5.2 C
Munich
Tuesday, March 14, 2023

AR Rahman Once Lost His Oscar Awards Here is how he get back his Trophy | ಆಸ್ಕರ್ ಟ್ರೋಫಿಯನ್ನು ಕಳೆದು ಹಾಕಿದ್ದ ಎ.ಆರ್​. ರೆಹಮಾನ್; ನಂತರ ಅದು ಸಿಕ್ಕಿದ್ದೆಲ್ಲಿ?

ಓದಲೇಬೇಕು

AR Rahman: ‘ಸ್ಲಮ್​ಡಾಗ್​ ಮಿಲಿಯನೇರ್’​ ಚಿತ್ರ 2008ರಲ್ಲಿ ರಿಲೀಸ್ ಆಯಿತು. ಇದು ರೆಹಮಾನ್ ವೃತ್ತಿಜೀವನದಲ್ಲಿ ಮಹತ್ವದ ಸಿನಿಮಾ ಎನಿಸಿಕೊಂಡಿದೆ.

ಎಆರ್​ ರೆಹಮಾನ್

ಮಾರ್ಚ್ 13ರಂದು ನಡೆದ 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್​ (Academy Awards) ಕಾರ್ಯಕ್ರಮದಲ್ಲಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದಿವೆ. ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ (Naatu Naatu Song) ಹಾಡು ಹಾಗೂ ‘ದಿ ಎಲಿಫೆಂಟ್ ವಿಸ್ಪರರ್ಸ್​’ ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಇದರಿಂದ ಭಾರತೀಯರ ಖುಷಿ ಹೆಚ್ಚಿದೆ. ಈ ಸಂದರ್ಭದಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಳ್ಳಲಾಗುತ್ತಿದೆ. ‘ಸ್ಲಮ್ ಡಾಗ್​ ಮಿಲಿಯನೇರ್​’ ಚಿತ್ರಕ್ಕಾಗಿ ಎರಡು ಆಸ್ಕರ್ ಗೆದ್ದ ರೆಹಮಾನ್ ಅವರು ಅದನ್ನು ಕಳೆದುಕೊಂಡಿದ್ದಾರೆ! ಅದು ಹೇಗೆ ಎನ್ನುವ ವಿವರ ಇಲ್ಲಿದೆ.

ರೆಹಮಾನ್ ಅವರು ಬಹಳ ಸಣ್ಣ ವಯಸ್ಸಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಝಾಕಿರ್​ ಹುಸೇನ್​, ಇಳಯರಾಜ, ವೈದ್ಯನಾಥನ್​, ಎಕ್​. ಶಂಕರ್​ ಜತೆ ರೆಹಮಾನ್​ ಒಳ್ಳೆಯ ಒಡನಾಟ ಹೊಂದಿದ್ದರು. ಇವರಿಂದ ರೆಹಮಾನ್​ ಸಾಕಷ್ಟು ಪ್ರಭಾವಕ್ಕೆ ಒಳಗಾಗಿದ್ದರು. 1992ರಲ್ಲಿ ತೆರೆಗೆ ಬಂದ ತಮಿಳಿನ ‘ರೋಜಾ’ ಸಿನಿಮಾದ ಹಾಡುಗಳು ಹಿಟ್ ಆದವು. ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ರೆಹಮಾನ್. ಮೊದಲ ಸಿನಿಮಾದಲ್ಲೇ ಖ್ಯಾತಿ ಹೆಚ್ಚಿತು. ಮೊದಲ ಚಿತ್ರಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತು.

ಇದನ್ನೂ ಓದಿ



‘ಸ್ಲಮ್​ಡಾಗ್​ ಮಿಲಿಯನೇರ್’​ ಚಿತ್ರ 2008ರಲ್ಲಿ ರಿಲೀಸ್ ಆಯಿತು. ಇದು ರೆಹಮಾನ್ ವೃತ್ತಿಜೀವನದಲ್ಲಿ ಮಹತ್ವದ ಸಿನಿಮಾ ಎನಿಸಿಕೊಂಡಿದೆ. ಈ ಚಿತ್ರಕ್ಕೆ ರೆಹಮಾನ್ ಅವರಿಗೆ ಎರಡು ಆಸ್ಕರ್ ಅವಾರ್ಡ್​ಗಳು ಲಭಿಸಿದ್ದವು. ಇದನ್ನು ರೆಹಮಾನ್ ಅವರು ತಾಯಿ ಕರೀಮಾ ಬೇಗಮ್​ಗೆ ನೀಡಿದ್ದರು. ಅವರು ಆಸ್ಕರ್​ ಟ್ರೋಫಿಯನ್ನು ಕಬೋರ್ಡ್​ನಲ್ಲಿ ಬಟ್ಟೆಮುಚ್ಚಿ ಜೋಪಾನವಾಗಿರಿಸಿದ್ದರು.

ಇದನ್ನೂ ಓದಿ: A R Rahman: ‘ನಾಟು ನಾಟು ಹಾಡಿಗೆ ಆಸ್ಕರ್​ ಮಾತ್ರವಲ್ಲ, ಗ್ರ್ಯಾಮಿ ಪ್ರಶಸ್ತಿ ಕೂಡ ಬರಬೇಕು’: ಎ.ಆರ್​. ರೆಹಮಾನ್​

2020ರ ಡಿಸೆಂಬರ್​ನಲ್ಲಿ ರೆಹಮಾನ್ ತಾಯಿ ಕರೀಮಾ ಬೇಗಮ್ ನಿಧನ ಹೊಂದಿದರು. ಈ ವೇಳೆ ತಾಯಿ ಆಸ್ಕರ್​ ಟ್ರೋಫಿಯನ್ನು ಎಲ್ಲಿಟ್ಟಿದ್ದಾರೆ ಎನ್ನುವ ಗೊಂದಲ ರೆಹಮಾನ್​ಗೆ ಕಾಡಿತ್ತು. ಇದಕ್ಕಾಗಿ ಅವರು ಸಾಕಷ್ಟು ಹುಡುಕಾಡಿದ್ದರು. ಆದರೆ, ಈ ಪ್ರಶಸ್ತಿ ಸಿಗಲೇ ಇಲ್ಲ. ಕೆಲ ಸಮಯದ ನಂತರ ಅದು ಮತ್ತೊಂದು ಕಬೋರ್ಡ್​ನಲ್ಲಿ ಸಿಕ್ಕಿತ್ತು. ಈ ವಿಚಾರವನ್ನು ರೆಹಮಾನ್ ಸಂದರ್ಶನದಲ್ಲಿ ಈ ಮೊದಲು ಹೇಳಿಕೊಂಡಿದ್ದರು.

ಶುಭಾಶಯ ತಿಳಿಸಿದ ರೆಹಮಾನ್

ಆಸ್ಕರ್ ಗೆದ್ದ ಎಂ.ಎಂ ಕೀರವಾಣಿ ಹಾಗೂ ಕಾರ್ತಿಕಿ ಗೊನ್ಸಾಲ್ವೆಸ್​ ಅವರಿಗೆ ರೆಹಮಾನ್ ಅವರು ಟ್ವಿಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಒರಿಜಿನಲ್ ಸಾಂಗ್ ಹಾಗೂ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್​ ವಿಭಾಗದಲ್ಲಿ ಭಾರತಕ್ಕೆ ಪ್ರಶಸ್ತಿ ತಂದ ಮೊದಲಿಗರು ಎನ್ನುವ ಖ್ಯಾತಿ ಇವರಿಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!