0.5 C
Munich
Wednesday, March 15, 2023

Ballari DC gunman torcher 4 of a family attempt to Suicide  | ಸಣ್ಣ ಮನೆಯ ಪಕ್ಕ ದೊಡ್ಡ ವಾಟರ್ ಟ್ಯಾಂಕ್ ನಿರ್ಮಾಣ ವಿಚಾರ: ಜಿಲ್ಲಾಧಿಕಾರಿಯ ಗನ್​ಮ್ಯಾನ್ ಮಾಡಿದ ಯಡವಟ್ಟು ನಾಲ್ವರ ಪ್ರಾಣಕ್ಕೆ ಕುತ್ತು

ಓದಲೇಬೇಕು

Ballari DC gunman: ಮನೆಯ ಪಕ್ಕದಲ್ಲೆ ವಾಟರ್ ಟ್ಯಾಂಕ್ ನಿರ್ಮಾಣ ಮಾಡುವ ವಿಚಾರವಾಗಿ ಬಳ್ಳಾರಿ ಜಿಲ್ಲಾಧಿಕಾರಿಗಳ ಗನ್​ಮ್ಯಾನ್ ನೀಡಿದ ಕಿರುಕುಳ ತಾಳದೇ ಇವರೆಲ್ಲಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬಳ್ಳಾರಿ ಜಿಲ್ಲಾಧಿಕಾರಿಗಳ ಗನ್​ಮ್ಯಾನ್ ಮಾಡಿದ ಯಡವಟ್ಟು

ಅದೊಂದು ಸಣ್ಣ ವಿಚಾರ. ಆ ವಿಚಾರ ಅಲ್ಲಿಗೇ ಬಗೆಹರಿಸಿಕೊಂಡಿದ್ರೆ ಎನೂ ಆಗ್ತಿರಲ್ಲವೇನೋ.. ಆದ್ರೆ ಜಿಲ್ಲಾಧಿಕಾರಿಗಳ ಗನ್​ಮ್ಯಾನ್ (Ballari DC) ಮಾಡಿದ ಯಡವಟ್ಟು ನಾಲ್ವರು ಪ್ರಾಣಕ್ಕೆ ಕುತ್ತು ತಂದಿದೆ. ಡಿಸಿ ಗನ್​ಮ್ಯಾನ್ (Gunman) ಅಧಿಕಾರ ದುರುಪಯೋಗ ಪಡಿಸಿಕೊಂಡು ಕಿರುಕುಳ (Torcher) ನೀಡಿದಕ್ಕೆ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದೆ. ವಾಟರ್ ಟ್ಯಾಂಕ್ ನಿರ್ಮಾಣ ವಿಚಾರದಲ್ಲಿ ಡಿಸಿ ಗನ್​ಮ್ಯಾನ್ ಮಾಡಿದ್ದಾದರೂ ಎನು.. ನಾಲ್ವರು (Family) ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ (Suicide) ಯತ್ನಿಸಿದ್ದು ಯಾಕೆ? ಆ ಕುರಿತಾದ ವರದಿಯೊಂದಿದೆ ನೋಡಿ. ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವ ಕುಟುಂಬಸ್ಥರು.. ಬೆಂಕಿ ಹಚ್ಚಿಕೊಂಡವರನ್ನ ರಕ್ಷಣೆ ಮಾಡುತ್ತಿರುವ ಗ್ರಾಮಸ್ಥರು.. ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು. ಜಿಲ್ಲಾಧಿಕಾರಿಗಳ ಗನ್​ಮ್ಯಾನ್ ವಿರುದ್ದ ಆಕ್ರೋಶ ಹೊರಹಾಕುತ್ತಿರುವ ಸಂಬಂಧಿಕರು. ಗ್ರಾಮದಲ್ಲಿ ಆವರಿಸಿದ ಸಶ್ಮಾನ ಮೌನ ವಾತವರಣ. ಯೆಸ್. ಇವೆಲ್ಲಾ ಡಿಸಿ ಸಾಹೇಬರ ಗನ್​ಮ್ಯಾನ್ ಮಾಡಿದ ಕಿರುಕುಳದ ಎಫೆಕ್ಟ್.. ಘಟನೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಹೆಸರು ರಾಜೇಶ್, ಶೇಖಪ್ಪ, ಜ್ಯೋತಿ, ಸುಶೀಲಮ್ಮ. ಬಳ್ಳಾರಿ ತಾಲೂಕಿನ ಕಮ್ಮರಚೇಡ್ ಗ್ರಾಮದ ನಿವಾಸಿಗಳಿವರು.

ಕಮ್ಮರಚೇಡ್ ಗ್ರಾಮದ ಪಟ್ಟಾ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಇವರೆಲ್ಲಾ ಸೋಮವಾರ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ರು. ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಇವರೆಲ್ಲಾ ಇದೀಗ ಸುಟ್ಟ ಗಾಯಗಳಿಂದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಪಕ್ಕದಲ್ಲೆ ವಾಟರ್ ಟ್ಯಾಂಕ್ ನಿರ್ಮಾಣ ಮಾಡುವ ವಿಚಾರವಾಗಿ ಬಳ್ಳಾರಿ ಜಿಲ್ಲಾಧಿಕಾರಿಗಳ ಗನ್​ಮ್ಯಾನ್ ನೀಡಿದ ಕಿರುಕುಳ ತಾಳದೇ ಇವರೆಲ್ಲಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕಮ್ಮರಚೇಡ್ ಗ್ರಾಮದ ರಾಜೇಶ ಕುಟುಂಬದವರ ಮನೆಯ ಪಕ್ಕದಲ್ಲಿ ವಾಟರ್ ಟ್ಯಾಂಕ್ ನಿರ್ಮಾಣ ಮಾಡುವ ವಿಚಾರ ಸಾಕಷ್ಟು ಪರ ವಿರೋಧ ವ್ಯಕ್ತವಾಗಿತ್ತು. ನಮ್ಮದೂ ಮನೆ ಚಿಕ್ಕದಿದೆ. ಮನೆಯ ಪಕ್ಕದಲ್ಲೆ ವಾಟರ್ ಟ್ಯಾಂಕ್ ಕಟ್ಟಬೇಡಿ. ನಮಗೆ ವಾಟರ್ ಟ್ಯಾಂಕ್ ಅವಶ್ಯಕತೆ ಇಲ್ಲ ಎಂದು ರಾಜೇಶ ಕುಟುಂಬಸ್ಥರು ವಾಟರ್ ಟ್ಯಾಂಕ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಆದ್ರೆ ಬಳ್ಳಾರಿ ಜಿಲ್ಲಾಧಿಕಾರಿಗಳ ಗನ್​ಮ್ಯಾನ್ ಆಗಿರುವ ಬಸವರಾಜ ವಾಟರ್ ಟ್ಯಾಂಕ್ ಕಟ್ಟುವ ವಿಚಾರದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಕ್ಕೆ ರಾಜೇಶ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆ.

ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರಿಗೆ ಗನ್​ಮ್ಯಾನ್ ಆಗಿರುವ ಬಸವರಾಜ ವಾಟರ್ ಟ್ಯಾಂಕ್ ನಿರ್ಮಾಣ ವಿಚಾರದಲ್ಲಿ ಸಾಕಷ್ಟು ಒತ್ತಡ ಹಾಕುತ್ತಿದ್ದರಂತೆ. ಅಲ್ಲದೇ ರಾಜೇಶರ ಮನೆಯ ಪಕ್ಕದಲ್ಲೆ ವಾಟರ್ ಟ್ಯಾಂಕ್ ಕಟ್ಟಿ ರಾಜೇಶ ಮನೆಯನ್ನ ತೆರವು ಮಾಡಿಸಬೇಕು ಅನ್ನೋದು ಬಸವರಾಜ ಕುತಂತ್ರವಾಗಿತ್ತಂತೆ.

ಹೀಗಾಗಿಯೇ ಗ್ರಾಮ ಪಂಚಾಯತಿ ಮತ್ತು ತಹಶೀಲ್ದಾರರ ಮೇಲೆ ಒತ್ತಡ ಹೇರಿ ರಾಜೇಶ ಮನೆಯ ಪಕ್ಕದಲ್ಲೆ ವಾಟರ್ ಟ್ಯಾಂಕ್ ಕಟ್ಟಿಸಲು ಬಸವರಾಜ ಒತ್ತಡ ಹೇರುತ್ತಿದ್ದರಂತೆ. ಆದ್ರೆ ರಾಜೇಶ ಮನವಿ ಮೇರೆಗೆ ಪಂಚಾಯತಿಯವರು ರಾಜಿ ಪಂಚಾಯತಿ ಮಾಡಿ ವಾಟರ್ ಟ್ಯಾಂಕ್ ನಿರ್ಮಾಣ ವಿಚಾರವನ್ನ ಕೈಬಿಟ್ರು ಗನ್​ಮ್ಯಾನ್ ಬಸವರಾಜ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳಿಗೆ ಒತ್ತಡ ಹಾಕಿ ರಾಜೇಶ ಮನೆಯನ್ನ ತೆರವು ಮಾಡಿಸಲು ಮುಂದಾಗಿದ್ದಾರೆ.

ಆ ಸಂದರ್ಭದಲ್ಲಿ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನಾಲ್ವರ ಪೈಕಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಡಿಸಿ ಗನ್​ಮ್ಯಾನ್ ಬಸವರಾಜ ಕಾರಣವಾಗಿದ್ದು, ಅವರ ವಿರುದ್ದ ಎಸ್ ಪಿ ಹಾಗೂ ಡಿಸಿಯವರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜೇಶ ಸಂಬಂಧಿಕರು ಆಗ್ರಹಿಸಿದ್ದಾರೆ.

ವಾಟರ್ ಟ್ಯಾಂಕ್ ನಿರ್ಮಾಣ ವಿಚಾರವನ್ನ ಗ್ರಾಮ ಪಂಚಾಯತಿಯವರು ಕೈಬಿಟ್ಟರೂ ಗನ್​ಮ್ಯಾನ್ ಬಸವರಾಜ ಅಧಿಕಾರಿಗಳಿಗೆ ಒತ್ತಡ ಹಾಕಿ ಕೆಲಸ ಮಾಡಿಸಲು ಮುಂದಾಗಿದ್ದರಂತೆ. ಅಲ್ಲದೇ ಜಿಲ್ಲಾಧಿಕಾರಿಗಳ ಹೆಸರು ಹೇಳಿಕೊಂಡು ಅಧಿಕಾರ ದುರುಪಯೋಗ ಪಡಿಸಿಕೊಂಡ ಬಸವರಾಜ ವಿರುದ್ದ ಕ್ರಮ ಕೈಗೊಳ್ಳಬೇಕು ಅನ್ನೋದು ಆತ್ಮಹತ್ಯೆಗೆ ಯತ್ನಿಸಿದವರ ಆಗ್ರಹವಾಗಿದೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಗನ್​ಮ್ಯಾನ್ ಕಡೆಯಿಂದ ತಪ್ಪು ಆಗಿದೆಯಾ ಅನ್ನೋದು ತನಿಖೆಯಿಂದ ಬಯಲಾಗಬೇಕಿದೆ.

ವರದಿ: ವೀರೇಶ್ ದಾನಿ, ಟಿವಿ9, ಬಳ್ಳಾರಿ 

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!