ಭೂಮಿ ಪಡ್ನೇಕರ್ ಅವರು ಬೆನ್ನಿನಮೇಲೆ ಕೈ ಇಟ್ಟುಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಅವರು ವಿಶೇಷ ಕ್ಯಾಪ್ಶನ್ ನೀಡಿ, ಅಭಿಮಾನಿಗಳ ಎದುರು ಒಂದು ಕೋರಿಕೆ ಇಟ್ಟಿದ್ದಾರೆ. ಈ ಫೋಟೋ ಸದ್ಯ ವೈರಲ್ ಆಗುತ್ತಿದೆ.
Feb 24, 2023 | 9:58 AM

ತಾಜಾ ಸುದ್ದಿ
Updated on: Feb 24, 2023 | 9:58 AM
Feb 24, 2023 | 9:58 AM
ಭೂಮಿ ಪಡ್ನೇಕರ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಈಗ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.
ಭೂಮಿ ಪಡ್ನೇಕರ್ ಅವರು ಬೆನ್ನಿನಮೇಲೆ ಕೈ ಇಟ್ಟುಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಅವರು ವಿಶೇಷ ಕ್ಯಾಪ್ಶನ್ ನೀಡಿ, ಅಭಿಮಾನಿಗಳ ಎದುರು ಒಂದು ಕೋರಿಕೆ ಇಟ್ಟಿದ್ದಾರೆ. ಈ ಫೋಟೋ ಸದ್ಯ ವೈರಲ್ ಆಗುತ್ತಿದೆ.
‘ದಯವಿಟ್ಟು, ನಿಮಗೆ ಬೆನ್ನು ನೋವು ಇದೆಯೇ ಎಂದು ಮಾತ್ರ ಕಮೆಂಟ್ ಮಾಡಬೇಡಿ’ ಎಂದು ಭೂಮಿ ಪಡ್ನೇಕರ್ ಅವರು ಬರೆದುಕೊಂಡಿದ್ದಾರೆ. ಅವರು ಕೆಲ ಬೋಲ್ಡ್ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.
2015ರಲ್ಲಿ ತೆರೆಗೆ ಬಂದ ‘ದಮ್ ಲಗಾಕೆ ಹೈಶಾ’ ಸಿನಿಮಾ ಮೂಲಕ ಭೂಮಿ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ನಂತರ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು.
ಸದ್ಯ ‘ಭೀಡ್’ ಸೇರಿ ಐದು ಚಿತ್ರಗಳ ಕೆಲಸಗಳಲ್ಲಿ ಭೂಮಿ ಪಡ್ನೇಕರ್ ಅವರು ಬ್ಯುಸಿ ಇದ್ದಾರೆ. ಈ ಪೈಕಿ ಒಂದು ಸಿನಿಮಾ ರಿಲೀಸ್ಗೆ ರೆಡಿ ಇದೆ.