? ಕ್ಷಮೆಯೊಂದನು ಕೇಳುವುದಿದೆ ?
ಬಾಕಿಯಿರುವ ಕ್ಷಮೆಯೊಂದನು ಕೇಳುವುದಿದೆ ಗೆಳತಿ ಎಲ್ಲಾದರು ದೂರ ಹೊಗಣವೇ
ನಮ್ಮಿಬ್ಬರ ಹೊರತು ಯಾರು ಬರಬಾರದು ಇಲ್ಲಿ ಗೊಡೆಗೂ ಕಣ್ಣಿವೆ ಗಾಳಿಗೂ ಕಿವಿಗಳಿವೇ
ಕಣ್ಣುಗಳಿಲ್ಲದ ದಾರಿಯಲಿ ಕಿವಿಗಳಿಲ್ಲದ ಜಾಗದಲಿ ಮಾತಡುವ ಮಾತುಗಳು ತುಂಭಾ ಇವೇ
ಒಂಟಿಯಾಗಿ ನಿನ್ನೆದುರು ಬಂದು ತಲೆಬಾಗಿ ನಿಂತು ಒಂದು ದೊಡ್ಡ ತಪ್ಪಿಗೆ ಕ್ಷಮೆ ಕೇಳುವೇ
ನೀ ನನಗಾಗಿ ಕಟ್ಟಿದ ಸಾವಿರಾರು ಕನಸುಗಳ ಬುತ್ತಿಯನು ನಾ ವಿಘ್ನಗೊಳಿಸಿದೆ
ನಾ ನಿನ್ವ ಮಾತುಗಳ ಕೇಳದೆ ಬಂದು ಈ ಮನ ಇಂದಿಗೂ ಕೊರಗುತಿದೆ
ಯಾವುದೋ ಪೀಡೆ ಪಿಶಾಚಿಯ ಕಣ್ಣು ಬಿದ್ದು ನಮ್ಮ ಪ್ರೀತಿ ಇಂದು ದೂರ ಮಾಡಿದೆ
ನಮ್ಮಿಬ್ಬರ ಕೊರಗನು ನೋಡಿ ನಿಮ್ಮೆಲ್ಲರ ಮನಗಳು ಸಂತೋಷ ಪಡುತಿದೆ
ಬಾ ಗೆಳತಿ ನನ್ನೆಲ್ಲಾದರು ನಿರ್ಜನ ಇರುವ ದೂರ ಕರೆದೊಗು ನಿನ್ನ ಅಪ್ಪಿ ನಾ ಕೂರುವೆ
ನನ್ನ ಎಲ್ಲಾ ನೋವನು ನಿನ್ನ ಬೆನ್ನಮೇಲೆ ಕಿವಿಯನ್ನಿಟ್ಟು ದಾರಿಯಲಿ ಹೇಳುತಾ ಸಾಗುವೆ
ಹಳ್ಳ ದಿಣ್ಣೆಗಳಿಲ್ಲದ ಸಾಗುವ ದಾರಿಯಲಿ ಹೋಗು ಮರೆಯದೆ ಎಲ್ಲಾ ಹೇಳುವೆ
ಅಂದು ನೀ ಆಡಿದ ಒಂದೊಂದು ಮಾತುಗಳು ಒಂದೊಂದಾಗಿ ಇಂದು ಚುಚ್ಚಿ ಚುಚ್ಚಿ ಕಾಡುತಿವೆ
ನೀನೆ ನನ್ನ ಮೊದಲ ಮಗುವೆಂದು ಪ್ರೀತಿಯ ಅಮೃತವನ್ನಿಟ್ಟೊಳು ನೀ
ನನ್ನ ಪ್ರೀತಿಗಾಗಿ ರಕ್ತ ಸಂಬಂಧಗಳ ಬಿಟ್ಟುಬರಲು ಕಾದು ನಿಂತವಳು ನೀ
ನೆನಪಿಗಾಗಿ ಕೊಟ್ಟ ಉಡುಗೊರೆ ಕಂಡಾಕ್ಷಣ ನೋವಲಿ ನೆನಪಾಗುವೆ ಪ್ರತೀದಿನ ನೀ
ಹಸಿವಾಗಿ ಬಂದಾಗ ಕೈ ತುತ್ತಾ ಕೊಟ್ಟು ಮಡಿಲಲಿ ಮಲಗಿಸಿ ಕನಸ ತುಂಬಿದೋಳು ನೀ
ಬಾ ಗೆಳತಿ ನನ್ನೆಲ್ಲಾದರು ದೂರ ಕರೆದೊಗು ನಾನು ನಿನ್ನ ತಬ್ಬಿ ನೊವೊಂದನು ಹೇಳೋದಿದೆ
ಕ್ಷಮಿಸದಿರು ನಾ ನಿನ್ನ ಕಾಲ ಮುಟ್ಟಿ ಕರ್ಷಮೆಯೊಂದನು ಕೇಳೊದಿದೆ……..?
ಕ್ಷಮೆಯೊಂದನು ಕೇಳುವುದಿದೆ : ಶನಿವಾರದ ಕವಿತೆ ಪ್ರಜಾ ನ್ಯೂಸ್ ಜೊತೆ