9.1 C
Munich
Thursday, March 9, 2023

Bhagamandala Bhagandeshwara, Talacauvery Temples In Kodagu started E-Prasad service pay online and get it via Indian Post | Bhagandeshwara e-Prasada: ಇನ್ನು ಮನೆ ಬಾಗಿಲಿಗೇ ಬರಲಿದೆ ಭಗಂಡೇಶ್ವರ, ತಲಕಾವೇರಿ ದೇಗುಲಗಳ ಪ್ರಸಾದ

ಓದಲೇಬೇಕು

ಭಾಗಮಂಡಲದ ಭಗಂಡೇಶ್ವರ ಮತ್ತು ತಲಕಾವೇರಿ ದೇಗುಲಗಳ ಪ್ರಸಾದವನ್ನು ಇನ್ನು ಭಕ್ತರು ಆನ್​ಲೈನ್​ ಮೂಲಕವೇ ಕಾಯ್ದಿರಿಸಿ ಅಂಚೆ ಮೂಲಕ ತರಿಸಿಕೊಳ್ಳಬಹುದು. ಇ-ಪ್ರಸಾದ ಸೇವೆಗೆ ಕೊಡಗು ಡಿಸಿ ಬಿಸಿ ಸತೀಶ್ ಅವರು ಬುಧವಾರ ಚಾಲನೆ ನೀಡಿದ್ದಾರೆ.

ತಲಕಾವೇರಿ (ಸಂಗ್ರಹ ಚಿತ್ರ)

ಮಡಿಕೇರಿ: ಭಾಗಮಂಡಲದ ಭಗಂಡೇಶ್ವರ (Bhagandeshwara Temple) ಮತ್ತು ತಲಕಾವೇರಿ ದೇಗುಲಗಳ (Talacauvery Temple) ಪ್ರಸಾದವನ್ನು ಇನ್ನು ಭಕ್ತರು ಆನ್​ಲೈನ್​ ಮೂಲಕವೇ ಕಾಯ್ದಿರಿಸಿ ಅಂಚೆ ಮೂಲಕ ತರಿಸಿಕೊಳ್ಳಬಹುದು. ಹೌದು ಇ-ಪ್ರಸಾದ (e-Prasad) ಪಡೆಯುವ ಅವಕಾಶವನ್ನು ಭಕ್ತರಿಗೆ ಒದಗಿಸಲು ದೇಗುಲಗಳು ಆರಂಭಿಸಿವೆ. ಅಂದಹಾಗೆ, ಈ ಎರಡೂ ದೇವಸ್ಥಾನಗಳ ಆಡಳಿತವು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ (Muzrai) ವ್ಯಾಪ್ತಿಗೆ ಒಳಪಡುತ್ತದೆ. ಆನ್​ಲೈನ್ ಮೂಲಕ ಕಾಯ್ದಿರಿಸುವ ಭಕ್ತರಿಗೆ ಪ್ರಸಾದವನ್ನು ಕಳುಹಿಸಿಕೊಡಲು ಭಾರತೀಯ ಅಂಚೆ ಇಲಾಖೆ (India Post) ಜತೆ ಇಲಾಖೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇ-ಪ್ರಸಾದ ಸೇವೆಗೆ ಕೊಡಗು ಡಿಸಿ ಬಿಸಿ ಸತೀಶ್ ಅವರು ಬುಧವಾರ ಚಾಲನೆ ನೀಡಿದ್ದಾರೆ.

ಇ-ಪ್ರಸಾದದ ಪೊಟ್ಟಣದಲ್ಲಿ ತಲಕಾವೇರಿಯ ಬ್ರಹ್ಮ ಕುಂಡಿಕೆಯ 100 ಎಂಎಲ್​ನ ತೀರ್ಥ, ಭಗಂಡೇಶ್ವರ ದೇವಾಲಯದ ಪಂಚಕಜ್ಜಾಯ, ಕುಂಕುಮ ಹಾಗೂ ಗಂಧ ಪ್ರಸಾದ ಇರಲಿದೆ.

ಇಂಡಿಯಾ ಪೋಸ್ಟ್​​ ವೆಬ್​​ಸೈಟ್​​ (www.indiapost.gov.in) ಮೂಲಕ ಭಕ್ತರು ಆನ್​ಲೈನ್​ ಪ್ರಸಾದ ಬುಕ್ ಮಾಡಬಹುದು. ಟೋಲ್​ ಫ್ರೀ ಸಂಖ್ಯೆ 18002666868 ಇದಕ್ಕೆ ಕರೆ ಮಾಡುವ ಮೂಲಕವೂ ಪ್ರಸಾದ ಬುಕ್ ಮಾಡಲು ಅವಕಾಶವಿದೆ. ಇ-ಪ್ರಸಾದಕ್ಕೆ 300 ರೂ. ದರ ನಿಗದಿ ಮಾಡಲಾಗಿದೆ. ಆನ್​ಲೈನ್ ಮೂಲಕ ಹಣ ಪಾವತಿ ಮಾಡಿದ ನಂತರ ಪ್ರಸಾದವು ಅಂಚೆ ಮೂಲಕ ಮನೆ ಬಾಗಿಲಿಗೆ ಬರಲಿದೆ. ದೇಶದಾದ್ಯಂತ ಈ ಸೇವೆ ಲಭ್ಯವಾಗಲಿದೆ.

ಆನ್​ಲೈನ್ ಮೂಲಕ ಬುಕ್ ಮಾಡಿ ಹಣ ಪಾವತಿ ಮಾಡಿದ ನಾಲ್ಕರಿಂದ ಐದು ದಿನಗಳ ಒಳಗಾಗಿ ಪ್ರಸಾದದ ಪೊಟ್ಟಣ ಮನೆ ಬಾಗಿಲಿಗೆ ತಲುಪಲಿದೆ. ವಿದೇಶಗಳ ನಿವಾಸಿಗಳಿಗೆ ಸದ್ಯಕ್ಕೆ ಈ ಸೇವೆ ದೊರೆಯುವುದಿಲ್ಲ. ದೇಗುಲಕ್ಕೆ ತೆರಳಿ ದರ್ಶನ ಪಡೆದು ಪ್ರಸಾದ ಪಡೆಯಲು ಸಾಧ್ಯವಾಗದವರಿಗಾಗಿ ಈ ಸೇವೆ ಆರಂಭಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕೊಡಗು: ವ್ಯಾಘ್ರ ದಾಳಿಗೆ ಎರಡು ಹಸು ಬಲಿ, ಹುಲಿ ಸೆರೆಗೆ ಗ್ರಾಮಸ್ಥರ ಒತ್ತಾಯ

ಇ-ಪ್ರಸಾದ ಸೇವೆಗೆ ಭಕ್ತರ ಸ್ಪಂದನೆ ಹೇಗಿರುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚು ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದ್ದಾರೆ. ಸೇವೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ದೇಗುಲಗಳ ಹೆಚ್ಚುವರಿ ಉಪ ಆಯುಕ್ತ ಡಾ. ನಂಜುಂಡೇಗೌಡ, ಪೋಸ್ಟ್ ಆಫೀಸ್ ಮ್ಯಾನೇಜರ್ ರಮೇಶ್ ಬಾಬು, ದೇಗುಲದ ಕಾರ್ಯನಿರ್ವಹಣಾ ಅಧಿಕಾರಿ ಎಂಎಸ್ ದೊರೆ, ದೇಗುಲದ ಪಾರುಪತ್ಯಗಾರ ಕೆಟಿ ಪೊನ್ನಣ್ಣ ಉಪಸ್ಥಿತರಿದ್ದರು.

ಕಾವೇರಿ ನದಿಯ ಉಗಮ ಸ್ಥಾನವಾಗಿರುವ ಭಾಗಮಂಡಲದ ತಲಕಾವೇರಿಯಲ್ಲಿರುವ ಭಗಂಡೇಶ್ವರ ಹಾಗೂ ತಲಕಾವೇರಿ ದೇಗುಲಗಳಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ನಡೆಯುವ ಕಾವೇರಿ ತೀರ್ಥೋದ್ಭವಕ್ಕೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾಗುತ್ತಾರೆ. ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿರುವ ಭಾಗಮಂಡಲಕ್ಕೆ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರೂ ಭೇಟಿ ನೀಡುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!