ಮಧು ಅವರು ಬೇಕರಿ ಹೊಂದಿದ್ದಾರೆ. ಈ ಬಿಸ್ನೆಸ್ನಿಂದ ಅವರಿಗೆ ಒಳ್ಳೆಯ ಹಣ ಬರುತ್ತಿತ್ತು. ಅವರು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲಿ ಇದ್ದರು.
ಭಾಗ್ಯಶ್ರೀ-ಮಧು
ಮರಾಠಿಯ ಖ್ಯಾತ ನಟಿ ಭಾಗ್ಯಶ್ರೀ ಮೋಟೆ (Bhagyashree Mote) ಅವರ ಸಹೋದರಿ ಮಧು ಮಾರ್ಕಂಡೇಯ ಅವರು ನಿಧನ ಹೊಂದಿದ್ದಾರೆ. ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ನ ವಾಕಡ್ನಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಸಾಯುವಾಗ ಮಧು (Madhu Markandeya) ಮುಖದ ಮೇಲೆ ಗಾಯದ ಗುರುತಿದ್ದು ಈ ಸಂಬಂಧ ತನಿಖೆ ನಡೆಯುತ್ತಿದೆ. ಸದ್ಯ ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದೇ ದಾಖಲುಮಾಡಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಕೆಲ ಅನುಮಾಗಳ ಕೂಡ ಮೂಡಿವೆ.
ಮಧು ಅವರು ಬೇಕರಿ ಹೊಂದಿದ್ದಾರೆ. ಈ ಬಿಸ್ನೆಸ್ನಿಂದ ಅವರಿಗೆ ಒಳ್ಳೆಯ ಹಣ ಬರುತ್ತಿತ್ತು. ಅವರು ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲಿ ಇದ್ದರು. ಭಾನುವಾರ (ಮಾರ್ಚ್ 12) ಅವರು ಹೊಸ ಬೇಕರಿ ಮಾಡಲು ಕಟ್ಟಡ ನೋಡಲು ತೆರಳಿದ್ದರು. ಈ ವೇಳೆ ಅವರಿಗೆ ತಲೆಸುತ್ತು ಬಂದಿದೆ. ಆಗ ಅವರು ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ ‘ನಾಟು ನಾಟು..’ ಹಾಡಿನ ಬಗ್ಗೆ ನಗುಮುಖದಿಂದ ವಿವರಿಸಿದ ದೀಪಿಕಾ ಪಡುಕೋಣೆ
ಇದು ಕೊಲೆ ಎಂದ ಕುಟುಂಬ
ಮಧು ಸಾವಿನ ಬಗ್ಗೆ ಅವರ ಕುಟುಂಬದವರಿಗೆ ಅನುಮಾನ ಇದೆ. ಮಧು ಮುಖದಮೇಲೆ ಗಾಯದ ಗುರುತುಗಳಿದ್ದವು ಎನ್ನಲಾಗಿದೆ. ಹೀಗಾಗಿ, ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬ ಸದಸ್ಯರು ದೂರಿದ್ದಾರೆ. ಆದರೆ, ಇದನ್ನು ಆಕಸ್ಮಿಕ ಸಾವು ಎಂದು ಪೊಲೀಸರು ಹೇಳುತ್ತಿದ್ದಾರೆ. ಇದನ್ನು ಒಪ್ಪಲು ಕುಟುಂಬದವರು ಸಿದ್ಧರಿಲ್ಲ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾಗ್ಯಶ್ರೀ ಭಾವುಕ ಪೋಸ್ಟ್
ನಟಿ ಭಾಗ್ಯಶ್ರೀಗೆ ಸಹೋದರಿಯ ಸಾವು ಶಾಕಿಂಗ್ ಎನಿಸಿದೆ. ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನನ್ನ ಪ್ರೀತಿಯ ಸಹೋದರಿ ಈ ಜಗತ್ತಿಗೆ ವಿದಾಯ ಹೇಳಿದ್ದಾಳೆ. ನೀನು ನನಗೆ ಎಷ್ಟು ಮುಖ್ಯ ಎಂಬುದನ್ನು ನಾನು ಎಂದಿಗೂ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನನ್ನ ಸಂಪೂರ್ಣ ಅಸ್ತಿತ್ವದ ಕೇಂದ್ರ ನೀನಾಗಿದ್ದೆ. ನೀನು ಇಲ್ಲದೆ ನಾನು ಕಳೆದುಹೋಗಿದ್ದೇನೆ. ನೀನಿಲ್ಲದ ಈ ಬದುಕಲ್ಲಿ ನಾನೇನು ಮಾಡಬೇಕು? ನೀನು ನನಗೆ ಅದನ್ನು ಕಲಿಸಿಯೇ ಇಲ್ಲ. ಸಾವು ಅನಿವಾರ್ಯ. ಆದರೆ ನಿನ್ನನ್ನು ಹೋಗಲು ನಾನು ಬಿಡುವುದಿಲ್ಲ’ ಎಂದು ಮಧು ಜೊತೆಗಿನ ಫೋಟೋ ಹಂಚಿಕೊಂಡು ಭಾಗ್ಯಶ್ರೀ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಆಸ್ಕರ್ ಟ್ರೋಫಿಯನ್ನು ಕಳೆದು ಹಾಕಿದ್ದ ಎ.ಆರ್. ರೆಹಮಾನ್; ನಂತರ ಅದು ಸಿಕ್ಕಿದ್ದೆಲ್ಲಿ?
ಚಿತ್ರರಂಗದಲ್ಲಿ ಭಾಗ್ಯಶ್ರೀ ಆ್ಯಕ್ಟೀವ್
ಭಾಗ್ಯಶ್ರೀ ಅವರು ಮರಾಠಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಏಕ್ದಮ್ ಖಡಕ್’, ‘ಪಾಟಿಲ್’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇದರ ಜೊತೆಗೆ ಕಿರುತೆರೆಯಲ್ಲಿ ನಟಿಸಿಯೂ ಭಾಗ್ಯಶ್ರೀ ಫೇಮಸ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ