾಯಕರು ಪಕ್ಷಕ್ಕೆ ಸೇರ್ತಿದ್ದಾರೆ. ದಿನಾಂಕ 5 ರಂದು ಒಬ್ಬರು ಕಾಂಗ್ರೆಸ್​ಗೆ ಸೇರ್ಪಡೆ ಆಗ್ತಿದ್ದಾರೆ. ಹಂತ ಹಂತವಾಗಿ ಬೇರೆ ಬೇರೆ ಪಕ್ಷದ ಶಾಸಕರು ಸೇರ್ಪಡೆ ಆಗ್ತಾರೆ. ಜೆಡಿಎಸ್​ನವರು ಯಾರು ಸೇರ್ಪಡೆ ಆಗ್ತಾರೆ ಅಂತ ಅಧ್ಯಕ್ಷರು ಹೆಸರು ಬಹಿರಂಗಪಡಿಸ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯರನ್ನ ಬಿಜೆಪಿಗಿಂತ ಕಾಂಗ್ರೆಸ್​ನವರೇ ಸೋಲಿಸ್ತಾರೆ: ಈಶ್ವರಪ್ಪ ಬಾಂಬ್

ಕಾಂಗ್ರೆಸ್​ನಲ್ಲಿ ಹಣ ನೀಡುವ ಪರಂಪರೆ ಇಲ್ಲ

500 ರೂ. ಕೊಟ್ಟು ಜನ ಕರೆತನ್ನಿ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಬಿಜೆಪಿ ಬಗ್ಗೆ ಮಾತಾಡಿರುವ ವಿಡಿಯೋ ಇರಬಹುದು. ನಮ್ಮವರು ಯಾರೂ ಕೂಡ ಹಣ ನೀಡುವ ಪ್ರಯತ್ನ ಮಾಡಿಲ್ಲ. ಜನ ಬರೋಕೆ ವಾಹನ, ಊಟ ನೀಡುತ್ತೇವೆ, ಅದು ಸಾಮಾನ್ಯ. ಹಣ ನೀಡುವ ಪ್ರಶ್ನೆಯೇ ಇಲ್ಲಿ ಬರಲ್ಲ. ಶಿವಮೊಗ್ಗ ಏರ್​​ಪೋರ್ಟ್​ ಕಾರ್ಯಕ್ರಮದ ವೇಳೆ ವಿಡಿಯೋ ವೈರಲ್​ ಆಗಿದ್ದು, ಬಿಜೆಪಿಯವರು ಹಣ ನೀಡಿಲ್ಲ ಅಂತಾ ಈ ಬಗ್ಗೆ ಕಂಪ್ಲೇಟ್​​​ ಆಗಿದೆ. ಕಾಂಗ್ರೆಸ್​ನಲ್ಲಿ ಹಣ ನೀಡುವ ಪರಂಪರೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ; ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ವಾಗ್ದಾಳಿ

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಪ್ರಚಾರಕ್ಕೆ ಕರೆದುಕೊಂಡು ಬನ್ನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವೈರಲ್ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು, ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರುವ ಮದುಮಗನ ಥರ ಆಗಿದೆ ಎಂದು ಟಾಂಗ್ ಕೊಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!