0.2 C
Munich
Monday, March 27, 2023

Bill Gates to visit India Next next week, says India is the hope in the blog Gates Notes nsp | ಮುಂದಿನ ವಾರ ಭಾರತಕ್ಕೆ ಬಿಲ್ ಗೇಟ್ಸ್; ಭಾರತವನ್ನು ಹಾಡಿ ಹೊಗಳಿದ ಮೈಕ್ರೋಸಾಫ್ಟ್ ಸಹಸ್ಥಾಪಕ

ಓದಲೇಬೇಕು

ವಿಶದಲ್ಲಿರುವ ಇತರ ದೇಶಗಳಂತೆ, ಭಾರತವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ. ಆದರೆ ಆ ನಿರ್ಬಂಧದ ನಡುವೆಯೂ ಜಗತ್ತು ಹೇಗೆ ಪ್ರಗತಿ ಸಾಧಿಸಬಹುದು ಎಂಬುದನ್ನು ಭಾರತ ನಮಗೆ ತೋರಿಸಿದೆ. ಹೊಸ ವಿಧಾನಗಳನ್ನು ಸಹಯೋಗಿಸುವ ಮೂಲಕ ಸಾರ್ವಜನಿಕ, ಖಾಸಗಿ ಮತ್ತು ಲೋಕೋಪಕಾರಿ ಕ್ಷೇತ್ರಗಳನ್ನು ಬೆಳೆಸುತ್ತಿದೆ – ಬಿಲ್ ಗೇಟ್ಸ್

ಬಿಲ್ ಗೇಟ್ಸ್

ಕ್ಯಾಲಿಫೋರ್ನಿಯಾ: ಭಾರತವು ಭವಿಷ್ಯದ ಭರವಸೆಯನ್ನು ನೀಡುತ್ತದೆ, ಜಗತ್ತು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗಲೂ ದೇಶವು ದೊಡ್ಡ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಬಲ್ಲದು ಎಂಬುದನ್ನು ಭಾರತ ಸಾಬೀತುಪಡಿಸಿದೆ ಎಂದು ಮೈಕ್ರೋಸಾಫ್ಟ್ ಸಹಸ್ಥಾಪಕ (Miscrosoft Co-Founder), ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ-ಅಧ್ಯಕ್ಷ (Bill & Melinda Gates Foundation) ಬಿಲ್ ಗೇಟ್ಸ್ (Bill Gates) ತಮ್ಮ ಬ್ಲಾಗ್ “ಗೇಟ್ಸ್ ನೋಟ್ಸ್” ನಲ್ಲಿ ಹೇಳಿದ್ದಾರೆ. ಇದೇ ವೇಳೆ, ಮಾಧ್ಯಮ ಒಂದರಲ್ಲಿ ಪ್ರಕಟವಾದ ಗೇಟ್ಸ್ ಅವರ ಬ್ಲಾಗ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಜಗತ್ತು ಎಂತದ್ದೇ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ ಸರಿಯಾದ ಆವಿಷ್ಕಾರ ಮತ್ತು ವಿತರಣಾ ಮಾರ್ಗವನ್ನು ಹೊಂದಿದರೆ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಪ್ರಗತಿಯನ್ನು ಸಾಧಿಸಬಹುದು ಎಂದಾಗಲೆಲ್ಲಾ ಹಲವರು ಈ ಅಭಿಪ್ರಾಯವನ್ನು ಸ್ವೀಕರಿಸದೆ, “ಎರಡನ್ನೂ ಒಂದೇ ಸಮಯದಲ್ಲಿ ಪರಿಹರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಅಥವಾ ಇದಕ್ಕೆಲ್ಲ ಹಣದ ಕೊರತೆ ಬರುತ್ತದೆ ಎಂದು ಪ್ರತಿಕ್ರಯಿಸಿದರು.” ಆದರೆ ಭಾರತವು ಎಲ್ಲಾ ಪ್ರತಿಕ್ರಿಯೆಗಳನ್ನು ತಪ್ಪಾಗಿ ಸಾಬೀತುಪಡಿಸಿತು. “ಭಾರತವು ಸಾಧಿಸಿರುವ ಗಮನಾರ್ಹ ಪ್ರಗತಿಗಿಂತ ಉತ್ತಮ ಪುರಾವೆ ಬೇರೊಂದಿಲ್ಲ” ಎಂದು ಗೇಟ್ಸ್ ತಮ್ಮ ಬ್ಲಾಗ್‌ನಲ್ಲಿ ಹೇಳಿದ್ದಾರೆ.

“ಒಟ್ಟಾರೆಯಾಗಿ ಭಾರತವು ನನಗೆ ಭವಿಷ್ಯದ ಭರವಸೆಯನ್ನು ನೀಡುತ್ತದೆ. ಇದು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲು ಹೊರಟಿದೆ, ಹಾಗಿದ್ದರೂ ಭಾರತವು ದೊಡ್ಡ ಸವಾಲುಗಳನ್ನು ನಿಭಾಯಿಸಬಲ್ಲದು ಎಂದು ಸಾಬೀತುಪಡಿಸಿದೆ. ಈ ದೇಶವು ಪೋಲಿಯೊವನ್ನು ನಿರ್ಮೂಲನೆ ಮಾಡಿದೆ, ಎಚ್ಐವಿ ಕ್ರಕರಣಗಳನ್ನು ನಿಯಂತ್ರಿಸಿದೆ, ಬಡತನವನ್ನು ಕಡಿಮೆ ಮಾಡಿದೆ, ಶಿಶು ಮರಣವನ್ನುನಿಯಂತ್ರಿಸಿದೆ ಜೊತೆಗೆ ನೈರ್ಮಲ್ಯ ಮತ್ತು ಆರ್ಥಿಕ ಸೇವೆಗಳನ್ನೂ ಹೆಚ್ಚಿಸಿದೆ” ಎಂದು ಗೇಟ್ಸ್ ಹೇಳಿದರು.

ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕರು ಭಾರತವು ನಾವೀನ್ಯತೆಗೆ ವಿಶ್ವವೇ ತಿರುಗಿ ನೋಡುವಂತಹ ಅಭಿವೃದ್ಧಿಗಳನ್ನು ಮಾಡಿದೆ ಎಂದು ಹೇಳಿದ್ದಾರೆ. ಭಾರತವು ಅಗತ್ಯವಿರುವವರಿಗೆ ಈ ಸೌಲಭ್ಯಗಳು ತಲುಪುವಂತೆ ಮಾಡುತ್ತದೆ. ಅತಿಸಾರದ ಅನೇಕ ಮಾರಣಾಂತಿಕ ಪ್ರಕರಣಗಳನ್ನು ಉಂಟುಮಾಡುವ ವೈರಸ್ ಅನ್ನು ತಡೆಯುವ ರೋಟವೈರಸ್ ಲಸಿಕೆಯು ಪ್ರತಿ ಮಗುವಿಗೆ ತಲುಪಲು ತುಂಬಾ ದುಬಾರಿಯಾದಾಗ, ಭಾರತವು ಲಸಿಕೆಯನ್ನು ಸ್ವತಃ ಮಾಡಲು ನಿರ್ಧರಿಸಿತು.

ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾರನ್ನು ಇಂಡಿಗೊ ವಿಮಾನದಿಂದ ಇಳಿಸಿದ ಪೊಲೀಸ್

ಕಾರ್ಖಾನೆಗಳನ್ನು ನಿರ್ಮಿಸಲು ಮತ್ತು ಲಸಿಕೆಗಳನ್ನು ವಿತರಿಸಲು ದೊಡ್ಡ ಪ್ರಮಾಣದ ವಿತರಣಾ ಮಾರ್ಗಗಳನ್ನು ರಚಿಸಲು ಭಾರತವು ಉತ್ತಮ ತಜ್ಞರ ಜೊತೆ ಗೇಟ್ಸ್ ಫೌಂಡೇಶನ್ ಜೊತೆಯೂ ಕೆಲಸ ಮಾಡಿದೆ. 2021 ರ ಹೊತ್ತಿಗೆ, 1 ವರ್ಷ ವಯಸ್ಸಿನ 83 ಪ್ರತಿಶತದಷ್ಟು ಮಕ್ಕಳಿಗೆ ರೋಟವೈರಸ್ ವಿರುದ್ಧ ಚುಚ್ಚುಮದ್ದು ನೀಡಲಾಯಿತು. ಈ ಕಡಿಮೆ-ವೆಚ್ಚದ ಲಸಿಕೆಗಳನ್ನು ಈಗ ಪ್ರಪಂಚದಾದ್ಯಂತದ ಇತರ ದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ಗೇಟ್ಸ್ ತಿಳಿಸಿದರು.

ಪುಸಾದಲ್ಲಿರುವ ಭಾರತದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ (IARI) ಕುರಿತು ಮಾತನಾಡುವಾಗ, “IARI ಯಲ್ಲಿನ ಸಂಶೋಧಕರ ಕೆಲಸವನ್ನು ಬೆಂಬಲಿಸಲು ಗೇಟ್ಸ್ ಫೌಂಡೇಶನ್ ಭಾರತದ ಸಾರ್ವಜನಿಕ ವಲಯ ಮತ್ತು CGIAR ಸಂಸ್ಥೆಗಳೊಂದಿಗೆ ಕೈಜೋಡಿಸಿ, ಹೊಸ ಪರಿಹಾರವನ್ನು ಕಂಡುಕೊಂಡಿದೆ. ಶೇ. 10 ಕ್ಕಿಂತ ಹೆಚ್ಚು ಇಳುವರಿ ಹೊಂದಿರುವ ಮತ್ತು ಹೆಚ್ಚು ಬರ-ನಿರೋಧಕವಾಗಿರುವ ಕಡಲೆ ಪ್ರಭೇದಗಳು ಈಗಾಗಲೇ ರೈತರಿಗೆ ಲಭ್ಯವಿದೆ. ಇದರ ಪರಿಣಾಮವಾಗಿ, ಭಾರತವು ತನ್ನ ಜನರಿಗೆ ಆಹಾರವನ್ನು ನೀಡಿ ಬೆಂಬಲಿಸಲು ಸಿದ್ಧವಾಗಿದೆ. ಭಾರತದ ಕೃಷಿ ವಿಭಾಗವು ಬಹಳಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ ತಪ್ಪಾಗಲಾರದು” ಎಂದು ಬಿಲ್ ಗೇಟ್ಸ್ ಹೇಳಿದರು.

ಇದನ್ನೂ ಓದಿ: ಭಾರತ ಚಿನ್ನದ ಗಣಿಯಂತೆ, ಇಲ್ಲಿಯೇ ಹಸಿರು ಇಂಧನದ ಮೇಲೆ ಹೂಡಿಕೆ ಮಾಡಿ: ಪ್ರಧಾನಿ ಮೋದಿ ಆಹ್ವಾನ

ಗೇಟ್ಸ್ ಅವರು ನವೋದ್ಯಮಿಗಳು ಮಾಡುತ್ತಿರುವ ಕೆಲಸವನ್ನು ನೋಡಲು ಮುಂದಿನ ವಾರ ಭಾರತಕ್ಕೆ ಬರುವುದಾಗಿ ತಿಳಿಸಿದ್ದಾರೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಕೃಷಿ ತ್ಯಾಜ್ಯವನ್ನು ಜೈವಿಕ ಇಂಧನ ಮತ್ತು ರಸಗೊಬ್ಬರಗಳಾಗಿ ಪರಿವರ್ತಿಸಲು ವಿದ್ಯುತ್ ಮೋಹನ್ ಮತ್ತು ತಂಡ ಮಾಡುತ್ತಿರುವ ಕೆಲಸ ಮಾಡುತ್ತಿರುವ ಬೇಗ್ಗೆಯು ತಮ್ಮ ಬ್ಲಾಗ್‌ನಲ್ಲಿ ಗೇಟ್ಸ್ ಉಲ್ಲೇಖಿಸಿದ್ದಾರೆ.

“ವಿಶದಲ್ಲಿರುವ ಇತರ ದೇಶಗಳಂತೆ, ಭಾರತವು ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ. ಆದರೆ ಆ ನಿರ್ಬಂಧದ ನಡುವೆಯೂ ಜಗತ್ತು ಹೇಗೆ ಪ್ರಗತಿ ಸಾಧಿಸಬಹುದು ಎಂಬುದನ್ನು ಭಾರತ ನಮಗೆ ತೋರಿಸಿದೆ. ಹೊಸ ವಿಧಾನಗಳನ್ನು ಸಹಯೋಗಿಸುವ ಮೂಲಕ ಸಾರ್ವಜನಿಕ, ಖಾಸಗಿ ಮತ್ತು ಲೋಕೋಪಕಾರಿ ಕ್ಷೇತ್ರಗಳನ್ನು ಬೆಳೆಸುತ್ತಿದೆ, ನಾವು ಒಟ್ಟಾಗಿ ಕೆಲಸ ಮಾಡಿದರೆ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಬಹುದು ಜೊತೆಗೆ ಜಾಗತಿಕ ಆರೋಗ್ಯವನ್ನು ಸುಧಾರಿಸಬಹುದು ಎಂದು ನಾನು ನಂಬುತ್ತೇನೆ” ಎಂದು ಗೇಟ್ಸ್ ತಿಳಿಸಿದ್ದಾರೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!