-1.4 C
Munich
Thursday, March 16, 2023

bengaluru: Fraud of Rs 2.5 crore by claiming to be an IPS officer And also visited some police stations as a probationary SP | IPS ಅಧಿಕಾರಿ ಅಂತೇಳಿ 2.5 ಕೋಟಿ ರೂ. ವಂಚನೆ, ಪ್ರೊಬೇಷನರಿ SP ಎಂದು ಕೆಲ ಪೊಲೀಸ್ ಠಾಣೆಗಳಿಗೂ ಭೇಟಿ ಕೊಟ್ಟಿದ್ದ ಖದೀಮ

ಓದಲೇಬೇಕು

ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ 2.5 ಕೋಟಿ ವಂಚನೆ ಮಾಡಿರುವ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ತಾನು ಐಪಿಎಸ್(IPS) ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ 2.5 ಕೋಟಿ ವಂಚನೆ ಮಾಡಿರುವ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀನಿವಾಸ್ ಎಂಬಾತನೇ ಐಪಿಎಸ್​ ಎಂದು ವಂಚಿಸಿದ ಆರೋಪಿ. ತಾನು ಪ್ರೊಬೇಷನರಿ ಎಸ್​.ಪಿ ಎಂದು ಕೆಲ ಪೊಲೀಸ್ ಠಾಣೆಗಳಿಗೂ ಸಮವಸ್ತ್ರದಲ್ಲೆ ಹೋಗಿದ್ದನಂತೆ. ಈ ವೇಳೆ ತಲಘಟ್ಟಪುರ ನಿವಾಸಿ ಒರ್ವರಿಗೆ ಪರಿಚಯವಾಗಿದ್ದಾನೆ. ಬಳಿಕ ತಾನು ಮೈಸೂರಿನಲ್ಲಿ ಪ್ರಸ್ತುತ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿ, ಮೈಸೂರಿನ ಲ್ಯಾಂಡ್ ವ್ಯವಹಾರದಲ್ಲಿ 450ಕೋಟಿ ವ್ಯವಹಾರ ಇದೆ ಅದು ಡೀಲ್ ಆದ್ರೆ 250 ಕೋಟಿ ಸಿಗುತ್ತೆ ಎಂದು ನಂಬಿಸಿ. ಸದ್ಯ ಒಂದಷ್ಟು ಹಣ ಬೇಕು ಎಂದು ಕೇಳಿದ್ದಾನೆ. ನಂತರ ಹಂತ ಹಂತವಾಗಿ 2.5 ಕೋಟಿ ರೂ ಪಡೆದು ವಂಚನೆ ಮಾಡಿದ್ದಾನೆ. ಘಟನೆ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನಕಲಿ ಐಪಿಎಸ್ ಅಧಿಕಾರಿ ಶ್ರೀನಿವಾಸ್ ವಿರುದ್ದ ಕೇಸ್ ದಾಖಲಾಗಿದೆ.

 ಮಿಲಿಟರಿ ಡ್ರೆಸ್ ಧರಿಸಿ ಕೋಟಿ ಕೋಟಿ ವಂಚನೆ; ಬೆಂಗಳೂರಿನಲ್ಲಿ ಯುವತಿ ಅರೆಸ್ಟ್

ಬೆಂಗಳೂರು: ಮಿಲಿಟರಿ ಡ್ರೆಸ್ ಹಾಕಿಕೊಂಡು DRDO ಕಮಾಂಡರ್ ಎಂದು ಹೇಳಿಕೊಂಡು 5 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ ಅಸ್ಸಾಂ ಮೂಲದ ದರ್ಶನಾ ಭಾರದ್ವಾಜ್​ ಎಂಬ ಮಹಿಳೆಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತ ದರ್ಶನಾ ಭಾರದ್ವಾಜ್ ಅವರನ್ನ ತೀವ್ರ ವಿಚಾರಣೆ ನಡೆಸಿದ್ದಾರೆ. ಆರೋಪಿ ದರ್ಶನಾಳ ಮೇಲೆ ನಗರದ ಮೂರು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ಸೇನೆ ಹೆಸರಿನಲ್ಲಿ DRDO ಕಮಾಂಡರ್ ಎಂದು ಹೇಳಿಕೊಂಡು 5 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾಳೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಅನೇಕ ಸಂಗತಿಗಳು ಬಯಲಾಗುತ್ತಿವೆ. ದರ್ಶನಾಳಿಗೆ ನಗರದ ಬಿಲ್ಡರ್​ಗಳೇ ಮೇನ್ ಟಾರ್ಗೆಟ್.

ಇದನ್ನೂ ಓದಿ:Duplicate gold: ನಕಲಿ ಚಿನ್ನದ ದೋಖಾ -ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬೆಣ್ಣೆ ಮಾತುಗಳಿಗೆ ಕರಗಿ ಲಕ್ಷ ಲಕ್ಷ ರೂ ಕಳೆದುಕೊಂಡ ರೈತ!

ಇನ್ನು ಈ ವಂಚಕಿ ಸೇನೆಯ ಕಟ್ಟಡ ನಿರ್ಮಾಣ ಹಾಗೂ ಮೇಂಟೆನೆನ್ಸ್ ಟೆಂಡರ್ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದಳು. DRDO ವೆಬ್ ಸೈಟ್​ನಲ್ಲಿರುವ ಟೆಂಡರ್ ತೋರಿಸಿ 40 ಕೋಟಿ, 20 ಕೋಟಿ, 10 ಕೋಟಿ ಯಾವ ಟೆಂಡರ್ ಬೇಕು ಅದನ್ನ ಮಾಡಿಸ್ತೀನಿ ಅಂತಿದ್ಳು. ಸುಮಾರು 66 ಕೋಟಿ ಪ್ರಾಜೆಕ್ಟ್ ಕೊಡಿಸುವುದಾಗಿ ಮೂವರು ಬಿಲ್ಡರ್​ಗಳಿಗೆ ವಂಚನೆ ಮಾಡಿದ್ದಾಳೆ. ಸುಮಾರು 5 ಕೋಟಿಗೂ ಅಧಿಕ ಹಣವನ್ನು ಪಡೆದು ವಂಚಿಸಿದ್ದಾಳೆ.

ಇನ್ನಷ್ಟು ರಾಜ್ಯಸುದ್ಇಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!