ಯುವಕನಾಗಿದ್ದ ಆತ ಲಿಂಗ ಪರಿವರ್ತನೆ ಮಾಡಿಕೊಂಡು ತೃತೀಯ ಲಿಂಗಿಯಾಗಿ ಬದುಕುತ್ತಿದ್ದಾಳೆ, ಆದ್ರೆ ಲಿಂಗಪರಿವರ್ತನೆ ಬಲವಂತದಿಂದ ಆಗಿರೋದು ಎಂದು ಆರೋಪಿಸಿದ್ದಾಳೆ, ಅಷ್ಟೆ ಅಲ್ಲ ಕೆಲವರು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಷ್ಟಕ್ಕೂ ಏನಿದು ಪ್ರಕರಣ ಇಲ್ಲಿದೆ ನೋಡಿ
ಪೊಲೀಸ್ ಮೆಟ್ಟಿಲೇರಿದ ಯುವತಿ
ನೆಲಮಂಗಲ: ಹೀಗೆ ಪೊಲೀಸ್ ಠಾಣೆ ಬಳಿ ನ್ಯಾಯಕ್ಕಾಗಿ ಬಂದಿರುವ ಈಕೆಯ ಹೆಸರು ರಶ್ಮಿಕಾ, ಅಸಲಿಗೆ ಈಕೆ ರಶ್ಮಿಕಾ ಅಲ್ಲ ರಂಜಿತ್. 2019 ರಲ್ಲಿ ತೃತಿಯ ಲಿಂಗಿಯಾಗಿ ಲಿಂಗ ಪರಿವರ್ತನೆ ಆಗಿರುವ ರಶ್ಮಿಕಾ ಇಂದು(ಮಾ.7) ತನ್ನ ಪರಿವಾರದವರ ವಿರುದ್ದವೇ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಳು. ಹೌದು ರಶ್ಮಿಕಾ 2019ಕ್ಕೂ ಮೊದಲು ಸಲಿಂಗ ಕಾಮಿಯಾಗಿದ್ದ ರಂಜಿತ್ ಒಳ್ಳೆ ಹ್ಯಾಂಡ್‌ಸಮ್ ಇದ್ದನಂತೆ, ಈತನನ್ನ ಇದೇ ಪರಿವಾರದ ಗಿರಿಜಾ ಶಿವಾನಿ ಎಂಬಾಕೆ ಬಲವಂತದಿಂದ ಲಿಂಗಪರಿವರ್ತನೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಅಷ್ಟೆ ಅಲ್ಲದೇ ನನ್ನ ಬಳಿ ಸುಮಾರು 17 ರಿಂದ 20 ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾಳೆ. ಹಣ ಕೊಡಲ್ಲ ಅಂದ್ರೆ, ಹಲ್ಲೆ ಮಾಡುವ ಬೆದರಿಕೆ ಸಹ ಹಾಕುತ್ತಿದ್ದಾರೆ. ಜೊತೆಗೆ ಶಿವಾನಿ ಹಾಗೂ ಗಿರಿಜಾ ಲಿಂಗ ಪರಿವರ್ತನೆ ಮಾಡಿಕೊಂಡಿಲ್ಲದೇ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರೆ, ತೃತೀಯ ಲಿಂಗಿಗಳ ಮುಖ್ಯಸ್ಥರು ಪ್ರಕರಣದ ಮದ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಅಲ್ಲದೆ ಈ ಸಮುದಾಯ(ಜೋಗಯ್ಯ ಪಂಗಡ)ದಲ್ಲಿ ಲಿಂಗಪರಿವರ್ತನೆ ಮಾಡದೆ ದೇವರ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:Transgender Survey: ರಾಜ್ಯ ಸರ್ಕಾರದಿಂದ ಇದೇ ಮೊದಲ ಬಾರಿಗೆ ತೃತೀಯಲಿಂಗಿಗಳ ಜನಗಣತಿ ನಡೆಸಲು ನಿರ್ಧಾರ
ಸದ್ಯ ತೃತೀಯ ಲಿಂಗಿಗಳ ಜಗಳ ತಾರಕ್ಕಕ್ಕೇರಿದ ಹಿನ್ನೆಲೆ ಬಾಗಲಗುಂಟೆ ಪೊಲೀಸರು ಮಧ್ಯಪ್ರವೇಶದ ಹಿನ್ನಲೆ ಘಟನೆ ತಣ್ಣಗಾಗಿದೆ. ಆದರೆ ಹಣಕ್ಕಾಗಿ ಲಿಂಗಪರಿವರ್ತನೆ ಮಾಡುವುದು ಮಾಡಿಸಿಕೊಳ್ಳುವುದು ಸಮಾಜದಲ್ಲಿ ನಿಲ್ಲಬೇಕಾಗಿದೆ.
ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ