11.9 C
Munich
Tuesday, March 21, 2023

Arunachal Pradesh Cheetah helicopter crash Wreckage Found 2 Pilots Killed | Arunachal Pradesh helicopter crash: ಚೀತಾ ಹೆಲಿಕಾಪ್ಟರ್​​ ಅವಶೇಷ, ಇಬ್ಬರು ಪೈಲಟ್​​ಗಳ ಮೃತದೇಹ ಪತ್ತೆ

ಓದಲೇಬೇಕು

ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಮತ್ತು ಮೇಜರ್ ಜಯಂತ್ ಎ ಮೃತದೇಹ ಪತ್ತೆಯಾಗಿದೆ. ಬೆಳಗ್ಗೆ 9:15ಕ್ಕೆ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕ ಕಳೆದುಕೊಂಡಿತು ಎಂದು ಸೇನೆ ತಿಳಿಸಿದೆ.

ಹೆಲಿಕಾಪ್ಟರ್ ಅವಶೇಷ

ಗುವಾಹಟಿ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ (Cheetah helicopter )ಗುರುವಾರ ಬೆಳಗ್ಗೆ ಅರುಣಾಚಲ ಪ್ರದೇಶದ (Arunachal Pradesh) ಪಶ್ಚಿಮ ಕಮೆಂಗ್ ಜಿಲ್ಲೆಯ ಮಂಡಲ ಬಳಿ ಪತನಗೊಂಡಿದ್ದು, ಹೆಲಿಕಾಪ್ಟರ್‌ನ ಪೈಲಟ್ ಮತ್ತು ಸಹ ಪೈಲಟ್ ಸಾವಿಗೀಡಾಗಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಮತ್ತು ಮೇಜರ್ ಜಯಂತ್ ಎ ಮೃತದೇಹ ಪತ್ತೆಯಾಗಿದೆ. ಬೆಳಗ್ಗೆ 9:15ಕ್ಕೆ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕ ಕಳೆದುಕೊಂಡಿತು ಎಂದು ಸೇನೆ ತಿಳಿಸಿದೆ.ಭಾರತೀಯ ಸೇನೆಯ ಐದು ಶೋಧ ತಂಡಗಳಾದ ಸಶಸ್ತ್ರ ಸೀಮಾ ಬಾಲ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಶೋಧ ಕಾರ್ಯ ನಡೆಸಿದ್ದು ಮಂಡಲದ ಪೂರ್ವ ಗ್ರಾಮದ ಬಂಗ್ಲಾಜಾಪ್ ಬಳಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ದುರ್ಘಟನೆ ಬಗ್ಗೆ ಸೇನೆ ವಿಚಾರಣೆ ನಡೆಸುತ್ತಿದ್ದು ಅಪಘಾತದ ಕಾರಣವನ್ನು ಪತ್ತೆ ಮಾಡಲು ಆದೇಶಿಸಲಾಗಿದೆ.

ಜಿಲ್ಲೆಯ ಸಂಗೆ ಗ್ರಾಮದಿಂದ ಬೆಳಗ್ಗೆ 9 ಗಂಟೆಗೆ ಹೆಲಿಕಾಪ್ಟರ್ ಟೇಕಾಫ್ ಆಗಿದ್ದು, ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಮಿಸ್ಸಮರಿ ಕಡೆಗೆ ತೆರಳುತ್ತಿತ್ತು.

ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಆರ್ಮಿ ಏವಿಯೇಷನ್ ಚೀತಾ ಹೆಲಿಕಾಪ್ಟರ್ ಮಾರ್ಚ್ 16 ರಂದು ಬೆಳಿಗ್ಗೆ 09:15 ಕ್ಕೆ ಎಟಿಸಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ.ಬೊಮ್ಡಿಲಾ ಪಶ್ಚಿಮದ ಮಂಡಲ ಬಳಿ ಅಪಘಾತ ಸಂಭವಿಸಿದ್ದು, ಶೋಧ ಕಾರ್ಯಗಳನ್ನು ಆರಂಭಿಸಲಾಗಿದೆ ಎಂದು ಸೇನೆ ಹೇಳಿತ್ತು.

ಇದನ್ನೂ ಓದಿ: ಸಂಸತ್​​ನಲ್ಲಿ ಮಾತನಾಡಲು ಅವಕಾಶ ನೀಡುತ್ತಾರೆ ಎಂದು ನನಗನಿಸುವುದಿಲ್ಲ: ರಾಹುಲ್ ಗಾಂಧಿ

ದಿರಾಂಗ್‌ನಲ್ಲಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಉರಿಯುತ್ತಿರುವುದನ್ನು ಗ್ರಾಮಸ್ಥರು ಕಂಡು ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವಿಶೇಷ ತನಿಖಾ ಸೆಲ್ (SIC) ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ರಾಜ್‌ಬೀರ್ ಸಿಂಗ್ ವಿವರಿಸಿದರು.

ದಿರಾಂಗ್‌ನಲ್ಲಿನ ಬಂಗ್ಜಲೆಪ್‌ನ ಗ್ರಾಮಸ್ಥರು ಮಧ್ಯಾಹ್ನ 12.30 ರ ಸುಮಾರಿಗೆ ಹೆಲಿಕಾಪ್ಟರ್ ಅನ್ನು ಪತ್ತೆ ಮಾಡಿದರು. ಅದು ಇನ್ನೂ ಉರಿಯುತ್ತಿದೆ ಎಂದಿದ್ದಾರೆ ಸಿಂಗ್. ಈ ಪ್ರದೇಶವು ಯಾವುದೇ ಮೊಬೈಲ್ ಸಂಪರ್ಕವನ್ನು ಹೊಂದಿಲ್ಲ ಮತ್ತು ಐದು ಮೀಟರ್‌ಗಳಷ್ಟು ಕಡಿಮೆ ಗೋಚರತೆಯೊಂದಿಗೆ ಹವಾಮಾನವು ಮಂಜಿನಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!