1.7 C
Munich
Friday, March 3, 2023

Amit Shah: If the vehicle is stolen, it will be detected within two minutes and passport confirmation within three hours; Amit Shah | ವಾಹನ ಕಳವಾದರೆ ಎರಡೇ ನಿಮಿಷಗಳಲ್ಲಿ ಪತ್ತೆ, ಮೂರೇ ಗಂಟೆಯಲ್ಲಿ ಪಾಸ್​ಪೋರ್ಟ್​ ದೃಢೀಕರಣ; ಅಮಿತ್ ಶಾ

ಓದಲೇಬೇಕು

ಕೇವಲ 3 ಗಂಟೆಯಲ್ಲಿ ಪಾಸ್‌ಪೋರ್ಟ್‌ ಪರಿಶೀಲನೆ ಮುಗಿಯುತ್ತಿದೆ. ನಿಮ್ಮ ವಾಹನ ಕಳವಾಗಿದ್ರೆ ಎರಡೇ ನಿಮಿಷಗಳಲ್ಲಿ ಪತ್ತೆ ಹಚ್ಚಲಾಗುತ್ತೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದರು.

ಅಮಿತ್ ಶಾ

Image Credit source: thehindu.com

ಬೆಂಗಳೂರು: ಕೇವಲ 3 ಗಂಟೆಯಲ್ಲಿ ಪಾಸ್‌ಪೋರ್ಟ್‌ ಪರಿಶೀಲನೆ ಮುಗಿಯುತ್ತಿದೆ. ನಿಮ್ಮ ವಾಹನ ಕಳವಾಗಿದ್ರೆ ಎರಡೇ ನಿಮಿಷಗಳಲ್ಲಿ ಪತ್ತೆ ಹಚ್ಚಲಾಗುತ್ತೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಾಹಿತಿ ನೀಡಿದರು. ಸೇಫ್ ಸಿಟಿ ಪ್ರಾಜೆಕ್ಟ್ ಕಮಾಂಡ್ ಸೆಂಟರ್​ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಅಪರಾಧ ಮಾಡಿರುವ ಎಲ್ಲಾ ಅಪರಾಧಿಗಳ ಫಿಂಗರ್ ಪ್ರಿಂಟ್ ಲಭ್ಯವಿದ್ದು, ಆ ಮೂಲಕ ಅಪರಾಧಿ ಪತ್ತೆ ಹಚ್ಚಿ ಬಂಧನ ಮಾಡಬಹುದು. ಕರ್ನಾಟಕ ಕೂಡ ಫಿಂಗರ್ ಪ್ರಿಂಟ್ ಮೂಲಕ 1800ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಿದೆ. ICJS (Inter-operable Criminal Justice System) ಮತ್ತು CCTNS (Crime and Criminal Tracking Network and Systems) ಒಟ್ಟಿಗೆ ಕೆಲಸ ಮಾಡುವುದರಿಂದ ವೇಗವಾಗಿ ಫಲಿತಾಂಶ ಲಭ್ಯವಾಗುತ್ತಿದೆ ಎಂದು ಹೇಳಿದರು.

ICJS ಮೂಲಕ ವಿದೇಶಿ ಪ್ರಕರಣ ಲಭ್ಯವಾಗಲಿದೆ. ಇದರ ಪ್ರಯೋಗ ಕೂಡ ಮಾಡಲಾಗಿದೆ. ಈಶನ್ಯಾ ರಾಜ್ಯದಲ್ಲಿ ಫಲಿತಾಂಶ ಕೂಡ ಕಂಡಿದ್ದೇವೆ. ICJS ಎರಡನೇ ಪ್ರಯೋಗ ಕೂಡ ನಡೆಯುತ್ತಿದೆ. ಡೇಟಾ ಎಂಟ್ರಿ, ಡೆಟಾ ಟ್ರಾನ್ಸ್‌ಫರ್ 3,500ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Bengaluru Safe City: ಸೇಫ್ ಸಿಟಿ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಗೃಹಸಚಿವ ಅಮಿತ್ ಶಾ

ಟೆಕ್ನಾಲಜಿ ಬಳಸಿ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ

ಇಂದಿನಿಂದ ಸೇಫ್ ಸಿಟಿ ಪ್ರಾಜೆಕ್ಟ್ ಆರಂಭವಾಗಿದೆ. ಬೆಂಗಳೂರು ಜನತೆಯ ಸುರಕ್ಷತೆಗಾಗಿ ಕೆಲಸ ಮಾಡಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಹೊಸ ಆಯಾಮದ ಮೂಲಕ ನಮ್ಮ ಯೋಜನೆ ಹಾಗೂ ಮೋದಿಯವರ ಕನಸು ನನಸಾಗಿದೆ. ಟೆಕ್ನಾಲಜಿ ಬಳಸಿ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಶಾಂತಿ ಸ್ಥಾಪನೆಗೆ ಪಣ ತೊಡಲಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆ ನೀಡಲಾಗಿದೆ. ಸಾವಿರ ಕಿ.ಮೀವರೆಗೂ ತಲುಪಲಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಡಿಮೆ ದೂರ ಕ್ರಮಿಸಲಾಗಿತ್ತು. ಮೋದಿ ಬಂದ ಬಳಿಕ ವೇಗವಾಗಿ ಕೆಲಸ ನಡೆಯುತ್ತಿದೆ ಎಂದರು.

ಇದನ್ನೂ ಓದಿ: Bengaluru Safe City project: ಏನಿದು ಸೇಫ್​ ಸಿಟಿ ಪ್ರಾಜೆಕ್ಟ್, ಬೆಂಗಳೂರಿಗೇಕೆ ಮುಖ್ಯ?

ನಿಮ್ಮೆಲ್ಲರ ಕನಸು ಇಂದು ನನಸಾಗುತ್ತಿದೆ

ಚೆನೈ, ಬೆಂಗಳೂರು ಹೈಸ್ಪೀಡ್ ರೈಲ್ ಕಾರಿಡಾರ್ ಮಾಡಲಾಗಿದೆ. 275 ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮೈಸೂರು ತಲುಪಲಿದೆ. ಸ್ಪೇಸ್ ಸೆಕ್ಟರ್‌ನಲ್ಲಿ 25ರಷ್ಟು ಕೆಲಸ ನಡೆಯುತ್ತಿದೆ. ಇದೆಲ್ಲದರ ಲಾಭ ಬೆಂಗಳೂರಿಗೆ ಆಗುತ್ತಿದೆ. ವಿದೇಶಿ ನೇರ ಬಂಡವಾಳ ಹರಿದು ಬರುತ್ತಿದೆ. ಬೆಂಗಳೂರಿನ ಬಳಿ ಹೆಚ್.ಎ.ಎಲ್ ಹೆಲಿಕಾಪ್ಟರ್ ಕಾರ್ಖಾನೆ ಮೋದಿ ಉದ್ಘಾಟನೆ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಒಂದೇ ಒಂದು ಪರ್ಸೆಂಟ್ ಕೂಡ ವಿದೇಶಿ ವಸ್ತು ಬಳಸುತ್ತಿಲ್ಲ. ನಿಮ್ಮೆಲ್ಲರ ಕನಸು ಇಂದು ನನಸಾಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಅಮಿತ್ ಶಾ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!