5.2 C
Munich
Friday, March 3, 2023

Bengaluru Safe City project is very important for city like Bengaluru says Union Minister Amit Shah | Bengaluru Safe City: ಬೆಂಗಳೂರಿನಂತಹ ನಗರಕ್ಕೆ ಸೇಪ್ ಸಿಟಿ ಯೋಜನೆ ಬಹಳ ಮುಖ್ಯ: ಅಮಿತ್ ಶಾ

ಓದಲೇಬೇಕು

ಭಾರತದ 8 ಪ್ರಮುಖ ನಗರಗಳ ಪೈಕಿ ಬೆಂಗಳೂರು ಕೂಡ ಒಂದಾಗಿದ್ದು, ಇಂತಹ ನಗರಗಳಿಗೆ ಸೇಫ್ ಸಿಟಿ ಯೋಜನೆ ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೇಫ್​ ಸಿಟಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಗೃಹಸಚಿವ ಅಮಿತ್ ಶಾ

ಬೆಂಗಳೂರು: ಭಾರತದ 8 ಪ್ರಮುಖ ನಗರಗಳ ಪೈಕಿ ಬೆಂಗಳೂರು ಕೂಡ ಒಂದಾಗಿದ್ದು, ಇಂತಹ ನಗರಗಳಿಗೆ ಸೇಫ್ ಸಿಟಿ ಯೋಜನೆ (Safe City Project) ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ನಗರದ ಟೌನ್​ಹಾಲ್​ನಲ್ಲಿ ಸೇಫ್​ ಸಿಟಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ನಾನು ಮೋದಿಯವರ ಕನಸಿನ ಯೋಜನೆ ಜಾರಿ ಮಾಡಿದ್ದೇನೆ. ಇದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಗೃಹಸಚಿವ ಆರಗ ಜ್ಞಾನೇಂದ್ರ, ಡಿಜಿಪಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಳೆದ 12 ವರ್ಷಗಳಿಂದ ನಾನು ನೋಡಿಕೊಂಡು ಬರುತ್ತಿದ್ದೇನೆ. ಬೆಂಗಳೂರು ಪೊಲೀಸರು ಎರಡು ಹೆಜ್ಜೆ ಮುಂದಿರುತ್ತಾರೆ. ಅವರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅದಾಗ್ಯೂ ಬೆಂಗಳೂರಿನಲ್ಲಿ ಅಪರಾಧ ತಡೆಯಲು ಉತ್ತಮ ಟೆಕ್ನಾಲಜಿ ಹಾಗೂ ಉತ್ತಮ ತಂಡಗಳ ಅವಶ್ಯಕತೆ ಇದೆ ಎಂದರು.

ಸೇಫ್ ಸಿಟಿ ಯೋಜನೆ ಬೆಂಗಳೂರು ಸೇರಿದಂತೆ ದೇಶದ 8 ನಗರಗಳಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 500 ಕೋಟಿವರೆಗೂ ಖರ್ಚು ಮಾಡಿದೆ. ಯೋಜನೆಯಡಿ ಸಿಸಿ ಕ್ಯಾಮೆರಾ ಜೊತೆ, ಡ್ರೋನ್ ಕ್ಯಾಮೆರಾ ಕೂಡ ಬಳಸಲಾಗುತ್ತಿದೆ. ಈಗಷ್ಟೇ ಕಮಾಂಡ್ ಸೆಂಟರ್ ಕೂಡಾ ವೀಕ್ಷಿಸಿ ಬಂದಿದ್ದೇನೆ. ಪಿಸಿಆರ್ ಎಲ್ಲವೂ ಆಧುನಿಕವಾಗಿದೆ. 6 ಮೊಬೈಲ್ ಫರೆನ್ಸಿಕ್ ಇದೆ. ರಾಣಿ ಚೆನ್ನಮ್ಮ ಪಡೆ ಕೂಡ ಇದೆ. ಟ್ರೈನಿಂಗ್ ಕೂಡ ಉತ್ತಮವಾಗಿ ನೀಡಲಾಗುತ್ತಿದೆ. ಇದು ಬಹಳ ಖುಷಿ ತರಿಸಿದೆ ಎಂದರು.

ಇದನ್ನೂ ಓದಿ: Bengaluru Safe City: ಸೇಫ್ ಸಿಟಿ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಗೃಹಸಚಿವ ಅಮಿತ್ ಶಾ

ಪ್ರಸ್ತುತ ಸದೃಢ ಪೊಲೀಸ್ ಪಡೆ ಕೂಡ ಅವಶ್ಯಕತೆ ಇದ್ದು, ಬೆಂಗಳೂರು ಪೊಲೀಸರು ಅದನ್ನ ಕೂಡ ಮಾಡಿದ್ದಾರೆ. ಕಾರು, ದ್ವಿಚಕ್ರ, ಕಮಾಂಡ್ ಸೆಂಟರ್ ಜೊತೆ ಜೋಡಿಸುವ ಕೆಲಸ ಇಂದು ಪೂರ್ಣಗೊಂಡಿದೆ. ಅನಾಲಿಸಿಸ್ ಮಾಡುವ ಸಾಫ್ಟ್‌ವೇರ್ ಕೂಡ ಜೋಡಿಸಲಾಗಿದೆ. ಮಹಿಳೆಯರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಬೇಕಿದೆ. ಸದೃಢ ಪೊಲೀಸ್ ಪಡೆ ಕೂಡ ಅವಶ್ಯಕತೆ ಇದೆ. ಸೇಫ್ ಸಿಟಿ ಮೂಲಕ ಅಪರಾಧ ತಡೆಗಟ್ಟುವುದರ ಜೊತೆ, ವಾಹನ ಕಳವು ಕೂಡಾ ಪತ್ತೆಯಾಗಲಿದೆ ಎಂದರು.

ಪೊಲೀಸ್ ಟೆಕ್ನಾಲಜಿ ಮೀಷನ್ ಸ್ಥಾಪನೆ ಲಕ್ನೌದಲ್ಲಿ ಮಾಡಲಾಗಿದೆ. 20 ವರ್ಷದ ರೋಡ್​ ಮ್ಯಾಪ್ ಬ್ಲೂ ಪ್ರೀಂಟ್​ ಮಾಡಲಾಗಿದೆ. ಚಿಕ್ಕ ಸುಮುದ್ರ ತೀರದಿಂದಲ್ಲೂ ಮಾದಕ ವಸ್ತುಗಳೂ ಬರಬಹುದು. ಟೆಕ್ನಾಲಜಿ ದೃಷ್ಟಿಯಿಂದ ನಾವು ಯಾವಾಗಲು ಮುಂದೆ ಇರಬೇಕು. ಸೈಬರ್ ಜಾಗೃತಿಗೆ ನಾವು ಈ ದಿನಗಳಲ್ಲಿ ಬಹಳ ಓತ್ತು ನೀಡಬೇಕು. ಆಂತರಿಕ ಸುರಕ್ಷತೆಯ ದೃಷ್ಠಿಯಿಂದ ಯಾವ ಸರ್ಕಾರವು ಇಷ್ಟು ಒತ್ತುನೀಡಲೇ ಇಲ್ಲ. ದೇಶದಲ್ಲಿ ಏನಾಗಿದೆ ಎಂದು ನಾವು ನೋಡಬೇಕು. ದೇಶದಲ್ಲಿ ಮೋದಿ ಆಡಳಿತದಿಂದಾಗಿ ಬಹಳಷ್ಟು ಬದಲಾಗಿದೆ ಎಂದರು.

ಸ್ವಾತಂತ್ರ್ಯದ 100ನೇ ವರ್ಷದಲ್ಲಿ ಪೊಲೀಸರು ಸದೃಢ ಆಗಬೇಕು

ಮುಂದಿನ ದಿನಗಳಲ್ಲಿ ಪೊಲೀಸರು ಉತ್ತಮ ಟೆಕ್ನಾಲಜಿ ಮೂಲಕ ಕೆಲಸ ಮಾಡಬೇಕಿದೆ ಎಂದು ಹೇಳಿದ ಅಮಿತ್ ಶಾ, ಎಲ್ಲಾ ವ್ಯವಸ್ಥೆ ಆಧಾರದ ಮೇಲೆ ಪೊಲೀಸರು ಟೆಕ್ನಾಲಜಿ ಅರಿತು ಅದರ ಬಳಕೆ ಮಾಡಬೇಕು. ಟೆಕ್ನಾಲಜಿ ಬಳಸಿಕೊಂಡು ಅಪರಾಧಿಯನ್ನು ಕಂಡುಹಿಡಿಯಬೇಕಿದೆ. ಸಮಗ್ರ ತಾಂತ್ರಿಕತೆ ಬಳಸಿ ಪೊಲೀಸರು ಕೆಲಸ ಮಾಡಬೇಕು. ಸ್ವಾತಂತ್ರ್ಯದ 100ನೇ ವರ್ಷದಲ್ಲಿ ಪೊಲೀಸರು ಸದೃಢರಾಗಬೇಕು. ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಕೂಡಾ ಪತ್ತೆ ಮಾಡಬಹುದು. ಮಾದಕ ದ್ರವ್ಯಗಳು ಮತ್ತು ನಕಲಿ ನೋಟು ಇಲ್ಲಿಗೂ ಬರಬಹುದು. ಅದನ್ನ ಪತ್ತೆ ಹಚ್ಚಿ ತಡೆಯಬೇಕು ಎಂದರು.

ಟೆಕ್ನಾಲಜಿ ಬಳಸಿ ಕೋಮು ಸಂಘರ್ಷ ಮಟ್ಟ ಹಾಕಬೇಕು: ಅಮಿತ್ ಶಾ

ಅಪರಾಧ ನಡೆಯುವ ಮೊದಲೇ ಮತ್ತು ಟೆಕ್ನಾಲಜಿ ಬಳಸಿ ಕೋಮು ಸಂಘರ್ಷ ಮಟ್ಟ ಹಾಕಬೇಕು ಎಂದು ಹೇಳಿದ ಅಮಿತ್ ಶಾ, ನ್ಯಾಷನಲ್ ಸೈಬರ್ ಟ್ರೈನಿಂಗ್ ಸೆಂಟರ್, ನ್ಯಾಷನಲ್ ಸೈಬರ್ ಕ್ರೈಮ್ ರಿಸರ್ಚ್ ಸೆಂಟರ್ ಸೇರಿದಂತೆ ಎಲ್ಲವೂ ಒಟ್ಟಿಗೆ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಮೋದಿ ಪ್ರಧಾನಿಯಾದ ಬಳಿಕ ಈ ದೇಶದಲ್ಲಿ ಅನೇಕ ಬದಲಾವಣೆಗಳಾಗಿದ್ದು, 99.9% ಪೊಲೀಸ್ ಠಾಣೆ ಆನ್ ಲೈನ್ ಆಗಿದೆ. 1% ಪೊಲೀಸ್ ಠಾಣೆ ಕನೆಕ್ಟಿವಿಟಿ ಇಲ್ಲ. ಸಿಸಿ ಕ್ಯಾಮೆರಾದಲ್ಲಿ 3000 ಕೋಟಿ ಪೊಲೀಸ್ ರೆಕಾರ್ಡ್ ಇದೆ. 12ಕೋಟಿ ದೂರು ಆನ್ ಲೈನ್ ಮೂಲಕ ಬಂದಿದ್ದು, ಅಷ್ಟೇ ಪ್ರಕರಣಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಬೇಕಿದೆ: ಸಿಎಂ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ವ್ಯಾಪಕವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಬೇಕು. ಸಿಸಿ ಕ್ಯಾಮೆರಾ ಕೂಡ ಮಖ್ಯವಾಗಿದೆ. ಈ ಬಗ್ಗೆ ನಾನು ಗೃಹ ಸಚಿವನಾಗಿದ್ದಾಗ ಸಲಹೆ ನೀಡಿದ್ದೆ, ಸಿಸಿ ಕ್ಯಾಮೆರಾದಿಂದ ಅಪರಾಧದ ಜೊತೆ ಟ್ರಾಫಿಕ್ ಕೂಡ ತಡೆಗಟ್ಟಬಹುದು. 2000 ಇದ್ದ ಸಿಸಿ ಕ್ಯಾಮೆರಾ ಇದೀಗ 4000ಕ್ಕೆ ಹೆಚ್ಚಳ ಮಾಡಲಾಗಿದೆ. ಮಹಿಳೆಯರು ಕೆಲಸ ಮಾಡುವ ಕಡೆ ಸಿಸಿ ಕ್ಯಾಮೆರಾ ಅಳವಡಿಸಬೇಕಿದೆ ಎಂದರು.

112 ವಾಹನದ ಜೊತೆ ಬೈಕ್ ಕೂಡ ನೀಡಲಾಗಿದೆ. ತಾಂತ್ರಿಕತೆ ಬಳಸಿದಾಗ ಮಾತ್ರ ಯೋಜನೆ ಯಶಸ್ವಿ ಆಗಲಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ನಾಲ್ಕು ಹೊಸ ಸ್ಟೇಷನ್ ಹೆಚ್ಚಿಸಲಾಗಿದೆ. 9 ಕಾನೂನು ಮತ್ತು ಸುವ್ಯವಸ್ಥೆ, 5 ಟ್ರಾಫಿಕ್, 6 ಮಹಿಳಾ ಸ್ಟೇಷನ್ ಮಾಡಲಾಗಿದೆ ಎಂದರು. ಮುಂದುವರೆದು ಮಾತನಾಡಿದ ಅವರು, ನಾವು ಪಿಎಫ್​ಐ ನಿಷೇಧ ಮಾಡಿದ್ದೇವೆ, ಭಯೋತ್ಪಾದನಾ ಚಟುವಟಿಕೆ ತಡೆದಿದ್ದೇವೆ. ಕರ್ನಾಟಕಕ್ಕೆ ಕೇಂದ್ರದಿಂದ ಉತ್ತಮ ಸಹಕಾರ ದೊರೆತಿದೆ. ಇದಕ್ಕೆ ಅಮಿತ್ ಶಾ ಅವರ ಆಶೀರ್ವಾದ ಇದೆ ಎಂದರು.

ಮಹಿಳೆಯರ ರಕ್ಷಣೆಯೇ ನಮ್ಮ ಗುರಿಯಾಗಿದೆ. ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಮಾಡಲು ನಮ್ಮ ಸರ್ಕಾರ ಅವಕಾಶ ನೀಡಿದೆ. ಅದಕ್ಕಾಗಿ ಪೊಲೀಸ್ ಅಧಿಕಾರಿಗಳಿಗೂ ಸೂಚಿಸಿದ್ದೇನೆ. ಕೆಲಸ ಮಾಡುವ ಜಾಗದಲ್ಲಿ ಧೈರ್ಯದಿಂದ ಓಡಾಡುವಂತೆ ಮಾಡುವುದೇ ಗುರಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!