10.5 C
Munich
Thursday, March 30, 2023

Bengaluru Meeting of the Wise Amit Shah criticise Congress Jds in Interaction with the mature at bengaluru news in kannada | ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ, ನಮ್ಮ ಯೋಜನೆಗಳು ಧರ್ಮಾಧಾರಿತವಲ್ಲ: ಅಮಿತ್ ಶಾ

ಓದಲೇಬೇಕು

ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ. ನಮ್ಮ ಯೋಜನೆಗಳು ಧರ್ಮಾಧಾರಿತ ಅಲ್ಲ. ವಿಕಾಸದ ಹಾದಿಯಲ್ಲಿ ನಾವು ಎಲ್ಲಾ ವರ್ಗದವರನ್ನೂ ಜೊತೆಗೆ ಕರೆದೊಯ್ಯುತ್ತಿದ್ದೇವೆ ಎಂದು ಅಮಿತ್ ಶಾ ಅವರು ಪ್ರಬುದ್ಧರ ಜೊತೆಗಿನ ಸಂವಾದದಲ್ಲಿ ಹೇಳಿಕೆ ನೀಡಿದರು.

ಬಸವರಾಜ ಬೊಮ್ಮಾಯಿ (ಎಡ ಭಾಗದಲ್ಲಿ) ಅಮಿತ್ ಶಾ (ಮಧ್ಯ ಭಾಗದಲ್ಲಿ)

ಬೆಂಗಳೂರು: ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ. ನಮ್ಮ ಯೋಜನೆಗಳು ಧರ್ಮಾಧಾರಿತ ಅಲ್ಲ. ವಿಕಾಸದ ಹಾದಿಯಲ್ಲಿ ನಾವು ಎಲ್ಲಾ ವರ್ಗದವರನ್ನೂ ಜೊತೆಗೆ ಕರೆದೊಯ್ಯುತ್ತಿದ್ದೇವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪ್ರಬುದ್ಧರ ಜೊತೆಗಿನ ಸಂವಾದದಲ್ಲಿ ಹೇಳಿಕೆ ನೀಡಿದರು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಪ್ರಬುದ್ಧರ ಸಭೆಯಲ್ಲಿ ಭಾರತೀಯ ರಾಜಕೀಯ ವ್ಯವಸ್ಥೆ- 65 ವರ್ಷಗಳ ದೇಶದ ರಾಜಕೀಯ ಸ್ಥಿತಿಗತಿ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಆದ ಮನ್ವಂತರ ವಿಷಯದ ಕುರಿತು ನಡೆದ ಸಂವಾದ (Interaction with the mature) ದಲ್ಲಿ ಮಾತನಾಡಿದ ಅಮಿತ್ ಶಾ (Amit Shah) ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಟೀಕಿಸಿದರು. ಜೆಡಿಎಸ್ ಪರಿವಾರವಾದಕ್ಕೆ ಅಂಟಿಕೊಂಡಿದ್ದು, ಮನೆಯ ಸದಸ್ಯರೆಲ್ಲರೂ ರಾಜಕೀಯದಲ್ಲಿದ್ದಾರೆ. ಮನೆ ಯಾರು ನಡೆಸುತ್ತಾರೋ ಅಂತ ಅಚ್ಚರಿ ಆಗುತ್ತದೆ ನನಗೆ. ಕಾಂಗ್ರೆಸ್ ಪಕ್ಷ ಪೂರ್ಣ ಕುಟುಂಬ ರಾಜಕಾರಣ ಒಳಗೊಂಡಿದೆ. ಇವೆರಡೂ ಪಕ್ಷಗಳಿಗಿಂತ ವಿಭಿನ್ನ ಪಕ್ಷ ಬಿಜೆಪಿಯಾಗಿದೆ. ನಮ್ಮ ಪಕ್ಷ ಪರಿವಾರವಾದವನ್ನು ಬಲವಾಗಿ ವಿರೋಧಿಸುತ್ತದೆ. ಬ್ರಿಟಿಷ್ ಅಧಿಕಾರಿಯಿಂದ ಸ್ಥಾಪಿತವಾದ ಪಕ್ಷ ಕಾಂಗ್ರೆಸ್, ಬ್ರಿಟಿಷರ ಮನಸ್ಥಿತಿಯನ್ನೇ ಒಳಗೊಂಡಿದೆ. ಆದರೆ ನಮ್ಮ ಪಕ್ಷದ ಐಡಿಯಾಲಜಿ ಸಾಂಸ್ಕೃತಿಕ ರಾಷ್ಟ್ರವಾದ ಆಗಿದೆ ಎಂದರು.

ನಾವು ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿಲ್ಲ. ನಮ್ಮ ಯೋಜನೆಗಳು ಧರ್ಮಾಧಾರಿತ ಅಲ್ಲ. ವಿಕಾಸದ ಹಾದಿಯಲ್ಲಿ ನಾವು ಎಲ್ಲಾ ವರ್ಗದವರನ್ನೂ ಜೊತೆಗೆ ಕರೆದೊಯ್ಯುತ್ತಿದ್ದೇವೆ. ಅದರ ಪರಿಣಾಮವಾಗಿ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಬಂದ ನಂತರದ ಪರಿಸ್ಥಿತಿ‌ ಮತ್ತು ಮುಂಚಿನ ಪರಿಸ್ಥಿತಿಗಳನ್ನು ಗಮನಿಸಿ, ಬಿಜೆಪಿ ಅಧಿಕಾರಕ್ಕೆ ಬರುವ ಮುಂಚಿನ 60 ವರ್ಷಗಳಲ್ಲಿ ದೇಶ ಭ್ರಷ್ಟಾಚಾರ ಅಗಾಧವಾಗಿತ್ತು. ಮಂತ್ರಿಗಳೆಲ್ಲಾ ತಾವೇ ಪ್ರಧಾನಿ ಎಂಬ ಭಾವನೆಯಿಂದ ವರ್ತಿಸುತ್ತಿದ್ದರು ಎಂದರು.

ಯಾವ ಪಕ್ಷ ಉತ್ತಮ ಅಂತ ಜನ ಅಧ್ಯಯನ ನಡೆಸಿ‌ ತಿಳಿಯಲಿ: ಅಮಿತ್ ಶಾ

2014ರ‌ ಬಳಿಕ ದೇಶದ ಚಿತ್ರಣ ಬದಲಾಗುತ್ತಾ ಬಂತು. 2014ರ ನಂತರದ ಭಾರತವೇ ಬೇರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಐಡಿಯಾಲಜಿ ಎಲ್ಲರ ಮುಂದೆ ಇದೆ. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆ, ಕಾರ್ಯಕ್ರಮಗಳ ಅಧ್ಯಯನ, ಅಂಕಿ ಅಂಶಗಳ ಅಧ್ಯಯನ ಮಾಡಿಯೇ ಜನ ನಿರ್ಧರಿಸಲಿ. ಯಾವ ಪಕ್ಷ ಉತ್ತಮ ಅಂತ ಜನ ಅಧ್ಯಯನ ನಡೆಸಿ‌ ತಿಳಿಯಲಿ ಎಂದರು.

ದೇಶದ ಜನತೆಗೆ ಪ್ರಮಾಣ ಪತ್ರಗಳ ಜೊತೆಗೆ ಉಚಿತ ಕೋವಿಡ್‌ ಲಸಿಕೆ ಕೊಡಲಾಯಿತು. ಅಮೆರಿಕದಿಂದ ನನ್ನ ಸಹೋದರಿ ಇತ್ತೀಚೆಗೆ ಬಂದಾಗ ಅವರ ಬಳಿ ಕೋವಿಡ್ ಲಸಿಕೆಯ ಪ್ರಮಾಣ ಪತ್ರ ಇರಲಿಲ್ಲ. ನಮ್ಮ ದೇಶದ ಮಾದರಿ ಬೇರೆಯಾಗಿದ್ದು, ಎಲ್ಲರಿಗಿಂತ ಉನ್ನತ ಮಾದರಿಯದ್ದಾಗಿದೆ. ಈ ದೇಶದಲ್ಲಿ ಹತ್ತು ಕೋಟಿ ಮನೆಗಳಲ್ಲಿ ಶೌಚಾಲಯ ಇರಲಿಲ್ಲ. ಆ ಕುಟುಂಬಗಳ ಮಹಿಳೆಯರಿಗಾಗುತ್ತಿದ್ದ ಹಿಂಸೆ, ಮುಜುಗರ ಬಗ್ಗೆ ಯೋಚಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದರು. ಗ್ಯಾಸ್, ವಿದ್ಯುತ್ ಒದಗಿಸಿದರು ಎಂದರು.

ಇದನ್ನೂ ಓದಿ: Sandur: ವೇದಿಕೆಯ ಮೇಲೆ ಅಮಿತ್ ಶಾ ತೋರಿದ ಅವಸರದ ಪ್ರವೃತ್ತಿ ಮತ್ತು ಬಿಎಸ್ ಯಡಿಯೂರಪ್ಪ ಸನ್ಮಾನ ನಿರಾಕರಿಸಿದ್ದು ಜನಕ್ಕೆ ಅರ್ಥವಾಗಲಿಲ್ಲ!

ಮೋದಿ ಯೋಜನೆಗಳೆಲ್ಲಾ ಜನರಿಗಾಗಿ: ಅಮಿತ್ ಶಾ

ಅಂದು ದೇಶದಲ್ಲಿ 80 ಕೋಟಿ ಜನರು ಬಡತನದಲ್ಲಿ ಬೇಯುತ್ತಿದ್ದರು. ಇವತ್ತು ‌ಈ ಜನರ ಮನೆಗಳಲ್ಲಿ ನೆಮ್ಮದಿ ಇದೆ, ನೆಮ್ಮದಿಯ ಊಟ ಸಿಗುತ್ತಿದೆ. ಜಾತಿವಾದ, ಕುಟುಂಬವಾದ, ತುಷ್ಟೀಕರಣ ಈ‌ ಮೂರೂ ದೇಶಕ್ಕೆ ದೊಡ್ಡ ಪಿಡುಗುಗಳಾಗಿದ್ದವು. ಈ ಮೂರೂ ಪಿಡುಗುಗಳನ್ನೂ ನಮ್ಮ ಸರ್ಕಾರ ತೊಲಗಿಸಿತು. ಜನರಿಗಾಗಿ ಮೋದಿಯವರು ಕಾರ್ಯಕ್ರಮಗಳನ್ನು ತಂದರು. ಮೋದಿ ಜನ ಮೆಚ್ಚುಗೆಗಾಗಿ ಕಾರ್ಯಕ್ರಮ ತರಲಿಲ್ಲ. ಜಿಎಸ್​ಟಿ, ನೋಟ್ ಬ್ಯಾನ್ ಸೇರಿ ಕೇಂದ್ರದ ಕಾರ್ಯಕ್ರಮಗಳೆಲ್ಲಾ ಜನರಿಗಾಗಿ ಎಂದರು.

ಉಕ್ರೇನ್​ನಿಂದ 35 ಸಾವಿರ ವಿದ್ಯಾರ್ಥಿಗಳನ್ನು ದೇಶಕ್ಕೆ ಸುರಕ್ಷಿತವಾಗಿ ವಾಪಸ್ ಕರೆ ತರಲಾಯಿತು, ಕಾಶ್ಮೀರಕ್ಕೆ ಈ ವರ್ಷ 1.80 ಲಕ್ಷ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ, ಯಾವುದೇ ಹಿಂಸಾಚಾರ ಆಗಲಿಲ್ಲ. ಇದು ಸಾಧ್ಯವಾಗಿದ್ದು ಮೋದಿಯವರಿಂದ. ಪಿಎಫ್ಐ ಅಪಾಯಕಾರಿ ಸಂಘಟನೆಯಾಗಿದೆ. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ನಮ್ಮ ಸರ್ಕಾರ ಪಿಎಫ್ಐ ಸರ್ಕಾರ ನಿಷೇಧ ಮಾಡಿತು. ಮೆಟ್ರೋ, ರಸ್ತೆ, ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ಆಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ದೇಗುಲ, ಸೋಮನಾಥೇಶ್ವರ ದೇಗುಲ ಜೀರ್ಣೋದ್ಧಾರ ಮಾಡಿದ್ದೇವೆ. ಕನ್ನಡ, ತೆಲುಗು, ತಮಿಳು ಎಲ್ಲವೂ ನಮ್ಮ ಭಾಷೆ. ಮಾತೃಭಾಷೆಯಲ್ಲೇ ಶಿಕ್ಷಣಕ್ಕೆ ಆದ್ಯತೆ ಕೊಡಲಾಗಿದೆ. ಭಾಷೆ ವಿಚಾರದ ಅಭಿವ್ಯಕ್ತಿ, ವಿಚಾರವೇ ಭಾಷೆ ಅಲ್ಲ ಎಂದರು.

ಪ್ರಬುದ್ಧರ ಸಭೆಯಲ್ಲಿ ನಡೆಯುತ್ತಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗಿಯಾದರು. ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಆಗಮಿಸಿದ್ದ ಮುಖ್ಯಮಂತ್ರಿಯವರನ್ನು ಅಮಿತ್ ಶಾ ಅವರೇ ಸ್ವಾಗತಿಸಿದರು. ಬೊಮ್ಮಾಯಿಗೆ ವೇದಿಕೆ ಮೇಲೆ ಬಂದು ಕೂರುವಂತೆ ಸೂಚಿಸಿದರು. ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಭಾಗಿಯಾದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!