2.1 C
Munich
Monday, March 27, 2023

Another 5.3 magnitude earthquake hits Turkey while rebuilding houses World News in kannada | Turkey Earthquake: ಟರ್ಕಿಯಲ್ಲಿ ಮತ್ತೆ 5.3 ತೀವ್ರತೆಯ ಭೂಕಂಪ, ಮರುನಿರ್ಮಾಣವಾದ ಮನೆಗಳು ನಾಶ

ಓದಲೇಬೇಕು

ಇದೀಗ ಮತ್ತೆ 5.3 ರ ತೀವ್ರತೆಯೊಂದಿಗೆ ಮಧ್ಯ ಟರ್ಕಿಶ್ ಪ್ರಾಂತ್ಯದ ನಿಗ್ಡೆ ಬಳಿ ಭೂಕಂಪ ಸಂಭವಿಸಿದೆ ಎಂದು ಟರ್ಕಿಶ್ ವಿಪತ್ತು ಸಂಸ್ಥೆ ತಿಳಿಸಿದೆ. ಸ್ಥಳಾಂತರಗೊಂಡ 1.5 ಮಿಲಿಯನ್ ಜನರಿಗೆ ಮನೆಗಳನ್ನು ಮರುನಿರ್ಮಾಣ ಮಾಡಲು ಟರ್ಕಿ ತನ್ನ ಕೆಲಸವನ್ನು ಪ್ರಾರಂಭಿಸಿದ ದಿನದಂದು ಭೂಕಂಪ ಸಂಭವಿಸಿದೆ.

ಟರ್ಕಿಯಲ್ಲಿ (Turkey) ಇಂದು (ಫೆ.25) ಮತ್ತೊಂದು ಭೂಕಂಪ ಸಂಭವಿಸಿದೆ, ದೇಶದ ಗಡಿ ಪ್ರದೇಶಗಳು 50,000 ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡ ನಂತರ ಚೇತರಿಕೆಯ ಹಂತದಲ್ಲಿದ್ದ ಟರ್ಕಿಗೆ ಮತ್ತೊಮ್ಮೆ ಭೂಕಂಪ ದೊಡ್ಡ ಪೆಟ್ಟು ನೀಡಿದೆ. ಒಂದು ವಾರಗಳ ಹಿಂದೆ ನಾಶಯುತವಾದ ಭೂಕಂಪಕ್ಕೆ ತುತ್ತಾಗಿದ ಟರ್ಕಿಯಲ್ಲಿ ಸಾವಿರ ಮನೆಗಳು ನಾಶವಾಗಿತ್ತು. ಇದೀಗ ಮತ್ತೆ 5.3 ರ ತೀವ್ರತೆಯೊಂದಿಗೆ ಮಧ್ಯ ಟರ್ಕಿಶ್ ಪ್ರಾಂತ್ಯದ ನಿಗ್ಡೆ ಬಳಿ ಭೂಕಂಪ ಸಂಭವಿಸಿದೆ ಎಂದು ಟರ್ಕಿಶ್ ವಿಪತ್ತು ಸಂಸ್ಥೆ ತಿಳಿಸಿದೆ. ಸ್ಥಳಾಂತರಗೊಂಡ 1.5 ಮಿಲಿಯನ್ ಜನರಿಗೆ ಮನೆಗಳನ್ನು ಮರುನಿರ್ಮಾಣ ಮಾಡಲು ಟರ್ಕಿ ತನ್ನ ಕೆಲಸವನ್ನು ಪ್ರಾರಂಭಿಸಿದ ದಿನದಂದು ಭೂಕಂಪ ಸಂಭವಿಸಿದೆ. ಫೆಬ್ರವರಿ 6ರಂದು ಸಂಭವಿಸಿದ ಭೂಕಂಪದಲ್ಲಿ 5 ಲಕ್ಷಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಕಟ್ಟಡಗಳು ಕುಸಿದವು ಎಂದು ರಾಯಿಟರ್ಸ್ ವರದಿ ಮಾಡಿದೆ.

ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ (AFAD) ಶುಕ್ರವಾರ ರಾತ್ರಿ ಭೂಕಂಪಗಳಿಂದ ಟರ್ಕಿಯಲ್ಲಿ ಸಾವಿನ ಸಂಖ್ಯೆ 44,218 ಕ್ಕೆ ಏರಿದೆ ಎಂದು ಘೋಷಿಸಿತು. ಸಿರಿಯಾದ ಇತ್ತೀಚಿನ ಘೋಷಿತ ಸಾವಿನ ಸಂಖ್ಯೆ 5,914 ಏರಿಕೆಯಾಗಿತ್ತು. ಎರಡು ದೇಶಗಳಲ್ಲಿ ಒಟ್ಟು ಸಾವಿನ ಸಂಖ್ಯೆ 50,000 ಕ್ಕೆ ಏರಿದೆ. ಟಿರ್ಕಿಯಲ್ಲಿ ಒಂದು ಕಡೆ ಚುನಾವಣೆ ಹತ್ತಿರ ಬರುತ್ತಿದೆ. ಈ ಕಾರಣದಿಂದ ಮತ್ತೆ ಜನರಿಗೆ ಜೀವನ ಕಟ್ಟಿಕೊಡಬೇಕು ಎಂಬ ನಿರ್ಧಾರವನ್ನು ಮಾಡಿದೆ. ಟರ್ಕಿಶ್ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಅವರು ಒಂದು ವರ್ಷದೊಳಗೆ ಮನೆಗಳನ್ನು ಮರುನಿರ್ಮಾಣ ಮಾಡುವ ವಾಗ್ದಾನ ಮಾಡಿದ್ದಾರೆ, ಆದರೂ ಅಧಿಕಾರಿಗಳು ವೇಗಕ್ಕಿಂತ ಸುರಕ್ಷತೆಯನ್ನು ಹೆಚ್ಚಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Turkey Earthquake: ನೀವು ನಮ್ಮ ಹೆಮ್ಮೆ: ಆಪರೇಷನ್ ದೋಸ್ತ್​​ನಲ್ಲಿ ಭಾಗಿಯಾದ NDRF ತಂಡವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಈಗ ನಿರಾಶ್ರಿತರಾಗಿರುವ ಅನೇಕರಿಗೆ ಸರ್ಕಾರವು ಟೆಂಟ್‌ಗಳನ್ನು ಸಹ ಕಳುಹಿಸಿದೆ. ಕನಿಷ್ಠ 15 ಶತಕೋಟಿ ವೆಚ್ಚದಲ್ಲಿ 2,00,000 ಅಪಾರ್ಟ್‌ಮೆಂಟ್‌ಗಳು ಮತ್ತು 70,000 ಹಳ್ಳಿ ಮನೆಗಳನ್ನು ನಿರ್ಮಿಸುವುದು ಟರ್ಕಿ ಸರ್ಕಾರದ ಆರಂಭಿಕ ಯೋಜನೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು 1.5 ಮಿಲಿಯನ್ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ ಎಂದು ಅಂದಾಜಿಸಿದೆ, 500,000 ಹೊಸ ಮನೆಗಳ ಅಗತ್ಯವಿದೆ ಎಂದು ತಿಳಿಸಿದೆ.

ಕಳೆದ ವಾರ ವಿಶ್ವಸಂಸ್ಥೆಗೆ ಮನವಿ ಮಾಡಿದ 1 ಶತಕೋಟಿ ನಿಧಿಯಿಂದ 113.5 ಮಿಲಿಯನ್ ಕೋರಿದೆ ಎಂದು ಅದು ಹೇಳಿದೆ, ಈ ಹಣವನ್ನು ಕಲ್ಲುಮಣ್ಣುಗಳ ಪರ್ವತಗಳನ್ನು ತೆರವುಗೊಳಿಸಲು ಕೇಂದ್ರೀಕರಿಸುವುದಾಗಿ ಹೇಳಿದೆ. ಅನೇಕ ಭೂಕಂಪದಿಂದ ಬದುಕುಳಿದವರು ಭೂಕಂಪದಿಂದ ಹಾನಿಗೊಳಗಾದ ದಕ್ಷಿಣ ಟರ್ಕಿಯ ಪ್ರದೇಶವನ್ನು ತೊರೆದಿದ್ದಾರೆ ಮತ್ತು ಡೇರೆಗಳು, ಕಂಟೈನರ್ ಮನೆಗಳು ಮತ್ತು ಇತರ ಸರ್ಕಾರಿ ಪ್ರಾಯೋಜಿತ ವಸತಿಗಳಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!