1.7 C
Munich
Friday, March 3, 2023

Bengaluru Safe City Project: What is safe city project, why is it important for Bangalore? | Bengaluru Safe City project: ಏನಿದು ಸೇಫ್​ ಸಿಟಿ ಪ್ರಾಜೆಕ್ಟ್, ಬೆಂಗಳೂರಿಗೇಕೆ ಮುಖ್ಯ?

ಓದಲೇಬೇಕು

ಬೆಂಗಳೂರು ಸೇಫ್​ ಸಿಟಿ ಪ್ರಾಜೆಕ್ಟ್​ ಉದ್ಘಾಟನೆಗೆ ಕಾಲ ಸನ್ನಿಹಿತವಾಗಿದೆ. ಬೆಂಗಳೂರು ನಗರ ಪೊಲೀಸರು ಇದೀಗ ನಗರದ ಡ್ರೋನ್‌ಗಳು, ಸಿಸಿಟಿವಿಗಳು ಮತ್ತು ತುರ್ತು ಕರೆ ಬಾಕ್ಸ್‌ಗಳು ಸೇರಿದಂತೆ ಆಡಿಯೊ-ವಿಶುವಲ್ ಸಿಸ್ಟಮ್‌ಗಳ ಸರಣಿಯನ್ನು ಪರೀಕ್ಷಿಸಲು ಮುಂದಾಗಿದ್ದಾರೆ.

ಸೇಫ್ ಸಿಟಿ ಯೋಜನೆ

Image Credit source: indianexpress.com

ಬೆಂಗಳೂರು: ಬೆಂಗಳೂರು ಸೇಫ್​ ಸಿಟಿ ಪ್ರಾಜೆಕ್ಟ್​ನ್ನು (safe city project)​ ಶುಕ್ರವಾರ (ಮಾ. 03) ಕೇಂದ್ರ ಗೃಹಸಚಿವ ಅಮಿತ್ ಶಾ ಉದ್ಘಾಟನೆ ಮಾಡಿದರು. ಬೆಂಗಳೂರು ನಗರ ಪೊಲೀಸರು ಇದೀಗ ಡ್ರೋನ್‌ಗಳು, ಸಿಸಿಟಿವಿಗಳು ಮತ್ತು ತುರ್ತು ಕರೆ ಬಾಕ್ಸ್‌ಗಳು ಸೇರಿದಂತೆ ಆಡಿಯೊ-ವಿಶುವಲ್ ಸಿಸ್ಟಮ್‌ಗಳ ಮೂಲಕ ಜನರಿಗೆ, ಅದರಲ್ಲೂ ಮಹಿಳೆಯರಿಗೆ ಸುರಕ್ಷತೆ ಒದಗಿಸಲಿದ್ದಾರೆ. 2021ರಲ್ಲಿ ಹನಿವೆಲ್ ಆಟೋಮೇಷನ್ ಇಂಡಿಯಾ ಲಿಮಿಟೆಡ್​ ಸಹಭಾಗಿತ್ವದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಂಗಳೂರನ್ನು ಮಹಿಳೆಯರಿಗೆ ಸಾರ್ವಜಿನಿಕ ಸ್ಥಳಗಳಲ್ಲಿ ಸುರಕ್ಷತೆ ಕಲ್ಪಿಸುವ ದೃಷ್ಟಿಯಿಂದ ಸುಮಾರು 667 ಕೋಟಿ ರೂಪಾಯಿ ವೆಚ್ಚದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಈ ಯೋಜನೆಯನ್ನು ಆರಂಭಿಸಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ಬೆಂಗಳೂರನ್ನು ಸುರಕ್ಷಿತ ನಗರವನ್ನಾಗಿಸುವುದೇ ಈ ಯೋಜನೆಯ ಉದ್ದೇಶವಾಗಿದೆ.

ಮಹಿಳೆಯ ಸುರಕ್ಷತೆಗೆ ಆದ್ಯತೆ

2016 ರಲ್ಲಿ ನವದೆಹಲಿಯಲ್ಲಿ ನಡೆದ ಭಯಾನಕ ಅತ್ಯಾಚಾರ ಘಟನೆಯ ನಂತರ ನಿರ್ಭಯಾ ಯೋಜನೆ ಅಡಿಯಲ್ಲಿ ದೇಶಾದ್ಯಂತ ಅನೇಕ ನಗರಗಳಲ್ಲಿ ಸೇಫ್ ಸಿಟಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ 8 ನಗರಗಳ ಪೈಕಿ ಬೆಂಗಳೂರು ಮಾತ್ರ ವೇಗವಾಗಿ ಕಾರ್ಯಗತ ಮಾಡಿಕೊಂಡಿದೆ. ಗೃಹಸಚಿವಾಲಯವು ಶೇಕಡಾ 60 ರಷ್ಟು ಹಣವನ್ನು ಒದಗಿಸುತ್ತದೆ ಮತ್ತು ಉಳಿದ ಮೊತ್ತವನ್ನು ಆಯಾ ರಾಜ್ಯಗಳು ಕೊಡುಗೆ ನೀಡುತ್ತವೆ. ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಸ್ಥಳಗಳ ಪತ್ತೆ ಹಚ್ಚುವಿಕೆ, ಜಾಗೃತಿ ಕಾರ್ಯಕ್ರಮಗಳ ಮೂಲಕ ಮೂಲಸೌಕರ್ಯ ಕಲ್ಪಿಸುವುದು, ತಂತ್ರಜ್ಞನ ಅಳವಡಿಕೆ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ವಿವಿಧ ಘಟಕಗಳ ನಿಯೋಜನೆಯನ್ನು ಈ ಸೇಫ್​ ಸಿಟಿ ಪ್ರಾಜೆಕ್ಟ್ ಒಳಗೊಂಡಿದೆ.

ಇದನ್ನೂ ಓದಿ: Bengaluru Safe City: ಸೇಫ್ ಸಿಟಿ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಗೃಹಸಚಿವ ಅಮಿತ್ ಶಾ

ಸೇಫ್​ ಸಿಟಿ ಪ್ರಾಜೆಕ್ಟ್​ ಕಾರ್ಯ ನಿರ್ವಹಣೆ ಹೇಗೆ?

ಯೋಜನೆಯ ಮೊದಲ ಹಂತದ ಪ್ರಕ್ರಿಯೆಯ ಭಾಗವಾಗಿ, ಪೊಲೀಸ್ ಇಲಾಖೆ ಹನಿವೆಲ್​ ಸಹಭಾಗಿತ್ವದಲ್ಲಿ ತುರ್ತು ಕರೆ ಪೆಟ್ಟಿಗೆಗಳು ಅಥವಾ ತುರ್ತು ಪ್ಯಾನಿಕ್ ಬಟನ್​ಗಳನ್ನು ಸ್ಥಾಪಿಸಿದೆ. ತುರ್ತು ಸಂದರ್ಭಗಳಲ್ಲಿ ಬಟನ್ ಒತ್ತಿದಾಗ, ಕಮಿಷನರೇಟ್ ಕಚೇರಿಯಲ್ಲಿನ ಕಮಾಂಡ್​ ಸೆಂಟರ್​ಗೆ ನೇರ ಎಚ್ಚರಿಕೆ ಹೋಗುತ್ತದೆ. ನಂತರ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ತಕ್ಷಣ ಎಚ್ಚರಿಸಲಾಗುತ್ತದೆ. ಪೊಲೀಸ್ ಇಲಾಖೆಯ ಪ್ರಕಾರ, ಒಟ್ಟು 50 ತುರ್ತು ಕರೆ ಬಾಕ್ಸ್​ಗಳನ್ನು ಅಳವಡಿಸಲಾಗಿದ್ದು, ಮೊದಲ ಹಂತದಲ್ಲಿ ಈಗಾಗಲೇ 30 ಕಾಲ್ ಬಾಕ್ಸ್​ಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 20 ಬಾಕ್ಸ್​ಗಳನ್ನು ಈಗಾಗಲೇ 5 ಘಟಕಗಳನ್ನು ಸ್ಥಾಪಿಸಲಾಗಿದ್ದು, ಉಳಿದ 15 ಬಾಕ್ಸ್​ಗಳನ್ನು ಈ ವರ್ಷದ ಅಂತ್ಯದೊಳಗೆ ಅಳವಡಿಸಲಾಗುತ್ತಿದೆ.

ಸೇಫ್​ ಸಿಟಿ ಪ್ರಾಜೆಕ್ಟ್​ ಮುಖ್ಯಾಂಶಗಳು 

ಮಹಿಳೆಯರ ಮೇಲೆ ಆಗುತ್ತಿರುವ ಅಪರಾಧ ತಡೆಗಟ್ಟುವ ಉದ್ದೇಶದಿಂದ ನಗರದ ಸುತ್ತ ಗಸ್ತು ಮಾಡುವ ವಾಹನಗಳು, ಸಿಸಿಕ್ಯಾಮರಾಗಳು, ಡ್ರೋನ್ ಕ್ಯಾಮರಾಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತವೆ. ಹೆಚ್ಚಿನ ಮಹಿಳಾ ಪೊಲೀಸ್​ ಸಿಬ್ಬಂದಿಯನ್ನು ಸೇಫ್​ ಸಿಟಿ ಪ್ರಾಜೆಕ್ಟ್ ಹೊಂದಿದೆ.​ 112ಗೆ ಕರೆ ಮಾಡಿದರೆ ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರ ಗಸ್ತು ವಾಹನ ಸ್ಥಳಕ್ಕೆ ಆಗಮಿಸಿ ನೆರವಾಗಲಿದೆ. GPS ಹೊಂದಿರುವ ವಾಹನ, MCCV ವೆಹಿಕಲ್ ಮೂಲಕ ನೇರ ವೀಕ್ಷಣೆ ಮಾಡಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!