5.5 C
Munich
Friday, March 3, 2023

Amit Shah has no moral right to speak about corruption in Karnataka: HD Kumaraswamy video story In Kannada | ಅದ್ಯಾವ ಮುಖವಿಟ್ಟುಕೊಂಡು ಅಮಿತ್ ಶಾ ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೋ? ಹೆಚ್ ಡಿ ಕುಮಾರಸ್ವಾಮಿ

ಓದಲೇಬೇಕು

ನಾಡಿನ ಜನತೆಯ ದುಡ್ಡನ್ನು ಲೂಟಿ ಹೊಡೆದು ಇವರು ರಾಜ್ಯವನ್ನು ಅಭಿವೃದ್ಧಿ ಮಾಡುತ್ತಾರಾ ಎಂದ ಕುಮಾರಸ್ವಾಮಿ ಭ್ರಷ್ಟಾಚಾರದ ವಿಷಯ ಬಂದಾಗ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಅಂತ ಹೇಳಿದರು.  

ರಾಮನಗರ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy); ಬಸವಕಲ್ಯಾಣದಲ್ಲಿ ಭ್ರಷ್ಟಾಚಾರ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಎಟಿಎಮ್ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದರು. ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿರುವ ಅಮಿತ್ ಶಾ ಅವರು ರೂ 7.5 ಕೋಟಿ ಲಂಚದ ಹಣದ ಜೊತೆ ಸಿಕ್ಕಬಿದ್ದಿರುವ ಬಿಜೆಪಿ ಶಾಸಕನ (BJP MLA) ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಅವರಿಗೆ ನೈತಿಕತೆ ಇದ್ದಿದ್ದೇಯಾಯದರೆ ಕರ್ನಾಟಕಕ್ಕೆ ಬರಲೇಬಾರದು, ಅದ್ಯಾವ ಮುಖ ಇಟ್ಟುಕೊಂಡು ಬಂದಿದ್ದಾರೋ ಅಂತ ಲೇವಡಿ ಮಾಡಿದರು. ಅಸಲು ಎಟಿಎಮ್ ಗಳು ಯಾರೆಂದು ಜನಕ್ಕೆ ಗೊತ್ತಾಗುತ್ತಿದೆ. ನಾಡಿನ ಜನತೆಯ ದುಡ್ಡನ್ನು ಲೂಟಿ ಹೊಡೆದು ಇವರು ರಾಜ್ಯವನ್ನು ಅಭಿವೃದ್ಧಿ ಮಾಡುತ್ತಾರಾ ಎಂದ ಕುಮಾರಸ್ವಾಮಿ ಭ್ರಷ್ಟಾಚಾರದ ವಿಷಯ ಬಂದಾಗ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!