2.6 C
Munich
Monday, March 6, 2023

Amit Shah slams JDS and Karnataka Congress BJP Vijay Sankalpa Yatra in Bidar Basavakalyan And Devanahalli | Amit Shah: ನಿಮ್ಮ ಮತ ಪಿಎಫ್​ಐ ನಿಷೇಧಿಸಿದ ಬಿಜೆಪಿಗೋ, ಭಯೋತ್ಪಾದನೆ ಬೆಂಬಲಿಸುವ ಕಾಂಗ್ರೆಸ್​ಗೋ; ಅಮಿತ್ ಶಾ

ಓದಲೇಬೇಕು

ಕುಟುಂಬದ ಬಗ್ಗೆ ಯೋಚಿಸುವ ಪಕ್ಷ ಬಡವರ ಬಗ್ಗೆ ಯೋಚಿಸುವುದಿಲ್ಲ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಸರ್ಕಾರ ಬಡವರ ಅಭಿವೃದ್ಧಿಯ ಬಗ್ಗೆಯೇ ಯೋಚಿಸುತ್ತದೆ ಎಂದರು.

ದೇವನಹಳ್ಳಿ: ಪಿಎಫ್​ಐ ನಿಷೇಧಿಸಿದ ಬಿಜೆಪಿಗೆ (BJP) ಮತ ನೀಡುತ್ತೀರಾ ಅಥವಾ ಭಯೋತ್ಪಾದನೆ ಬೆಂಬಲಿಸುವ ಕಾಂಗ್ರೆಸ್​ಗೆ (Congress)  ಮತ ನೀಡುತ್ತೀರೋ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮತದಾರರನ್ನು ಪ್ರಶ್ನಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ (BJP Vijay Sankalpa Yatra) ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. 25-30 ಕ್ಷೇತ್ರಗಳಲ್ಲಿ ಜೆಡಿಎಸ್​ ಗೆಲ್ಲಿಸಿದರೆ ಕಾಂಗ್ರೆಸ್ ಗೆಲ್ಲಿಸಿದಂತೆಯೇ ಸರಿ. ಜೆಡಿಎಸ್​ನವರು ಸೀದಾ ಕಾಂಗ್ರೆಸ್​​ ನಾಯಕರ ಬಳಿ ಹೋಗುತ್ತಾರೆ. ಹೀಗಾಗಿ ಬಿಜೆಪಿಗೆ ಪೂರ್ಣ ಬೆಂಬಲ ನೀಡಿ ಎಂದು ಅವರು ಕರೆ ನೀಡಿದರು. ಜತೆಗೆ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿದ್ದಕ್ಕೆ‌‌‌ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದರು.

ಕುಟುಂಬದ ಬಗ್ಗೆ ಯೋಚಿಸುವ ಪಕ್ಷ ಬಡವರ ಬಗ್ಗೆ ಯೋಚಿಸುವುದಿಲ್ಲ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಸರ್ಕಾರ ಬಡವರ ಅಭಿವೃದ್ಧಿಯ ಬಗ್ಗೆಯೇ ಯೋಚಿಸುತ್ತದೆ ಎಂದರು.

ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಿಸಿದ್ದೇವೆ. ವಂದೇ ಭಾರತ್ ರೈಲು ಸೇವೆ ಆರಂಭಿಸಿದ್ದೇವೆ. ಹೈಸ್ಪೀಡ್ ರೈಲು ಯೋಜನೆ ಆರಂಭಿಸಿದ್ದೇವೆ. ರಾಜ್ಯಕ್ಕೆ ಯುಪಿಎ ಸರ್ಕಾರ ಎಷ್ಟು ಕೊಡುಗೆ ಕೊಟ್ಟಿದೆ ಅಂತ ಸಿದ್ದರಾಮಯ್ಯ ಹೇಳಲಿ. ಯುಪಿಎ ಹತ್ತು ವರ್ಷದಲ್ಲಿ ಎಷ್ಟು ಕೊಟ್ಟಿದೆಯೋ ಅದರ 9 ಪಟ್ಟು ನಾವು ಈ 8 ವರ್ಷದಲ್ಲಿ ಕೊಟ್ಟಿದ್ದೇವೆ. ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ತಾಲೂಕುಗಳನ್ನು ಎರಡನೇ ಹಂತದ ನಗರಗಳಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಬೆಂಗಳೂರಿನ ಮಹತ್ವ ನಮಗೆ ಗೊತ್ತಿದೆ. ಬೆಂಗಳೂರಿಗೆ ಹಲವು ಯೋಜನೆ ನೀಡಿದ್ದೇವೆ. ಯುಪಿಎ ಇದ್ದಾಗ ಕೊನೆಯ ಬಜೆಟ್​​ನಲ್ಲಿ ಕರ್ನಾಟಕಕ್ಕೆ ತೆರಿಗೆ ಬಾಕಿ 13 ಸಾವಿರ ಕೋಟಿ ರೂ. ಕೊಟ್ಟಿತ್ತು. ಇದನ್ನು 2021-22 ರಲ್ಲಿ ಬಿಜೆಪಿಯು 13 ಸಾವಿರ ಕೋಟಿಯಿಂದ 33 ಸಾವಿರ ಕೋಟಿಗೆ ಏರಿಸಿತು. ಇದರ ಬಗ್ಗೆ ಸಿದ್ದರಾಮಯ್ಯ ಬಹಿರಂಗವಾಗಿ ಮಾತಾಡಲಿ. ಯುಪಿಎ ಹಣಕಾಸು ಆಯೋಗದಿಂದ 3,400 ಕೋಟಿ ಕೊಡಲಾಗಿತ್ತು. ನಾವು 7,800 ಕೋಟಿ ರೂ. ಕೊಡುತ್ತಿದ್ದೇವೆ. 31 ಸಾವಿರ ಕೋಟಿಯಲ್ಲಿ ಬೆಂಗಳೂರು-ಹೈದರಾಬಾದ್ ಎಕ್ಸ್​​ಪ್ರೆಸ್ ಹೈವೇ ಯೋಜನೆ ಮುಕ್ತಾಯ ಹಂತದಲ್ಲಿದೆ. ಮೋದಿ ದೇಶವನ್ನು ಸುರಕ್ಷಿತವಾಗಿ ಇಟ್ಟಿದ್ದಾರೆ ಎಂದು ಶಾ ಹೇಳಿದರು.

ಸಮಾವೇಶದಲ್ಲಿ ಅಮಿತ್ ಶಾಗೆ ಪೇಟ ತೊಡಿಸಿ, ಖಡ್ಗ ನೀಡಿ ಸನ್ಮಾನ ಮಾಡಲಾಯಿತು. ರೇಷ್ಮೆ ಗೂಡಿನಿಂದ ಮಾಡಿದ ಹಾರ ಹಾಕಿ ಮೈಸೂರು ಪೇಟ ಹಾಕಿ, ಬೆಳ್ಳಿಯ ಕತ್ತಿ ಮತ್ತು ಕೆಂಪೇಗೌಡರ ಕಂಚಿನ ಪುತ್ಥಳಿ ಗೌರವ ಸಲ್ಲಿಸಲಾಯಿತು.

ಇದನ್ನೂ ಓದಿ: ಅದ್ಯಾವ ಮುಖವಿಟ್ಟುಕೊಂಡು ಅಮಿತ್ ಶಾ ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೋ? ಹೆಚ್ ಡಿ ಕುಮಾರಸ್ವಾಮಿ

ಸಮಾವೇಶದಲ್ಲಿ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ‌, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವರಾದ ಆರ್.ಅಶೋಕ್, ಡಾ.ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನ, ಬಿ.ಸಿ.ನಾಗೇಶ್, ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಉಪಸ್ಥಿತರಿದ್ದರು. ಎರಡು ದಿನ ಹಿಂದೆ ಎಎಪಿ ತೊರೆದು ಬಿಜೆಪಿ ಸೇರಿದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಬಿಜೆಪಿ ನಾಯಕರು ಅಮಿತ್ ಶಾಗೆ ಪರಿಚಯ ಮಾಡಿಸಿದರು.

ಪ್ರಜಾಪ್ರಭುತ್ವ ಪರಿಕಲ್ಪನೆ ಜಗತ್ತಿಗೆ ಪರಿಚಯಿಸಿದ ಬಸವಣ್ಣ; ಶಾ ಬಣ್ಣನೆ

ಬಸವೇಶ್ವರರು ಜಗತ್ತಿನಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಪರಿಚಯಿಸಿದವರು. ಅವರ ಪುಣ್ಯಭೂಮಿ ಬೀದರ್‌ನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಾಲ್ಲಿ ಭಾಗಿಯಾಗಿರುವುದು ಖುಷಿ ತಂದಿದೆ ಎಂದು ಅಮಿತ್ ಶಾ ಹೇಳಿದರು. ದೇವನಹಳ್ಳಿ ಸಮಾವೇಶಕ್ಕೂ ಮುನ್ನ ಬೀದರ್​ನ ಬಸವಕಲ್ಯಾಣ ಪಟ್ಟಣದಲ್ಲಿ ವಿಜಯ ಸಂಕಲ್ಪ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣನವರ ಹೆಸರು, ವಿಚಾರವನ್ನು ವಿಶ್ವದಾದ್ಯಂತ ಪಸರಿಸಲು ಶ್ರಮಿಸಿದ್ದಾರೆ. ಬಡವರ ಅಭಿವೃದ್ದಿಗಾಗಿ ಈಗ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಜತೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​​ನಲ್ಲಿ ಗೆಲುವಿನ ಸೂತ್ರ ಯಾವುದೂ ಉಳಿದಿಲ್ಲ. ಮೋದಿ ಅವರು ಸಾಯಲಿ ಅಂತ ಹೇಳುತ್ತಾರೆ. ಆದರೆ, ಮೋದಿ ಅವರ ದೀರ್ಘಾಯುಷ್ಯಕ್ಕಾಗಿ 130 ಕೋಟಿ ಜನ ಪ್ರಾರ್ಥಿಸುತ್ತಿದ್ದಾರೆ. ಮೋದಿ ಅವರ ಮೇಲೆ ಕಾಂಗ್ರೆಸ್​​ನವರು ವಾಗ್ದಾಳಿ ನಡೆಸಿದಷ್ಟೂ ಕಮಲ ಅರಳುತ್ತದೆ ಎಂದು ಅಮಿತ್ ಶಾ ಹೇಳಿದರು.

‘ಸಿದ್ದರಾಮಯ್ಯ ದೆಹಲಿಯ ಎಟಿಎಂ’

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಕೇವಲ ದೆಹಲಿಯ ಎಟಿಎಂ ಆಗಿದ್ದರು. ಅವರು ದೆಹಲಿಗೆ ಹಣ ಕಳಿಸೋ ಎಟಿಎಂ ಆಗಿ ಮಾತ್ರ ಕೆಲಸ ಮಾಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕುಟುಂಬದ ಪಕ್ಷಗಳಾಗಿವೆ. ಜೆಡಿಎಸ್​​ಗೆ ಮತ ಹಾಕಿದರೆ ಅದು ವ್ಯರ್ಥವಾಗುತ್ತದೆ. ಅವರು ಕೆಲ ಸೀಟ್ ಗೆದ್ರೆ ಕಾಂಗ್ರೆಸ್ ಮನೆಗೆ ಹೋಗಿ ಕೂರುತ್ತಾರೆ ಎಂದು ಅಮಿತ್ ಶಾ ಟೀಕಿಸಿದರು.

ನಾವು ದೇಶಭಕ್ತರನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ನಿಜಲಿಂಗಪ್ಪ, ವೀರೆಂದ್ರ ಪಾಟೀಲ ಅವರಿಗೆ ಅವಮಾನ ಮಾಡಿದೆ. ಕಾಂಗ್ರೆಸ್​ನಿಂದ ಕರ್ನಾಟಕಕಕ್ಕೆ ಸನ್ಮಾನ ಸಿಗಲಾರದು. ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಜನ್ಮದಿನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಬಂದಿದ್ದರು. ಲೋಕಪ್ರಿಯ ನಾಯಕನನ್ನು ಮೋದಿ ಅವರು ಸತ್ಕರಿಸಿ, ಗೌರವ ನೀಡಿದ್ದಾರೆ ಎಂದು ಶಾ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!