11.8 C
Munich
Wednesday, March 8, 2023

Belagavi: women attempts suicide by poisoning children in front of DC’s office | ಸಾಲ ಮಾಡಿ ತಲೆಮರೆಸಿಕೊಂಡ ತಂದೆ: ಡಿಸಿ ಕಚೇರಿ ಮುಂದೆ ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಓದಲೇಬೇಕು

ಮೂವರು ಮಕ್ಕಳಿಗೆ ವಿಷವುಣಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ನಡೆದಿದೆ. ಕೂಡಲೇ ಅಸ್ವಸ್ಥ ತಾಯಿ, ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಬೆಳಗಾವಿ: ಮೂವರು ಮಕ್ಕಳಿಗೆ ವಿಷವುಣಿಸಿ ತಾಯಿಯೂ ಆತ್ಮಹತ್ಯೆಗೆ (suicide attempts)  ಯತ್ನಿಸಿರುವಂತಹ ಘಟನೆ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ನಡೆದಿದೆ. ಕೂಡಲೇ ಅಸ್ವಸ್ಥ ತಾಯಿ, ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಸ್ವತಿ ಹಂಪನ್ನವರ್ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಸಾಲಗಾರರ ಕಿರುಕುಳಕ್ಕೆ ಬೇಸತ್ತು ಡಿಸಿ ಕಚೇರಿಗೆ ಬಂದಿದ್ದಾರೆ. ಆದರೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ಸಾಧ್ಯವಾಗಿಲ್ಲ. ಹಾಗಾಗಿ ಮನನೊಂದು ಜ್ಯೂಸ್ ಅಂತಾ ಹೇಳಿ ಮಕ್ಕಳಿಗೆ ಫಿನಾಯಿಲ್ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಡಿಸಿ ಕಚೇರಿ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ತಾಯಿ ಹಾಗೂ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಸರಸ್ವತಿ ಮೂಲತಃ ಬೆಳಗಾವಿ ನಗರದ ಅನಗೋಳದ ನಿವಾಸಿ. ಪತಿ ಅದೃಶಪ್ಪರೊಂದಿಗೆ ಬೆಳಗಾವಿಯಲ್ಲಿ ನೆಲೆಸಿದ್ದರು. ಕಟ್ಟಿಂಗ್​ ಸಲೂನ್​ನಲ್ಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆ ಮಾಡಿಕೊಂಡು ಅದೃಶಪ್ಪ ಕುಟುಂಬ ಸಲಹುತ್ತಿದ್ದರು. ಪತ್ನಿ ಮತ್ತು ಮೂವರು ಮಕ್ಕಳ ಜೀವನ ನಿರ್ವಹಣೆಗಾಗಿ ಅದೃಶಪ್ಪ ಸಾಕಷ್ಟು ಜನರ ಕಡೆ ಸಾಲ ಮಾಡಿದ್ದಾರೆ. ದಿನಕಳೆದಂತೆ ಸಾಲಗಾರರ ಕಾಟ ಹೆಚ್ಚಾಗಿದ್ದರಿಂದ ಕಳೆದ 15 ದಿನಗಳಿಂದ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಫ್ಯಾನ್​ಗೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ; ಹಾಸ್ಟೆಲ್​ ಸಿಬ್ಬಂದಿ ವಿರುದ್ಧ ಮೃತ ವರ್ಷಿತಾ ಪೋಷಕರ ಆರೋಪ

ಈಜಲು ಹೋಗಿ ಸಮುದ್ರದ ಅಲೆಗೆ ಸಿಲುಕಿದ್ದ ಐವರು ಪ್ರವಾಸಿಗರ ರಕ್ಷಣೆ

ಉತ್ತರ ಕನ್ನಡ: ಈಜಲು ಹೋಗಿ ಸಮುದ್ರದ ಅಲೆಗೆ ಸಿಲುಕಿದ್ದ ಐವರು ಪ್ರವಾಸಿಗರ ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್​​ನಲ್ಲಿ ನಡೆದಿದೆ. ಹಾವೇರಿ ಮೂಲದ ಅಮನ್(32), ನವಾಜ್(31), ಅಭಿಷೇಕ್​(30), ಹುಬ್ಬಳ್ಳಿ ಮೂಲದ ವರದರಾಜ್(22), ಸಂಜಯ್ ಕುಮಾರ್(22) ರಕ್ಷಣೆ ಮಾಡಲಾದ ಪ್ರವಾಸಿಗರು. ಶೇಖರ್ ಪೂಜಾರಿ, ನವೀನ್ ಅಂಬಿಗ, ನಾಗೇಂದ್ರ ಎಂಬುವರಿಂದ ರಕ್ಷಣೆ ಮಾಡಲಾಗಿದೆ. ಗೋಕರ್ಣ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಪ್ರತ್ಯೇಕ ಎರಡು ಶವಗಳು ಪತ್ತೆ

ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದ ಸಮೀಪ ಕಾಲುವೆಯಲ್ಲಿ ಪ್ರತ್ಯೇಕ ಎರಡು ಶವಗಳು ಪತ್ತೆಯಾಗಿವೆ. ಯಲ್ಲಪ್ಪ ಗುಡದಪ್ಪಗೋಳ(30), ರಾಜಾಸಾಬ್ ಕಲಾಲ್(35) ಎಂಬುವವರೇ ಮೃತ ರ್ದುದೈವಿಗಳು. ಕುಡಿದ ಮತ್ತಿನಲ್ಲಿ ಮೂರು ದಿನಗಳ ಹಿಂದೆ ಯಲ್ಲಪ್ಪ ಎಂಬುವವರು ಕಾಲುವೆಗೆ ಬಿದ್ದಿದ್ದರು. ಇದಾದ ಬಳಿಕ ನಿನ್ನೆ(ಮಾ.7) ಬಟ್ಟೆ ತೊಳೆಯಲು ಹೋಗಿ ರಾಜಾಸಾಬ್ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದ್ದರು. ಇದೀಗ ಸ್ವಲ್ಪ ದೂರದಲ್ಲಯೇ ಇಬ್ಬರು ಶವಗಳು ಪತ್ತೆಯಾಗಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಬ್ಯೂಟಿ ಮರ್ಡರ್​: ಮಹಿಳೆಯ ಕಾಲು ಬಿಟ್ಟು ದೇಹವೆಲ್ಲ ಸುಟ್ಟಿತ್ತು, ಪೊಲೀಸರ ಸಮಯಪ್ರಜ್ಞೆಯಿಂದ ಗುರುತು ಪತ್ತೆ, ಜೊತೆಗೆ ಒಂದೇ ಗಂಟೆಯಲ್ಲಿ ಆರೋಪಿ ಅಂದರ್​!

ಜಗಳ ಬಿಡಿಸಲು ಹೋದ ಯುವಕನ ಬರ್ಬರ ಕೊಲೆ

ಬೆಳಗಾವಿ: ಜಗಳ ಬಿಡಿಸಲು ಹೋದ ಯುವಕ ಬರ್ಬರ ಕೊಲೆಯಾಗಿರುವಂತಹ ಘಟನೆ ಜಿಲ್ಲೆಯ ಹೊರವಲಯ ಮಚ್ಚೆ ಬಳಿಯ ಯಳ್ಳೂರು ರಸ್ತೆಯಲ್ಲಿ ನಡೆದಿದೆ. ಸ್ಕ್ರೂಡ್ರೈವರ್​​ನಿಂದ ಎದೆಗೆ ಚುಚ್ಚಿ ಪ್ರತೀಕ್ ಲೋಹಾರ್(21) ಹತ್ಯೆ ಮಾಡಲಾಗಿದೆ. ತನ್ನ ಸ್ನೇಹಿತನ ಜತೆ ಕೆಲ ಯುವಕರು ಜಗಳವಾಡುತ್ತಿದ್ದಾರೆ. ಜಗಳ ಬಿಡಿಸಲು ಹೋದ ಪ್ರತೀಕ್​ನನ್ನು ದುಷ್ಕರ್ಮಿಗಳು ಕೊಂದಿದ್ದಾರೆ. ಈ ಹಿಂದೆಯೂ ಪ್ರತೀಕ್ ಜತೆ ಇದೇ ಗ್ಯಾಂಗ್ ಜಗಳ ಮಾಡಿತ್ತು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!