10.5 C
Munich
Thursday, March 30, 2023

Ashwini Puneeth Rajkumar Birthday In 2019 Appu gifted Lamborghini Urus SUV To his wife | ಅಶ್ವಿನಿ ಪುನೀತ್​ ಬರ್ತ್​ಡೇ: ಹುಟುಹಬ್ಬಕ್ಕೂ ಮೊದಲು 4 ಕೋಟಿ ರೂ. ಕಾರು ಗಿಫ್ಟ್ ಕೊಟ್ಟಿದ್ದ ಅಪ್ಪು

ಓದಲೇಬೇಕು

Ashwini Puneeth Rajkumar Birthday: ಸಿನಿಮಾ ಕೆಲಸಗಳಿಂದ ಬಿಡುವು ಪಡೆದಾಗ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದರು. 2019ರಲ್ಲಿ ಅವರು ಬರ್ತ್​ಡೇ ಸಂದರ್ಭದಲ್ಲಿ ಪತ್ನಿಗೆ ಲ್ಯಾಂಬೋರ್ಗಿನಿ ಕಾರನ್ನು ಗಿಫ್ಟ್ ಆಗಿ ನೀಡಿದ್ದರು.

ಅಶ್ವಿನಿ-ಪುನೀತ್​

ಅಶ್ವಿನಿ ಪುನೀತ್ ರಾಜ್​​ಕುಮಾರ್ (Ashwini Puneeth Rajkumar) ಅವರು ಇತ್ತೀಚೆಗೆ ಸಾಕಷ್ಟು ನೋವು ನುಂಗಿದ್ದಾರೆ. ಪತಿ ಪುನೀತ್ ಅವರನ್ನು ಕಳೆದುಕೊಂಡ ನಂತರದಲ್ಲಿ ಅವರು ನಿತ್ಯ ಕಣ್ಣೀರಲ್ಲಿ ಕೈತೊಳೆಯುವಂತಾಯಿತು. ವೇದಿಕೆ ಮೇಲೆ ಪುನೀತ್ ಅವರನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಲೇ ಇದ್ದಾರೆ ಅವರು. ಇಂದು (ಮಾರ್ಚ್​ 14) ಅವರಿಗೆ ಬರ್ತ್​ಡೇ (Ashwini Birthday) ಸಂಭ್ರಮ. ಈ ವಿಶೇಷ ದಿನವನ್ನು ಅಶ್ವಿನಿ ಅವರು ಸರಳವಾಗಿ ಆಚರಿಸಿದ್ದಾರೆ. 2019ರಲ್ಲಿ ಅಶ್ವಿನಿಗೆ ಪುನೀತ್ ಕೊಟ್ಟ ಉಡುಗೊರೆಯನ್ನು ಫ್ಯಾನ್ಸ್ ಈಗ ನೆನಪಿಸಿಕೊಳ್ಳುತ್ತಿದ್ದಾರೆ.

ಪುನೀತ್ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪ್ರೀತಿಸಿ ಮದುವೆ ಆದರು. ಪುನೀತ್ ಪಕ್ಕಾ ಫ್ಯಾಮಿಲಿ ಮ್ಯಾನ್. ಕುಟುಂಬವನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸಿನಿಮಾ ಕೆಲಸಗಳಿಂದ ಬಿಡುವು ಪಡೆದಾಗ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದರು. 2019ರಲ್ಲಿ ಅವರು ಬರ್ತ್​ಡೇ ಸಂದರ್ಭದಲ್ಲಿ ಪತ್ನಿಗೆ ಲ್ಯಾಂಬೋರ್ಗಿನಿ ಕಾರನ್ನು ಗಿಫ್ಟ್ ಆಗಿ ನೀಡಿದ್ದರು.

ಮಾರ್ಚ್​ 8 ಮಹಿಳಾ ದಿನಾಚರಣೆ. ವುಮನ್ಸ್ ಡೇ ಹಾಗೂ ಬರ್ತ್​ಡೇ ಅಂಗವಾಗಿ ಪುನೀತ್ ಅವರು ನೀಲಿ ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಅಶ್ವಿನಿಗೆ ನೀಡಿದ್ದರು. ಈ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ. ಈಗ ಅಶ್ವಿನಿ ಹುಟ್ಟುಹಬ್ಬದ ದಿನ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗುತ್ತಿದೆ. ಉರುಸ್​ ಟ್ವಿನ್​ ಟರ್ಬೋ ಇಂಜಿನ್​ ಹೊಂದಿದೆ. 0-100 ಕಿಮೀ ವೇಗವನ್ನು ಕೇವಲ 3.6 ಸೆಕೆಂಡ್​ಗಳಲ್ಲಿ ತಲುಪುತ್ತದೆ. ಗರಿಷ್ಠ  305 ಕಿ.ಮೀ ವೇಗದಲ್ಲಿ ಈ ಎಸ್​ಯುವಿ ಚಲಿಸಬಲ್ಲದು.

ಇದನ್ನೂ ಓದಿ



ಇದನ್ನೂ ಓದಿ:  ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಮಾಲೆ ಧರಿಸಲು ಮುಂದಾದ ಅಭಿಮಾನಿಗಳು; ಇಲ್ಲಿದೆ ವಿವರ..

ಅಶ್ವಿನಿಗೆ ಬರ್ತ್​ಡೇ ವಿಶ್​

ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ಅಭಿಮಾನಿಗಳ ಕಡೆಯಿಂದ, ಆಪ್ತರಿಂದ ಹಾಗೂ ಸೆಲೆಬ್ರಿಟಿಗಳಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತಿದೆ. ಪುನೀತ್ ಇದ್ದಿದ್ದರೆ ಪತ್ನಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು ಎಂಬುದನ್ನು ನೆನೆದು ಫ್ಯಾನ್ಸ್ ಬೇಸರ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್​ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್

ಅಶ್ವಿನಿ ಹೆಗಲಿಗೆ ಪಿಆರ್​ಕೆ ಜವಾಬ್ದಾರಿ

ಪಿಆರ್​ಕೆ ಪ್ರೊಡಕ್ಷನ್ಸ್​ನ ಪುನೀತ್ ಅವರು ಆರಂಭಿಸಿದ್ದರು. ಈಗ ಇದರ ಜವಾಬ್ದಾರಿಯನ್ನು ಅಶ್ವಿನಿ ವಹಿಸಿಕೊಂಡಿದ್ದಾರೆ. ಹೊಸಬರಿಗೆ ಅವಕಾಶ ನೀಡಬೇಕು ಅನ್ನೋದು ಪುನೀತ್ ಕನಸಾಗಿತ್ತು. ಈ ಕನಸನ್ನು ಅಶ್ವಿನಿ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಮಾರ್ಚ್​ 17ಕ್ಕೆ ಪುನೀತ್ ಬರ್ತ್​ಡೇ

ಮಾರ್ಚ್​ 17ಕ್ಕೆ ಪುನೀತ್ ರಾಜ್​ಕುಮಾರ್ ಬರ್ತ್​ಡೇ ಇದೆ. ಇದನ್ನು ಅದ್ದೂರಿಯಾಗಿ ಆಚರಿಸಲು ಫ್ಯಾನ್ಸ್ ತಯಾರಿ ಮಾಡಿಕೊಂಡಿದ್ದಾರೆ. ಇದರ ಜೊತೆ ಹಲವು ಸಾಮಾಜಿಕ ಕೆಲಸಗಳನ್ನು ಕೂಡ ಮಾಡಲಾಗುತ್ತಿದೆ. ಇದೇ ದಿನ ‘ಕಬ್ಜ’ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!