2.1 C
Munich
Monday, March 27, 2023

Belagavi: Two boys died after drowning in a farm pit near Yaduguda | Belagavi: ಯಾದಗೂಡ ಬಳಿ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

ಓದಲೇಬೇಕು

ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವನ್ನಪ್ಪಿರುಂತಹ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ನಡೆದಿದೆ.

ಕೃಷಿ ಹೊಂಡ

ಬೆಳಗಾವಿ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವನ್ನಪ್ಪಿರುಂತಹ (died) ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ನಡೆದಿದೆ. ಯಮನಪ್ಪ ರೆಡ್ಡಿರಟ್ಟಿ(10), ಯೇಸು ಬಸಪ್ಪ(14) ಮೃತರು. ಕ್ರಿಕೆಟ್​ ಆಡಿದ ನಂತರ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದಾಗ ದುರಂತ ನಡೆದಿದೆ. ಮುಳುಗುತ್ತಿದ್ದ ಯಮನಪ್ಪನನ್ನು ರಕ್ಷಿಸಲು ಹೋಗಿ ಯೇಸು ಕೂಡ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಜೆ.ಡಿ.ದೊಡ್ಡಿ ಗ್ರಾಮದಲ್ಲಿ ನಡೆದುಕೊಂಡು ಹೋಗುವಾಗ ತೆಂಗಿನಮರ ಬಿದ್ದು ವೃದ್ಧ ಮೃತಪಟ್ಟಿದ್ದಾರೆ. ಪುಟ್ಟಸ್ವಾಮಿ(69) ಸ್ಥಳದಲ್ಲೇ ಮೃತಪಟ್ಟ ವೃದ್ಧ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಾವಿಯಲ್ಲಿ ಅಪರಿಚಿತ ಯುವಕ, ಯುವತಿಯ ಶವ ಪತ್ತೆ

ವಿಜಯಪುರ: ಬಾವಿಯಲ್ಲಿ ಅಪರಿಚಿತ ಯುವಕ, ಯುವತಿಯ ಶವ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ತಿಕೋಟಾ ಪಟ್ಟಣದ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತಿಳಿದು ಬಂದಿಲ್ಲಾ. ಯವಕ, ಯುವತಿಯ ಶವಗಳ ಹೆಸರು ವಿಳಾಸ ತಿಳಿದು ಬಂದಿಲ್ಲಾ. ಪೊಲೀಸರ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bengaluru: ಸಿನಿಮೀಯ ರೀತಿಯಲ್ಲಿ ಸಾಕು ನಾಯಿ ಕದ್ದು ಪರಾರಿಯಾದ ಕಳ್ಳರು; ವಿಡಿಯೋ ವೈರಲ್​

ಅಂತರಾಜ್ಯ ಬೈಕ್ ಕಳ್ಳರ ಬಂಧನ

ಬೀದರ್: ಮೂವರು ಅಂತಾರಾಜ್ಯ ಕಳ್ಳರನ್ನು ಬಗದಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ವಿವಿಧ ಕಂಪನಿಗೆ ಸೇರಿರುವ 14 ಬೈಕ್​ಗಳನ್ನು ಜಪ್ತಿ ಮಾಡಲಾಗಿದೆ. ಹೈದರಾಬಾದ್ 8, ಜಹಿರಾಬಾದ್ 1, ಬೀದರ್​ನ 5 ಕಡೆಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬಗದಲ್ ಠಾಣೆ ಪೊಲೀಸರ ಕಾರ್ಯಕ್ಕೆ ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಶ್ಲಾಘನೆ ವ್ಯಕ್ತಪಡಿಸುವುದರೊಂದಿಗೆ ಬಹುಮಾನ ವಿತರಣೆ ಮಾಡಿದ್ದಾರೆ.

ಸ್ಕಾರ್ಪಿಯೋ ಕಾರು ಪಲ್ಟಿ: ಓರ್ವ ವ್ಯಕ್ತಿ ಸಾವು  

ಬೀದರ್: ಎದುರುಗಡೆ ಬರುತ್ತಿದ್ದ ವ್ಯಕ್ತಿಯನ್ನ ಬಚಾವು ಮಾಡಲು ಹೋಗಿ ಸ್ಕಾರ್ಪಿಯೋ ಕಾರು ಪಲ್ಟಿಯಾಗಿದ್ದು ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಜಿಲ್ಲೆಯ ಹುಲಸೂರ ತಾಲೂಕಿನ ರಾಷ್ಟೀಯ ಹೆದ್ದಾರಿ 752 ರ ಸೋಲದಾಬಕಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ವಿರೇಶ್ ವೃತಪಟ್ಟಿದ್ದು, ಐದು ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಹುಲಸೂರ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಭಾಲ್ಕಿ ತಾಲೂಕಿನ ಸಿದ್ದಾಪುರ ವಾಡಿ ಗ್ರಾಮದ ಮದುವೆಗೆ ತೆರಳುತ್ತಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ಚಿತ್ರದುರ್ಗ: ಕೆರೆಯಲ್ಲಿ ಯುವಕನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್​; ಗೆಳೆಯರೇ ಸೇರಿ ಕೊಲೆ ಮಾಡಿದ್ದಾರೆಂದು ಆರೋಪ

ವಿದ್ಯುತ್​ ಪ್ರವಹಿಸಿ ತಾಯಿ ಸೇರಿ ಇಬ್ಬರು ಮಕ್ಕಳು ಸಾವು

ಕಲಬುರಗಿ: ಚಿಂಚೋಳಿ ಪಟ್ಟಣದ ದನಗರ ಗಲ್ಲಿಯಲ್ಲಿ ವಿದ್ಯುತ್​ ಪ್ರವಹಿಸಿ ತಾಯಿ ಝರಣಮ್ಮ ಅಂಬಣ್ಣ(44), ಮಕ್ಕಳಾದ ಸುರೇಶ್​​(16), ಮಹೇಶ್​(18) ಸಾವನ್ನಪ್ಪಿದ್ದಾರೆ. ನಿನ್ನೆ(ಮಾ.18) ರಾತ್ರಿ ಚಿಂಚೋಳಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಸಹೋದರರು ದನಗಳಿಗೆ ಸಂಗ್ರಹಿಸಿದ್ದ ಮೇವು ಮುಚ್ಚಲು ಹೋಗಿದ್ದರು. ಈ ವೇಳೆ ಸರ್ವಿಸ್ ವೈಯರ್​ ತುಂಡಾಗಿ ನೀರಲ್ಲಿ ಬಿದ್ದಿದೆ. ಇದನ್ನ ಗಮನಿಸದೇ ಒಬ್ಬರ ಹಿಂದೆ ಒಬ್ಬರು ಏನಾಗಿದೆ ಎಂದು ನೊಡಲು ಬಂದಾಗ ಕರೆಂಟ್​ ಹೊಡೆದು ತಾಯಿ ಹಾಗೂ 2 ಮಕ್ಕಳು ಸಾವನ್ನಪ್ಪಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲರ ಮೃತದೇಹವನ್ನ ಸರಕಾರಿ ಆಸ್ಪತ್ರೆ ತಂದಿರುತ್ತಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!