ಜನಪ್ರಿಯ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ವಿಶೇಷ ಸೇಲ್ ನಡೆಯುತ್ತಿದೆ. ಈ ಸೇಲ್ನಲ್ಲಿ ಗ್ರಾಹಕರಿಗೆ ಎಲೆಕ್ಟ್ರಾನಿಕ್ ವಸ್ತುಗಳು, ಫೋನ್‌ಗಳು ಮತ್ತು ಇನ್ನಿತರ ಪರಿಕರಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಕೈಗೆಟುಕುವ ಬೆಲೆಯಲ್ಲಿ ಹಲವು ಸ್ಮಾರ್ಟ್ಫೋನ್ಗಳು ಲಭ್ಯವಿದೆ. ನೀವು ಕಡಿಮೆ ಬೆಲೆಯ ಫೋನ್ ಅನ್ನು ಹುಡುಕುತ್ತಿದ್ದರೆ Gionee Max Pro ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಾಗಿದೆ.
Gionee Max Pro: ಸ್ಮಾರ್ಟ್ಫೋನ್ನ ಮೂಲ ಬೆಲೆ 9,999 ರೂ. ಇದೀಗ ಫ್ಲಿಪ್ಕಾರ್ಟ್ ಆಫರ್ ಮೂಲಕ ಕೇವಲ 6,999 ರೂ. ಅನ್ನು ಫೋನ್ ಅನ್ನು ಖರೀದಿಸಬಹುದು. ಈ ಫೋನ್‌ನ ಪ್ರಮುಖ ವಿಶೇಷತೆ ಎಂದರೆ ಅದರ ಡಿಸ್ಪ್ಲೇ ಮತ್ತು ಬ್ಯಾಟರಿ. ಏಕೆಂದರೆ ಜಿಯೋನಿ ಮ್ಯಾಕ್ಸ್ ಪ್ರೋನಲ್ಲಿ 6.52 ಇಂಚಿನ HD + ಡಿಸ್ಪ್ಲೇ ಮತ್ತು 6000mAh ಬ್ಯಾಟರಿ ನೀಡಲಾಗಿದೆ.
ಹಾಗೆಯೇ ಇದರಲ್ಲಿ Spreadtrum 9863A ಪ್ರೊಸೆಸರ್, 3GB RAM ಮತ್ತು 32GB ಆಂತರಿಕ ಸ್ಟೊರೇಜ್ ಅನ್ನು ಕೂಡ ನೀಡಲಾಗಿದೆ. ಇದರ ಜೊತೆಗೆ ಮೈಕ್ರೋ SD ಕಾರ್ಡ್ ಸಹಾಯದಿಂದ 256GB ವರೆಗೆ ಸ್ಟೊರೇಜ್ ಅನ್ನು ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಕೂಡ ಇದೆ.
ಜಿಯೋನಿ ಮ್ಯಾಕ್ಸ್ ಪ್ರೊ ಮತ್ರಷ್ಟು ವಿಶೇಷತೆ ಹೀಗಿದೆ: ಜಿಯೋನಿ ಮ್ಯಾಕ್ಸ್ ಪ್ರೊ ಸ್ಮಾರ್ಟ್‌ಫೋನ್ 6.52 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 1600x720p ರೆಸಲ್ಯೂಶನ್ ಹೊಂದಿದ್ದು, ಹಾಗೆಯೇ ಈ ಡಿಸ್ಪ್ಲೇ ವಾಟರ್‌ಡ್ರಾಪ್ ನಾಚ್ ವಿನ್ಯಾಸ ಹೊಂದಿದೆ. ಜೊತೆಗೆ, ಇದು Spreadtrum 9863A ಪ್ರೊಸೆಸರ್, 3GB RAM ಮತ್ತು 32GB ಆಂತರಿಕ ಸಂಗ್ರಹಣೆಯನ್ನು ಇದ್ದು, ಮೈಕ್ರೋ SD ಕಾರ್ಡ್ ಸಹಾಯದಿಂದ 256GB ವರೆಗೆ ಸ್ಟೊರೇಜ್ ವಿಸ್ತರಿಸಬಹುದು.
ಇನ್ನು Gionee Max Pro ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಮೊದಲ ಕ್ಯಾಮೆರಾ 13-ಮೆಗಾಪಿಕ್ಸೆಲ್ ಮತ್ತು ಎರಡನೆ ಕ್ಯಾಮೆರಾ 2-ಮೆಗಾಪಿಕ್ಸೆಲ್ ಹೊಂದಿದೆ. ಹಾಗೆಯೇ, ಫೋನ್‌ನ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರ ಕ್ಯಾಮೆರಾದಲ್ಲಿ ಸ್ಲೋ-ಮೊ, ಎಚ್‌ಡಿಆರ್ ಮೋಡ್ ಮತ್ತು ಟೈಮ್ ಲ್ಯಾಪ್ಸ್‌ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿರುವುದು ಮತ್ತೊಂದು ವಿಶೇಷ.
ಇವೆಲ್ಲದರ ಜೊತೆ Gionee Max Pro ನಲ್ಲಿ 6000mAh ಸಾಮರ್ಥ್ಯದ ದೀರ್ಘಬಾಳಿಕೆಯ ಬ್ಯಾಟರಿಯನ್ನು ನೀಡಲಾಗಿದೆ. ಇದು ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಅಂದರೆ ಈ ಫೋನ್‌ನಿಂದ ಮೂಲಕ ಇತರೆ ಸಾಧನಗಳನ್ನು ಕೂಡ ಚಾರ್ಜ್ ಮಾಡಬಹುದು. ಹಾಗೆಯೇ ಜಿಯೋನಿ ಮ್ಯಾಕ್ಸ್ ಪ್ರೊನಲ್ಲಿ ವೈ-ಫೈ, ಜಿಪಿಎಸ್ ಮತ್ತು ಯುಎಸ್‌ಬಿ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈ ಫೋನ್‌ನ ತೂಕ 212 ಗ್ರಾಂ ಇದೆ. ಇನ್ನು ಫ್ಲಿಪ್ಕಾರ್ಟ್ ಆಫರ್ ಮೂಲಕ ಈ ಸ್ಮಾರ್ಟ್‌ಫೋನ್ ಕೇವಲ 6,999 ರೂ.ಗೆ ಖರೀದಿಗೆ ಲಭ್ಯವಿದೆ.
Gionee Max Pro: ಇದು ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಅಂದರೆ ಈ ಫೋನ್‌ನಿಂದ ಮೂಲಕ ಇತರೆ ಸಾಧನಗಳನ್ನು ಕೂಡ ಚಾರ್ಜ್ ಮಾಡಬಹುದು.