ಮೊದಲು ಬ್ಯಾಟಿಂಗ್ನಲ್ಲಿ ಮ್ಯಾಜಿಕ್ ಮಾಡಿದಲ್ಲದೆ, ಆ ಬಳಿಕ ಬೌಲಿಂಗ್ನಲ್ಲೂ ಕರಾಮತ್ತು ತೋರಿದ ಶಹಾನ್ ಶಾದಾಬ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ 8 ರನ್ ಬಿಟ್ಟುಕೊಟ್ಟಿದ್ದಲ್ಲದೆ, ಎರಡು ಹ್ಯಾಟ್ರಿಕ್ ಸೇರಿದಂತೆ ಎದುರಾಳಿ ತಂಡದ ಎಲ್ಲಾ 10 ವಿಕೆಟ್‌ಗಳನ್ನು ಪಡೆದರು.
ಶಹಾನ್ ಶಾದಾಬ್
ಕ್ರಿಕೆಟ್ ಲೋಕದಲ್ಲಿ ಪ್ರತಿ ದಿನವೂ ಹಲವು ದಾಖಲೆಗಳು ಸೃಷ್ಟಿಯಾಗುತ್ತಿರುತ್ತವೆ. ಇನ್ನೂ ಹಲವು ದಾಖಲೆಗಳು ಮುರಿಯಲ್ಪಡುತ್ತವೆ. ಆದರೆ ಬೆಂಗಳೂರಿನಲ್ಲಿ ನಡೆದ 14 ವರ್ಷದೊಳಗಿನವರ (Under-14 years) ಕ್ರಿಕೆಟ್ನಲ್ಲಿ ಬೆಂಗಳೂರಿನ ಪೋರನೊಬ್ಬ ಅಪರೂಪದಲ್ಲೇ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನಡೆಸಿದ ಪಂದ್ಯಾವಳಿಯಲ್ಲಿ ಶ್ರೀ ರಾಮ್ ಗ್ಲೋಬಲ್ ಶಾಲೆಯ ಪರ ಕಣಕ್ಕಿಳಿದಿದ್ದ ಶಹಾನ್ ಶಾದಾಬ್ (Shaahan Shadab) ಕೇವಲ 88 ಎಸೆತಗಳಲ್ಲಿ 23 ಬೌಂಡರಿಗಳೊಂದಿಗೆ 115 ರನ್ ಸಿಡಿಸಿದಲ್ಲದೆ, ಆ ಬಳಿಕ ಬೌಲಿಂಗ್ನಲ್ಲೂ ಮ್ಯಾಜಿಕ್ ಮಾಡಿ ಎದುರಾಳಿ ತಂಡದ ಅಷ್ಟೂ ವಿಕೆಟ್‌ಗಳನ್ನು ಅಂದರೆ ಎಲ್ಲಾ 10 ವಿಕೆಟ್‌ಗಳನ್ನು ಉರುಳಿಸುವುದರೊಂದಿಗೆ ಅಪರೂಪದ ಸಾಧನೆ ಮಾಡಿದ್ದಾನೆ.
14 ರನ್ಗಳಿಗೆ ಎದುರಾಳಿ ಆಲೌಟ್
ಕೆಎಸ್‌ಸಿಎ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ನಡೆದ ಬಿಟಿಆರ್ ಶೀಲ್ಡ್ (14 ವರ್ಷದೊಳಗಿನವರ ಗುಂಪು 1, III ವಿಭಾಗ 2022-23) ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀ ರಾಮ್ ಗ್ಲೋಬಲ್ ಶಾಲೆ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 399 ರನ್ ಕಲೆ ಹಾಕಿತು. ತಂಡದ ಪರ ಶಹಾನ್ ಶಾದಾಬ್ 115 (88 ಎಸೆತ, 23 ಬೌಂಡರಿ, 4 ಸಿಕ್ಸರ್), ಮೋನಿಶ್ ಗೌಡ 87 (118 ಎಸೆತ, 12 ಬೌಂಡರಿ, 4 ಸಿಕ್ಸರ್), ಆದಿಲ್ ರಂಜಿತ್ ಔಟಾಗದೆ 78 (95 ಎಸೆತ, 7 ಬೌಂಡರಿ, 4 ಸಿಕ್ಸರ್) ರನ್ ಬಾರಿಸಿದರು. ಈ ಗುರಿ ಬೆನ್ನಟ್ಟಿದ ಎದುರಾಳಿ ಫ್ರೀಡಂ ಇಂಟರ್‌ನ್ಯಾಶನಲ್ ಸ್ಕೂಲ್ ಶಾದಾಬ್ ದಾಳಿಗೆ ತತ್ತರಿಸಿ ಕೇವಲ 7 ಓವರ್‌ಗಳಲ್ಲಿ 14 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ 384 ರನ್ಗಳ ಹೀನಾಯ ಸೋಲು ಅನುಭವಿಸಿತು. ಶ್ರೀ ರಾಮ್ ಗ್ಲೋಬಲ್ ಶಾಲೆ ಪರ ಶಹಾನ್ ಶಾದಾಬ್ ಕೇವಲ 8 ರನ್ ನೀಡಿ 10 ವಿಕೆಟ್ ಪಡೆದರು.
WPL 2023: 11 ಸಿಕ್ಸರ್, 45 ಬೌಂಡರಿ, 305 ರನ್! ಆರ್ಸಿಬಿಯ ಮ್ಯಾಚ್ ವಿನ್ನರ್ ಬಗ್ಗೆ ನಿಮಗೆಷ್ಟು ಗೊತ್ತು?
4 ರನ್ ವೈಡ್ನಿಂದ ಬಂದಿದ್ದವು
ಮೊದಲು ಬ್ಯಾಟಿಂಗ್ನಲ್ಲಿ ಮ್ಯಾಜಿಕ್ ಮಾಡಿದಲ್ಲದೆ, ಆ ಬಳಿಕ ಬೌಲಿಂಗ್ನಲ್ಲೂ ಕರಾಮತ್ತು ತೋರಿದ ಶಹಾನ್ ಶಾದಾಬ್ ನಾಲ್ಕು ಓವರ್ ಬೌಲ್ ಮಾಡಿ ಕೇವಲ 8 ರನ್ ಬಿಟ್ಟುಕೊಟ್ಟಿದ್ದಲ್ಲದೆ, ಎರಡು ಹ್ಯಾಟ್ರಿಕ್ ಸೇರಿದಂತೆ ಎದುರಾಳಿ ತಂಡದ ಎಲ್ಲಾ 10 ವಿಕೆಟ್‌ಗಳನ್ನು ಪಡೆದರು. ಇದರಲ್ಲಿ ಇನ್ನೊಂದು ವಿಶೇಷವೆಂದರೆ, ಶಾದಾಬ್ ಉರುಳಿಸಿದ ಎಲ್ಲಾ 10 ವಿಕೆಟ್ಗಳು ಬೋಲ್ಡ್ ಹಾಗೂ ಎಲ್ಬಿಡಬ್ಲ್ಯು ಮುಖಾಂತರ ಬಂದವು. ಅಷ್ಟೆ ಅಲ್ಲದೆ ಶಾದಾವ್ ನೀಡಿದ 8 ರನ್ಗಳಲ್ಲಿ 4 ರನ್ಗಳು ವೈಡ್ಗಳಿಂದ ಬಂದಿದ್ದವು.
ಟೆಸ್ಟ್ ಕ್ರಿಕೆಟ್ನಲ್ಲಿ 10 ವಿಕೆಟ್ ಸಾಧನೆ
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ವಿಚಾರಕ್ಕೆ ಬಂದರೆ ಒಂದೇ ಪಂದ್ಯದಲ್ಲಿ ಶತಕ ಸಿಡಿಸಿ, ಎದುರಾಳಿ ತಂಡದ ಎಲ್ಲಾ 10 ವಿಕೆಟ್ ಪಡೆದ ದಾಖಲೆ ಇದುವರೆಗೂ ಸೃಷ್ಟಿಯಾಗಿಲ್ಲ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ 10 ವಿಕೆಟ್ ಪಡೆದ ದಾಖಲೆ 3 ಬಾರಿ ಸೃಷ್ಟಿಯಾಗಿದೆ. ಇಂಗ್ಲೆಂಡ್‌ನ ಜಿಮ್ ಲೇಕರ್ 1956 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ 10 ವಿಕೆಟ್ ಉರುಳಿಸಿದ ಮೊದಲ ಬೌಲರ್ ಎನಿಸಿಕೊಂಡರು. ಆನಂತರ, 1999 ರಲ್ಲಿ ಭಾರತದ ಅನಿಲ್ ಕುಂಬ್ಳೆ, ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಉರುಳಿಸಿ ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಂಡಿದ್ದರು. ಇನ್ನು ಕಳೆದ ವರ್ಷ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಅಜಾಜ್ ಪಟೇಲ್, ಟೀಂ ಇಂಡಿಯಾದ 10 ವಿಕೆಟ್ ಪಡೆದು ದಾಖಲೆ ಬರೆದಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ