9 C
Munich
Friday, March 24, 2023

Anupam Kher posts about Alia Bhatt: Netizens waiting for Kangana Ranaut’s reaction | Alia Bhatt: ಆಲಿಯಾ ಭಟ್​ಗೆ ಅನುಪಮ್​ ಖೇರ್​ ಮೆಚ್ಚುಗೆ; ಕಂಗನಾ ಪ್ರತಿಕ್ರಿಯೆ ತಿಳಿಯಲು ಕಾದಿರುವ ನೆಟ್ಟಿಗರು

ಓದಲೇಬೇಕು

Kangana Ranaut | Anupam Kher: ಆಲಿಯಾ ಭಟ್​ ಅವರನ್ನು ಹೊಗಳಿ ಅನುಪಮ್​ ಖೇರ್​ ಪೋಸ್ಟ್​ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಇದು ಇನ್ನೂ ಕಂಗನಾ ರಣಾವತ್​ ಕಣ್ಣಿಗೆ ಬಿದ್ದಿಲ್ಲವೇ’ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಕಂಗನಾ ರಣಾವತ್, ಅನುಪಮ್ ಖೇರ್, ಆಲಿಯಾ ಭಟ್

ನಟಿ ಕಂಗನಾ ರಣಾವತ್​ (Kangana Ranaut) ಅವರು ಬಾಲಿವುಡ್​ನಲ್ಲಿ ಅನೇಕರನ್ನು ಎದುರು ಹಾಕಿಕೊಂಡಿದ್ದಾರೆ. ನಟನೆ ವಿಚಾರದಲ್ಲಿ ತಮ್ಮನ್ನು ಯಾರಾದರೂ ಕಡೆಗಣಿಸಿ, ಇತರೆ ನಟಿಯರಿಗೆ ಬಿಲ್ಡಪ್​ ಕೊಟ್ಟರೆ ಅದನ್ನು ಕಂಗನಾ ಸಹಿಸುವುದೇ ಇಲ್ಲ. ಅದಕ್ಕೆ ಹಲವು ಘಟನೆಗಳು ಸಾಕ್ಷಿ ಆಗಿವೆ. ಹಾಗಾಗಿ ಪ್ರತಿ ಬಾರಿಯೂ ಅಂಥದ್ದೇನಾದರೂ ನಡೆದರೆ ಅದಕ್ಕೆ ಕಂಗನಾ ಹೇಗೆ ಪ್ರತಿಕ್ರಿಯಿಸಬಹುದು ಎಂಬ ನಿರೀಕ್ಷೆ ನೆಟ್ಟಿಗರಿಗೆ ಇರುತ್ತದೆ. ಈಗ ಅದೇ ರಿತಿ ಆಗಿದೆ. ಹಿರಿಯ ನಟ ಅನುಪಮ್​ ಖೇರ್​ (Anupam Kher) ಅವರು ಆಲಿಯಾ ಭಟ್​ ಅವರನ್ನು ಮನಸಾರೆ ಹೊಗಳಿದ್ದಾರೆ. ‘ಹುಟ್ಟು ಕಲಾವಿದೆ’ ಎಂದು ಆಲಿಯಾ ಭಟ್​ (Alia Bhatt) ಬಗ್ಗೆ ಅವರು ಮೆಚ್ಚುಗೆ ನುಡಿಗಳನ್ನು ಹೇಳಿದ್ದಾರೆ. ಇದಕ್ಕೆ ಕಂಗನಾ ಕಡೆಯಿಂದ ಎಂತಹ ಪ್ರತಿಕ್ರಿಯೆ ಬರಬಹುದು ಎಂಬ ಕೌತುಕ ಮೂಡಿದೆ.

ಸಿದ್ದಾರ್ಥ್​ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರ ಮದುವೆ ಇತ್ತೀಚೆಗೆ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆಯಿತು. ಬಳಿಕ ಅವರು ಮುಂಬೈನಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳಿಗಾಗಿ ರಿಸೆಪ್ಷನ್​ ಏರ್ಪಡಿಸಿದ್ದರು. ಅದಕ್ಕೆ ಅನೇಕ ತಾರೆಯರು ಹಾಜರಿ ಹಾಕಿದ್ದರು. ಈ ವೇಳೆ ಅನುಪಮ್​ ಖೇರ್ ಮತ್ತು ಆಲಿಯಾ ಭಟ್​ ಭೇಟಿ ಆಗಿದ್ದಾರೆ. ಆ ಸಂದರ್ಭದ ಫೋಟೋವನ್ನು ಪೋಸ್ಟ್​ ಮಾಡಿರುವ ಅನುಪಮ್​ ಖೇರ್​ ಅವರು ಆಲಿಯಾಗೆ ಮೆಚ್ಚುಗೆಯ ಮಳೆ ಸುರಿಸಿದ್ದಾರೆ.

ಇದನ್ನೂ ಓದಿ: ಕಂಗನಾ ಬಿಟ್ಟು ದೀಪಿಕಾ, ಆಲಿಯಾ ಹೊಗಳಿದ ಆಮಿರ್ ಖಾನ್; ಸರಿಯಾಗಿ ತಿರುಗೇಟು ಕೊಟ್ಟ ರಣಾವತ್

‘ಪ್ರೀತಿಯ ಆಲಿಯಾ ಭಟ್​.. ತುಂಬ ದಿನಗಳ ಬಳಿಕ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ರಿಸೆಪ್ಷನ್​ನಲ್ಲಿ ನಿನ್ನನ್ನು ಭೇಟಿ ಮಾಡಿ ಖುಷಿ ಆಯಿತು. ಶಾಲೆಯಲ್ಲಿ ಕಲಿಯುತ್ತಿದ್ದಾಗ ನಿನ್ನನ್ನು ನಾನು ಹುಟ್ಟು ಕಲಾವಿದೆ ಅಂತ ಟೀಸ್​ ಮಾಡುತ್ತಿದ್ದ ದಿನಗಳ ಬಗ್ಗೆ ಈಗ ಮಾತನಾಡಿದ್ದು ಚೆನ್ನಾಗಿತ್ತು. ನಿನ್ನ ನಟನೆಯನ್ನು ಇಷ್ಟಪಟ್ಟಿದ್ದೇನೆ. ಅದರಲ್ಲೂ ಗಂಗೂಬಾಯಿ ಕಾಠಿಯಾವಾಡಿ ಚಿತ್ರದಲ್ಲಿ ಅಭಿನಯ ಚೆನ್ನಾಗಿದೆ. ಹೀಗೆ ಮುಂದುವರಿ. ನಿನಗಾಗಿ ಸದಾ ನನ್ನ ಪ್ರೀತಿ ಮತ್ತು ಪ್ರಾರ್ಥನೆಗಳು’ ಎಂದು ಅನುಪಮ್​ ಖೇರ್​ ಪೋಸ್ಟ್​ ಮಾಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಇದು ಇನ್ನೂ ಕಂಗನಾ ರಣಾವತ್​ ಕಣ್ಣಿಗೆ ಬಿದ್ದಿಲ್ಲವೇ? ಅನುಪಮ್​ ಖೇರ್​ ಮೇಲೆ ಅವರು ದಾಳಿ ಮಾಡೋದು ಗ್ಯಾರಂಟಿ. ಹೊಟ್ಟೆ ಉರಿಯಿಂದಾಗಿ ಅವರು ಹೇಗೆ ರಿಯಾಕ್ಟ್​ ಮಾಡುತ್ತಾರೋ ಅಂತ ನೋಡಬೇಕು’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ.

ಕೆಲವೇ ದಿನಗಳ ಹಿಂದೆ ಕಂಗನಾ ರಣಾವತ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ದೀರ್ಘವಾಗಿ ಬರೆದುಕೊಂಡಿದ್ದರು. ತಮ್ಮನ್ನು ಸೆಲೆಬ್ರಿಟಿ ದಂಪತಿ ಫಾಲೋ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದರು. ಆದರೆ ಯಾರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಅದು ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಬಗ್ಗೆಯೇ ಬರೆದಿದ್ದು ಎಂದು ನೆಟ್ಟಿಗರು ಊಹಿಸಿದ್ದರು.

ಇದನ್ನೂ ಓದಿಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!