10.8 C
Munich
Friday, March 24, 2023

Anurag Thakur: Beware of news coverage that threatens the integrity of the nation: Anurag Thakur to media | ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವಂತಹ ಸುದ್ದಿ ಪ್ರಸಾರ ಬಗ್ಗೆ ಎಚ್ಚರ: ಮಾಧ್ಯಮದವರಿಗೆ ಎಚ್ಚರಿಕೆ ನೀಡಿದ ಅನುರಾಗ್​ ಠಾಕೂರ್

ಓದಲೇಬೇಕು

ಮಾಧ್ಯಮದವರು ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವಂತಹ ಸುದ್ದಿಗಳನ್ನು ಪ್ರಸಾರ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್​ ಹೇಳಿದ್ದಾರೆ.

ಅನುರಾಗ್ ಠಾಕೂರ್

ಕೊಚ್ಚಿ: ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮದವರು ಜಾಗರೂಕರಾಗಿಬೇಕು ಮತ್ತು ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವಂತಹ ಸುದ್ದಿಗಳನ್ನು ಪ್ರಸಾರ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್ (Anurag Thakur)​ ಹೇಳಿದ್ದಾರೆ. ಖ್ಯಾತ ಮಾಲಯಾಳಂನ ದಿನಪತ್ರಿಕೆ ‘ಮಾತೃಭೂಮಿ’ಯ ಶತಮಾನೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಒಳಗೆ ಮತ್ತು ಹೊರಗೆ ನೀಡಲಾಗುವ ಆಧಾರರಹಿತ ಮತ್ತು ತರ್ಕಬದ್ಧವಲ್ಲದ ಅಭಿಪ್ರಾಯಗಳು ದೇಶದ ಪ್ರಜಾಪ್ರಭುತ್ವ ಸ್ವರೂಪವನ್ನು ನಾಶಮಾಡಲು ಸಾಧ್ಯವಿಲ್ಲ. ಭಾರತದ ಸಮಗ್ರತೆಗೆ ಧಕ್ಕೆ ತರುವ ಸಾಮರ್ಥ್ಯವಿರುವ ಇಂತಹ ಧ್ವನಿಗಳು ಮತ್ತು ನಿರೂಪಣೆಗಳಿಗೆ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಲ್ಲದೆಯೂ ಅವಕಾಶ ನೀಡಿದೆ ಜಾಗರೂಕರಾಗಿರಲು ನಾನು ಮಾಧ್ಯಮ ಮಿತ್ರರರಲ್ಲಿ ಒತ್ತಾಯಿಸುತ್ತೇನೆ. ಸತ್ಯ ಯಾವಾಗಲೂ ಪವಿತ್ರವಾಗಿರಬೇಕು. ಮತ್ತು ಅಭಿಪ್ರಾಯಗಳು ಮುಕ್ತವಾಗಿಬೇಕು ಎಂಬ ನಾಣ್ಣುಡಿಯನ್ನು ಹೇಳಿದರು.

ಪತ್ರಿಕಾ ಸ್ವಾತಂತ್ರ್ಯ ಬಗ್ಗೆ ಅನುರಾಗ್​ ಠಾಕೂರ್ ಪ್ರಶ್ನೆ 

ಇನ್ನು ಈ ವೇಳೆ ಕೇರಳ ಸರ್ಕಾರವನ್ನು ತೀವ್ರವಾಗಿ ಟಾರ್ಗೆಟ್ ಮಾಡಿದ ಅನುರಾಗ್​ ಠಾಕೂರ್​, ಕೇರಳದ ವಾಹಿನಿಯೊಂದರ ಕಚೇರಿಯಲ್ಲಿ ನಡೆದ ಧ್ವಂಸ ಬಗ್ಗೆ ಪ್ರಸ್ತಾಪಿಸಿದರು. ಕೇರಳ ರಾಜ್ಯದಲ್ಲಿ ಟಿವಿ ಚಾನೆಲ್‌ಗಳು, ಮಾಧ್ಯಮ ಭವನದ ಕಚೇರಿಗೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಆಡಳಿತ ಪಕ್ಷದ ಮಾತಿಗೆ ಮಣಿಯದೆ ಜನರನ್ನು ವಂಚಿಸಿ ಬೆದರಿಕೆ ಹಾಕುತ್ತಿದ್ದಾರೆ. ಇದೇನಾ ಪತ್ರಿಕಾ ಸ್ವಾತಂತ್ರ್ಯ ಎಂದು ಪ್ರಶ್ನಿಸಿದರು. ಹಸಿವು ಮತ್ತು ವೈಯಕ್ತಿಕ ಲಾಭಕ್ಕಾಗಿ ಆ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವುದು ಬಹಳಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ ಎಂದರು.

ಇದನ್ನೂ ಓದಿ: Cow Cess: ಮದ್ಯ ಪ್ರಿಯರಿಗೆ ಹಿಮಾಚಲ ಪ್ರದೇಶ ಶಾಕ್; ಪ್ರತಿ ಬಾಟಲ್ ಮೇಲೆ 10 ರೂ. ಗೋ ತೆರಿಗೆ

ನೆಲದ ವಾಸ್ತವತೆಯನ್ನು ಅರಿತು ಮಾಧ್ಯಮಗಳು ಕಾರ್ಯನಿರ್ವಹಿಸಬೇಕು

ಹೊಸ ತಂತ್ರಜ್ಞಾನಗಳ ಆವಿಷ್ಕಾರದಿಂದ ಅಡೆತಡೆಗಳಿಂದ ಮುಕ್ತಿ ಹೊಂದಲು ಒಂದು ಸೂಕ್ತ ಅವಕಾಶವನ್ನು ಒದಗಿಸುತ್ತದೆ. ಆದಾಗ್ಯೂ ಪಾರದರ್ಶಕತೆಯ ಪರದೆ ಹಿಂದೆ ಕೋಡೆಡ್ ಅಲ್ಗಾರಿದಮ್‌ಗಳಿಂದ ನಡೆಸಲ್ಪಡುವ ವೇದಿಕೆಗಳಲ್ಲಿ ಡಿಜಿಟಲ್ ವಸಾಹತುಶಾಹಿಯ ಅಪಾಯವು ಹೆಚ್ಚುತ್ತಿದೆ. ನಾವೀನ್ಯತೆ ಮತ್ತು ಆಧುನಿಕತೆಯ ಹೆಸರಿನಲ್ಲಿ ಯಾವುದನ್ನೂ ಮತ್ತು ಎಲ್ಲವನ್ನೂ ಸ್ವೀಕರಿಸದಂತೆ ನಾವು ಜಾಗರೂಕರಾಗಿರಬೇಕು. ವಿದೇಶಿ ಪ್ರಕಟಣೆಗಳು, ಕಂಪನಿಗಳು ಮತ್ತು ಸಂಸ್ಥೆಗಳು ಅಂತರ್ಗತ ಭಾರತ-ವಿರೋಧಿ ಪಕ್ಷಪಾತವನ್ನು ವಿರೂಪಗೊಳಿಸಿದ ಸಂಗತಿಗಳನ್ನು ಗುರುತಿಸಬೇಕು. ನೆಲದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವ ಭಾರತೀಯ ಮಾಧ್ಯಮಗಳು ಇಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Rajasthan: ಕೈ ಇಲ್ಲದ ಅಂಗವಿಕಲನಿಗೆ ಎರಡೂ ತೋಳುಗಳ ಕಸಿ; ಏಷ್ಯಾದಲ್ಲೇ ಇದು ಮೊದಲು!

ಪ್ರಜಾಪ್ರಭುತ್ವ ಎಂಬ ಪದವು ಸಾರ್ವಜನಿಕ ಭಾಷಣಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಅದರ ವ್ಯವಸ್ಥೆಗಳನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.  ಪಾಶ್ಚಿಮಾತ್ಯ ದೇಶಗಳಂತೆ ಪ್ರಜಾಪ್ರಭುತ್ವವು ಭಾರತದ ಮೇಲೆ ಕೃತಕ ಅಳವಡಿಕೆಯಲ್ಲ. ಇದು ನಮ್ಮ ನಾಗರಿಕತೆಯ ಇತಿಹಾಸದ ಅವಿಭಾಜ್ಯ ಮತ್ತು ವಿನಾಶವಾದ ಭಾಗವಾಗಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಪ್ರಜಾಪ್ರಭುತ್ವವು ಆಗ ಅಸ್ತಿತ್ವದಲಿತ್ತು. ಈಗಲೂ ಅಸ್ತಿತ್ವದಲ್ಲಿದೆ. ಮತ್ತು ಭವಿಷ್ಯದಲ್ಲಿಯೂ ಅಸ್ತಿತ್ವದಲ್ಲಿರುತ್ತದೆ ಎಂದು ತಿಳಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!