1.6 C
Munich
Saturday, February 25, 2023

Bengaluru: Arrest of inter-state drug peddlers who were selling drugs | ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರ್ ​ರಾಜ್ಯ ಡ್ರಗ್ ಪೆಡ್ಲರ್​ಗಳ ಬಂಧನ

ಓದಲೇಬೇಕು

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರ್​ರಾಜ್ಯ ಡ್ರಗ್ ಪೆಡ್ಲರ್​ಗಳನ್ನು ಇದೀಗ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದು, 50 ಲಕ್ಷ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರ್​ರಾಜ್ಯ ಡ್ರಗ್ ಪೆಡ್ಲರ್​ಗಳನ್ನು ಇದೀಗ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಮಪೀನ್, ಮನ್ಸೂರ್, ಅಭಿಷೇಕ್, ಅಕ್ಷಯ್ ಶಿವನ್, ಅರ್ಜುನ್, ಅಖಿಲ್, ಜೋಯಲ್, ಪೃಥ್ವಿನ್ ಸೇರಿ ಒಟ್ಟು ಎಂಟು ಜನರನ್ನ ಬಂಧಿಸಲಾಗಿದೆ. ಬಂಧಿತರು ಕೇರಳ ಹಾಗೂ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದ್ದು, ಅವರಿಂದ 50 ಲಕ್ಷ ಮೌಲ್ಯದ ಮಾದಕ ವಸ್ತು ಜೊತೆಗೆ ಕೃತ್ಯಕ್ಕೆ ಬಳಸಿದ್ದ 1 ಕಾರು, 1 ದ್ವಿಚಕ್ರ ವಾಹನ ಸೇರಿ 7 ಮೊಬೈಲ್​ನ್ನು ವಶಕ್ಕೆ ಪಡೆಯಲಾಗಿದೆ.

ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಬೆಂಗಳೂರು: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂದಿನಿ ಲೇಔಟ್​​​ನ ಜೈ ಮಾರುತಿ ನಗರದಲ್ಲಿ ನಡೆದಿದೆ. ಕಾವ್ಯಾ(23) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ರ್ದುದೈವಿ, 9 ದಿನಗಳ ಹಿಂದೆಯಷ್ಟೇ ಈ ಕುಟುಂಬ ಜೈ ಮಾರುತಿ ನಗರಕ್ಕೆ ಬಂದು ನೆಲೆಸಿದ್ದರು. ಇನ್ನು ಕಾವ್ಯಾ 8 ವರ್ಷಗಳ ಹಿಂದೆ ವೆಂಕಟೇಶ್ ಎಂಬುವವರ ಜೊತೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ.

ಮೂಲತಃ ಮೈಸೂರಿನವರಾದ ವೆಂಕಟೇಶ್ ಬಂಡೆ ಕೆಲಸ ಮಾಡುತ್ತಿದ್ದಾನೆ. ಈ ಸಂಬಂಧ ಇತ ಮೂರು ದಿನಕ್ಕೊಮ್ಮೆ ಮನೆಗೆ ಹೋಗುತ್ತಿದ್ದನಂತೆ. ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿ ಕಾವ್ಯಾ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ನಂದಿ‌ನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!