4.3 C
Munich
Monday, March 27, 2023

Australian players congratulating Virat Kohli after he back to the pavilion in India vs Australia 4th Test | Virat Kohli: ಔಟಾಗಿ ಪೆವಿಲಿಯನ್​ನತ್ತ ತೆರಳುತ್ತಿದ್ದಾಗ ವಿರಾಟ್ ಕೊಹ್ಲಿ ಬಳಿ ಓಡಿ ಬಂದ ಆಸ್ಟ್ರೇಲಿಯಾ ಪ್ಲೇಯರ್: ಯಾಕೆ ಗೊತ್ತೇ?

ಓದಲೇಬೇಕು

IND vs AUS 4th Test: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿ ನಿರ್ಗಮಿಸಿದರು. ಹೀಗೆ ಕೊಹ್ಲಿ ಔಟಾಗಿ ಪೆವಿಲಿಯನ್​ನತ್ತ ಹೆಜ್ಜೆ ಹಾಕುತ್ತಿರುವಾಗ ಆಸ್ಟ್ರೇಲಿಯಾ ಪ್ಲೇಯರ್ ಏನು ಮಾಡಿದ್ರು ನೋಡಿ.

Steve Smith and Virat Kohli

ಬಾರ್ಡರ್- ಗವಾಸ್ಕರ್ ಟ್ರೋಫಿ 2023ರ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದತ್ತ ಸಾಗುತ್ತಿದೆ. ಕಾಂಗರೂ ಪಡೆ ಮೊದಲ ಇನ್ನಿಂಗ್ಸ್​ನಲ್ಲಿ ಕಲೆಹಾಕಿರುವ 480 ರನ್​ಗಳ ದೊಡ್ಡ ಮೊತ್ತಕ್ಕೆ ಪ್ರತಿಯಾಗಿ ಟೀಮ್ ಇಂಡಿಯಾ (Team India) ಕೂಡ 91 ರನ್​ಗಳ ಮುನ್ನಡೆಯೊಂದಿಗೆ 571 ರನ್ ಗಳಿಸಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿತ್ತು. ಇಂದು ಕೊನೆಯ ದಿನದಾಟ ನಡೆಯುತ್ತಿದ್ದು ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯ ಕಾಣುವ ಲಕ್ಷಣವಿದೆ. ಭಾರತ ಪರ ವಿರಾಟ್ ಕೊಹ್ಲಿ (Virat Kohli) ಗರಿಷ್ಠ ರನ್ ಕಲೆಹಾಕಿದರು. ಒಟ್ಟು 364 ಎಸೆತಗಳಲ್ಲಿ 15 ಫೋರ್​ನೊಂದಿಗೆ 186 ರನ್ ಗಳಿಸಿ ಔಟಾದರು.

ವಿರಾಟ್ ಕೊಹ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿ ಟಾಡ್ ಮರ್ಫಿ ಬೌಲಿಂಗ್​ನಲ್ಲಿ ಮಾರ್ನಸ್ ಲಾಬುಶೇನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಹೀಗೆ ಕೊಹ್ಲಿ ಔಟಾಗಿ ಪೆವಿಲಿಯನ್​ನತ್ತ ಹೆಜ್ಜೆ ಹಾಕುತ್ತಿರುವಾಗ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ವಿರಾಟ್ ಬಳಿ ಓಡಿ ಬಂದು ಬೆನ್ನುತಟ್ಟಿ ಅಭಿನಂದಿಸಿದರು. ಸ್ಮಿತ್ ಇತರೆ ಆಸ್ಟ್ರೇಲಿಯಾ ಪ್ಲೇಯರ್ಸ್ ಕೂಡ ಕೊಹ್ಲಿಯ ಮನಮೋಹಕ ಆಟಕ್ಕೆ ಮನಸೋತು ಅಭಿನಂದಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿCCL 2023: ಸಿಸಿಎಲ್​ನಲ್ಲಿ ಕಿಚ್ಚನ ಹುಡುಗರದ್ದೇ ಪಾರುಪತ್ಯ; ಲೀಗ್​ನಲ್ಲಿ ಕರ್ನಾಟಕಕ್ಕೆ ಸತತ 4ನೇ ಜಯ

ಕೊಹ್ಲಿ ಶತಕದ ಸಾಧನೆ:

ಮೂರು ವರ್ಷ, ಮೂರು ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಬಂದ ಶತಕ ಇದಾಗಿದೆ. 241 ಎಸೆತಗಳಲ್ಲಿ ಶತಕ ಸಾಧನೆ ತೋರಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳಿದ್ದವು. ಇಷ್ಟು ಎಸೆತಗಳನ್ನು​ ಎದುರಿಸಿ ನಿಧಾನಗತಿಯಲ್ಲಿ ಶತಕ ಗಳಿಸಿರುವ ಅವರ ಎರಡನೇ ಇನ್ನಿಂಗ್ಸ್​ ಇದಾಗಿದೆ. ಈ ಮೂಲಕ ಕೊಹ್ಲಿ ಅವರು ಟೆಸ್ಟ್​ ಕರಿಯರ್​​ನಲ್ಲಿ 28ನೇ ಸೆಂಚುರಿ, ಹಾಗೆಯೇ ತಮ್ಮ ವೃತ್ತಿ ಜೀವನದ 75ನೇ ಶತಕವನ್ನೂ ಪೂರ್ಣಗೊಳಿಸಿದ್ದಾರೆ. 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದರು. ಕೊಹ್ಲಿ ಒಟ್ಟು 364 ಎಸೆತಗಳಲ್ಲಿ 15 ಫೋರ್​ನೊಂದಿಗೆ 186 ರನ್ ಗಳಿಸಿ ಔಟಾದರು.

ಇನ್ನು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಸಿಡಿಸಿದ 16ನೇ ಶತಕ ಇದಾಗಿದೆ. ಈ ಶತಕದ ಮೂಲಕ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದು, ಎದುರಾಳಿ ತಂಡವೊಂದರ ವಿರುದ್ಧ ಅತೀ ಹಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಇದೀಗ 4ನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಇಲ್ಲಿಯವರೆಗೆ ಭಾರತದ ನೆಲದಲ್ಲಿ 14 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಶತಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಈ ಶತಕದಿಂದ ಮೊಹಮ್ಮದ್ ಅಜರುದ್ದೀನ್ ಶತಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಸರಿದಿದ್ದಾರೆ.

ಕೊಹ್ಲಿಯ ಈ ಶತಕ ಬಂದಿದ್ದು ಸುದೀರ್ಘ 41 ಇನ್ನಿಂಗ್ಸ್​​ಗಳ ಅಂತರದಲ್ಲಿ ಎಂಬುದು ವಿಶೇಷ. 28ನೇ ಟೆಸ್ಟ್ ಶತಕಕ್ಕಾಗಿ ಬರೊಬ್ಬರಿ 41 ಇನ್ನಿಂಗ್ಸ್​​ಗಳನ್ನು ಆಡಿದ್ದಾರೆ. ಇದಕ್ಕೂ ಮೊದಲು ಕೊಹ್ಲಿ ತಮ್ಮ 12ನೇ ಶತಕಕ್ಕಾಗಿ 11 ಟೆಸ್ಟ್​​​​ ಇನ್ನಿಂಗ್ಸ್​​​​​ಗಳನ್ನು ತೆಗೆದುಕೊಂಡಿದ್ದರು. 7 ಮತ್ತು 26ನೇ ಶತಕ ಸಿಡಿಸಲು ತಲಾ 10 ಇನ್ನಿಂಗ್ಸ್​ಗಳ ಅಂತರ ಇತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!