8.8 C
Munich
Monday, March 20, 2023

Another Shraddha-style murder: Girl’s body found in Dhaba’s fridge national News | ಶ್ರದ್ಧಾ ರೀತಿಯಲ್ಲೇ ಮತ್ತೊಂದು ಕೊಲೆ: ಢಾಬಾದ ಫ್ರಿಡ್ಜ್‌ನಲ್ಲಿ ಬಾಲಕಿಯ ಶವ ಪತ್ತೆ

ಓದಲೇಬೇಕು

ದೆಹಲಿಯಲ್ಲಿ ಶ್ರದ್ಧಾ ರೀತಿಯಲ್ಲೇ ಮತ್ತೊಂದು ಕೊಲೆ ಪ್ರಕರಣ ಮುನ್ನೆಲೆಗೆ ಬಂದಿದೆ. ಪೊಲೀಸರು ಬಾಲಕಿಯ ಶವವನ್ನು ಢಾಬಾದ ಫ್ರಿಡ್ಜ್‌ನಲ್ಲಿ ಪತ್ತೆ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಶವವನ್ನು ವಶಪಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ದೆಹಲಿ: ದೆಹಲಿಯಲ್ಲಿ ಶ್ರದ್ಧಾ (Shraddha) ರೀತಿಯಲ್ಲೇ ಮತ್ತೊಂದು ಕೊಲೆ ಪ್ರಕರಣ ಮುನ್ನೆಲೆಗೆ ಬಂದಿದೆ. ಪೊಲೀಸರು ಬಾಲಕಿಯ ಶವವನ್ನು ಢಾಬಾದ ಫ್ರಿಡ್ಜ್‌ನಲ್ಲಿ ಪತ್ತೆ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಶವವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ದೆಹಲಿಯ ಬಾಬಾ ಹರಿದಾಸ್ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿಯನ್ನು ಸಾಹಿಲ್ ಗೆಹ್ಲೋಟ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಬಾಲಕನ ವಿಚಾರಣೆ ನಡೆಯುತ್ತಿದೆ. ಬಾಲಕಿಯನ್ನು ಕೊಂದ ಬಳಿಕ ಆರೋಪಿಗಳು ಮೃತದೇಹವನ್ನು ಢಾಬಾದ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಪೊಲೀಸರು ಬಾಲಕಿಯ ಮೃತದೇಹವನ್ನು ಫ್ರಿಡ್ಜ್‌ನಿಂದ ಹೊರತೆಗೆದಿದ್ದಾರೆ.

ಮಾಹಿತಿ ಪ್ರಕಾರ, ಕಾಶ್ಮೀರ ಗೇಟ್ ಐಎಸ್‌ಬಿಟಿ ಬಳಿ ಕಾರಿನಲ್ಲಿ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಇದಾದ ನಂತರ ಆರೋಪಿಯು ಮೃತ ದೇಹವನ್ನು ಮಿತ್ರೌ ಗ್ರಾಮದ ತನ್ನ ಧಾಬಾದ ಫ್ರೀಜರ್‌ನಲ್ಲಿ ಬಚ್ಚಿಟ್ಟಿದ್ದ. ಆರೋಪಿ ಬಾಲಕನ ವಯಸ್ಸು 26 ವರ್ಷ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಶ್ರದ್ಧಾ ಹತ್ಯೆ ಪ್ರಕರಣ

ಮೊನ್ನೆಯಷ್ಟೇ ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದೆಹಲಿಯ ಮೆಹ್ರೌಲಿಯಲ್ಲಿ ಶ್ರದ್ಧಾಳ ಪ್ರಿಯಕರ ಅಫ್ತಾಬ್ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಮೇ 18 ರಂದು ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಇದಾದ ನಂತರ ಮೃತ ದೇಹವನ್ನು 35 ತುಂಡುಗಳಾಗಿ ಕತ್ತರಿಸಲಾಯಿತು.

ಮೃತ ದೇಹವನ್ನು ಇಡಲು ಅಫ್ತಾಬ್ ಫ್ರಿಡ್ಜ್ ಖರೀದಿಸಿದ್ದ. ಇದರಲ್ಲಿ ಮೃತದೇಹದ ತುಂಡುಗಳನ್ನು ಇಟ್ಟುಕೊಂಡಿದ್ದ. ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾ ಮೃತದೇಹದ ತುಂಡನ್ನು ಎಸೆಯಲು ಆತ ಪ್ರತಿದಿನ ರಾತ್ರಿ ಹೋಗುತ್ತಿದ್ದ. ಅಷ್ಟೇ ಅಲ್ಲ, ಶ್ರದ್ಧಾ ಕೊಲೆಯಾದ ನಂತರವೂ ಅಫ್ತಾಬ್ ಇದೇ ಫ್ಲಾಟ್ ನಲ್ಲಿ ವಾಸವಾಗಿದ್ದ, ಆತನ ಇತರೆ ಗೆಳತಿಯರು ಕೂಡ ಫ್ಲಾಟ್ ನಲ್ಲಿ ಅವರನ್ನು ಭೇಟಿಯಾಗಲು ಬರುತ್ತಿದ್ದರು.

ಇದನ್ನೂ ಓದಿ: Shraddha Walker Murder Case: ಶ್ರದ್ಧಾ ವಾಕರ್​​ ಸ್ನೇಹಿತರೊಬ್ಬರನ್ನು ಭೇಟಿ ಮಾಡಿದ್ದಕ್ಕೆ ರೊಚ್ಚಿಗೆದ್ದಿದ್ದ ಅಫ್ತಾಬ್ ಪೂನಾವಾಲಾ

ನವೆಂಬರ್ 12ರಂದು ಅಫ್ತಾಬ್​​ನನ್ನು ಪೊಲೀಸರು ಬಂಧಿಸಿದ್ದರು. ಪಾಲಿಗ್ರಾಫಿ ಪರೀಕ್ಷೆ ಮತ್ತು ನಾರ್ಕೋ ಪರೀಕ್ಷೆಯಲ್ಲಿ ಶ್ರದ್ಧಾ ಕೊಲೆಯನ್ನು ಅಫ್ತಾಬ್ ಒಪ್ಪಿಕೊಂಡಿದ್ದ. ಶ್ರದ್ಧಾಳನ್ನು ನಾನೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಶ್ರದ್ಧಾ ಸಾವಿನ ನಂತರ ತನಗೆ ಹಲವು ಹುಡುಗಿಯರ ಜತೆ ಸಂಬಂಧವಿತ್ತು ಎಂದು ಅಫ್ತಾಬ್ ಒಪ್ಪಿಕೊಂಡಿದ್ದ. ಇದಲ್ಲದೆ, ಮೆಹ್ರೌಲಿ ಅರಣ್ಯದಿಂದ ಪೊಲೀಸರು ಶ್ರದ್ಧಾ ಮೃತದೇಹದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಡಿಎನ್‌ಎ ಪರೀಕ್ಷೆಯಲ್ಲೂ ಮೃತದೇಹದ ತುಣುಕುಗಳು ಶ್ರದ್ಧಾಳ ತಂದೆಯ ಮಾದರಿಯೊಂದಿಗೆ ಹೊಂದಾಣಿಕೆಯಾಗುತ್ತಿವೆ. ಇತ್ತೀಚೆಗಷ್ಟೇ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಅಫ್ತಾಬ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!