4.6 C
Munich
Monday, March 27, 2023

BAN vs ENG 2nd T20 Bangladesh beats England by 4 wickets | BAN vs ENG: ವಿಶ್ವ ವಿಜೇತ ಇಂಗ್ಲೆಂಡ್​ಗೆ ಎಂಥಾ ಮುಖಭಂಗ; ಆಂಗ್ಲರೆದುರು ಚೊಚ್ಚಲ ಟಿ20 ಸರಣಿ ಗೆದ್ದ ಬಾಂಗ್ಲಾ

ಓದಲೇಬೇಕು

BAN vs ENG: ನಾಲ್ಕು ತಿಂಗಳ ಹಿಂದೆ ಟಿ20 ವಿಶ್ವ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡವನ್ನು ಬಾಂಗ್ಲಾದೇಶ ಮೊದಲ ಟಿ20 ಸರಣಿಯಲ್ಲಿಯೇ ಸೋಲಿಸಿ ವಿಶ್ವ ದಾಖಲೆ ಬರೆದಿದೆ.

ಬಾಂಗ್ಲಾ- ಇಂಗ್ಲೆಂಡ್ ಟಿ20 ಸರಣಿ

ಸುಮಾರು 18 ವರ್ಷಗಳ ನಂತರ ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗಿದ್ದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ (Bangladesh and England) ನಡುವಿನ ಟಿ20 ಸರಣಿಗೆ ರೋಚಕ ಅಂತ್ಯ ಸಿಕ್ಕಿದೆ. ನಾಲ್ಕು ತಿಂಗಳ ಹಿಂದೆ ಟಿ20 ವಿಶ್ವ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡವನ್ನು ಬಾಂಗ್ಲಾದೇಶ ಮೊದಲ ಟಿ20 ಸರಣಿಯಲ್ಲಿಯೇ (T20 series) ಸೋಲಿಸಿ ವಿಶ್ವ ದಾಖಲೆ ಬರೆದಿದೆ. ಎರಡು ದಿನಗಳ ಹಿಂದೆ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಬಾಂಗ್ಲಾದೇಶ ಎರಡನೇ ಟಿ20ಯಲ್ಲಿಯೂ ಇಂಗ್ಲೆಂಡ್ ತಂಡವನ್ನು 4 ವಿಕೆಟ್​ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಚಿತ್ತಗಾಂಗ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಂತೆ, ಮತ್ತೊಮ್ಮೆ ಆತಿಥೇಯ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡಿ ಆಂಗ್ಲರನ್ನು ಅಲ್ಪ ರನ್​ಗಳಿಗೆ ಕಟ್ಟಿ ಹಾಕಿತು. ಮೊದಲ ಟಿ20ಯಲ್ಲಿ ಕೇವಲ 156 ರನ್ ಗಳಿಸಿದ್ದ ಇಂಗ್ಲೆಂಡ್, ಎರಡನೇ ಟಿ20ಯಲ್ಲಿಯೂ ಕಳಪೆ ಪ್ರದರ್ಶನ ನೀಡಿ ಕೇವಲ 117 ರನ್ ಗಳಿಸಲಷ್ಟೇ ಶಕ್ತವಾಯಿತು.

ಮಿರಾಜ್ ಮುಂದೆ ಮಂಡಿಯೂರಿದ ಇಂಗ್ಲೆಂಡ್

ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಬಾಂಗ್ಲಾದೇಶ ತಂಡದ ವೇಗಿಗಳು ಮತ್ತು ಸ್ಪಿನ್ನರ್‌ಗಳು ಒಟ್ಟಾಗಿ ಇಂಗ್ಲೆಂಡ್‌ನ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಇಂಗ್ಲೆಂಡ್ ಪರ ಬೆನ್ ಡಕೆಟ್ ಗರಿಷ್ಠ 28 ರನ್ (28 ಎಸೆತ) ಗಳಿಸಿದರೆ, ಆರಂಭಿಕ ಆಟಗಾರ ಫಿಲ್ ಸಾಲ್ಟ್ 25 ರನ್ (19 ಎಸೆತ) ಗಳಿಸಿದರು. ಇನ್ನುಳಿದಂತೆ ಮಿಕ್ಕ ಆಟಗಾರರು ಬಾಂಗ್ಲಾ ಬೌಲಿಂಗ್ ದಾಳಿಗೆ ಸೈಲೆಂಟ್ ಆಗಿ ಪೆವಿಲಿಯನ್ ಸೇರಿಕೊಂಡರು.

ಕಳೆದ ವರ್ಷ ಡಿಸೆಂಬರ್​ನಲ್ಲಿ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶದ ಗೆಲುವಿನ ಹೀರೋ ಆಗಿದ್ದ ಮೀರಜ್ ಈ ಬಾರಿ ವಿಶ್ವಚಾಂಪಿಯನರನ್ನು ಬೇಟೆಯಾಡುವಲ್ಲಿ ಯಶಸ್ವಿಯಾದರು. ಬಾಂಗ್ಲಾದೇಶದ ಈ ಆಟಗಾರ 4 ಓವರ್‌ ಬೌಲ್ ಮಾಡಿ, ಇದರಲ್ಲಿ 12 ರನ್ ನೀಡಿ 4 ವಿಕೆಟ್ ಪಡೆದರು.

Axar Patel: ಅಕ್ಷರ್ ಪಟೇಲ್ ಸ್ಫೋಟಕ ಸಿಕ್ಸ್ ಸಿಡಿಸಿದಾಗ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಏನು ಮಾಡಿದ್ರು ನೋಡಿ

ಬಾಂಗ್ಲಾ ಆರಂಭವೂ ಉತ್ತಮವಾಗಿರಲ್ಲಿಲ್ಲ

ಇಂಗ್ಲೆಂಡ್ ನೀಡಿದ ಅಲ್ಪ ರನ್​ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶದ ಆರಂಭವೂ ಉತ್ತಮವಾಗಿರಲಿಲ್ಲ. ಕೇವಲ 27 ರನ್‌ಗಳಿಸುವಷ್ಟರಲ್ಲೇ ತಂಡದ ಎರಡು ವಿಕೆಟ್ ಪತನಗೊಂಡಿದ್ದವು. ಇಂತಹ ಪರಿಸ್ಥಿತಿಯಲ್ಲಿ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತುಕೊಂಡ ನಜ್ಮುಲ್ ಹಸನ್ ಶಾಂಟೋ 47 ಎಸೆತಗಳಲ್ಲಿ 46 ರನ್ ಬಾರಿಸಿ ತಂಡಕ್ಕೆ 4 ವಿಕೆಟ್‌ಗಳ ಜಯ ತಂದುಕೊಟ್ಟರು. ಇದಕ್ಕೂ ಮುನ್ನ ನಡೆದ ಮೊದಲ ಟಿ20 ಪಂದ್ಯದಲ್ಲಿಯೂ ಗೆಲುವಿನ ಇನ್ನಿಂಗ್ಸ್ ಆಡಿದ್ದ ಶಾಂಟೋ, 30 ಎಸೆತಗಳಲ್ಲಿ 51 ರನ್ ಗಳಿಸಿ ಬಾಂಗ್ಲಾದೇಶಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.

ಬಾಂಗ್ಲಾ ಗೆಲುವಿನಲ್ಲಿ ಶಾಂಟೋ ಮಾತ್ರವಲ್ಲದೆ, ಮೀರಜ್ ಕೂಡ ಬೌಲಿಂಗ್ ಹಾಗೂ ಬ್ಯಾಟಿಂಗ್​ ಎರಡರಲ್ಲೂ ಮಹತ್ವದ ಕೊಡುಗೆ ನೀಡಿದರು. ಮೊದಲು ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿದ ಮಿರಾಜ್, ನಂತರ ಬ್ಯಾಟಿಂಗ್​ನಲ್ಲಿ 16 ಎಸೆತಗಳಲ್ಲಿ 20 ರನ್‌ಗಳ ಇನ್ನಿಂಗ್ಸ್‌ ಆಡಿದರು. ಅಲ್ಲದೆ ಶಾಂಟೋ ಅವರೊಂದಿಗೆ 41 ರನ್‌ಗಳ ಪ್ರಮುಖ ಜೊತೆಯಾಟವನ್ನಾಡಿ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು. ಈ ಆಲ್ ರೌಂಡ್ ಪ್ರದರ್ಶನಕ್ಕಾಗಿ ಮೀರಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!