5.5 C
Munich
Friday, March 3, 2023

BJP Deals Power In Meghalaya, Gains All 3 States Including Nagaland and Tripura | Meghalaya Power: ಈಶಾನ್ಯದಲ್ಲಿ ಬಿಜೆಪಿಗೆ 3ಕ್ಕೆ 3: ಮೇಘಾಲಯದಲ್ಲೂ ಕಮಲಕ್ಕೆ ಸಿಗ್ತಿದೆ ಪವರ್

ಓದಲೇಬೇಕು

BJP Sweeps All 3 States: ಬಿಜೆಪಿ ನಮಗೆ ಅಧಿಕೃತವಾಗಿ ಬೆಂಬಲ ನೀಡಿದೆ. ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ನಮ್ಮನ್ನು ಆಹ್ವಾನಿಸುವಂತೆ ಕೇಳಿಕೊಳ್ಳುತ್ತೇವೆ. ಸರ್ಕಾರ ರಚಿಸಲು ಬೇಕಾದ ಸಂಖ್ಯೆ ನಮ್ಮಲ್ಲಿದೆ ಎಂದು ಮೇಘಾಲಯ ಸಿಎಂ ಕಾನ್ರಾಡ್ ಸಾಂಗ್ಮಾ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾನ್ರಾಡ್ ಸಾಂಗ್ಮಾ

ನವದೆಹಲಿ: ಈಶಾನ್ಯ ಪ್ರದೇಶದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ಬಿಜೆಪಿ ಗದ್ದುಗೆ ಹಿಡಿಯವಲ್ಲಿ (BJP Power) ಯಶಸ್ವಿಯಾಗಿದೆ. ತ್ರಿಪುರಾ ಮತ್ತು ನಾಗಾಲ್ಯಾಂಡ್​ನಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಬಹುಮತ ಪಡೆದು ಸ್ವಂತ ಬಲದಲ್ಲಿ ಅಧಿಕಾರ ಹಿಡಿದಿವೆ. ಆದರೆ, ಮೇಘಾಲಯದಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಅತಿ ಹೆಚ್ಚು ಸ್ಥಾನ ಪಡೆದಿರುವ ಎನ್​ಪಿಪಿಗೆ ಬಿಜೆಪಿ ಮತ್ತೊಮ್ಮೆ ಬೆಂಬಲ ನೀಡಿ ಸರ್ಕಾರ ರಚನೆಯ ದಾರಿಯನ್ನು ಸುಗಮಗೊಳಿಸಿದೆ.

ಮೇಘಾಲಯದ 60 ಸದಸ್ಯರ ವಿಧಾನಸಭೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ 26 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಸರ್ಕಾರದಲ್ಲಿ ಎನ್​ಪಿಪಿಯ ಮಿತ್ರಪಕ್ಷವಾಗಿದ್ದ ಎಂ ಲಿಂಗ್​ಡೋ ನೇತೃತ್ವದ ಯುಡಿಪಿ ಪಕ್ಷ 10 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ತಲಾ 5 ಸ್ಥಾನಗಳನ್ನು ಪಡೆದರೆ, ವಿಪಿಪಿ 4ರಲ್ಲಿ ಗೆದ್ದಿದೆ. ಬಿಜೆಪಿ 2 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಎಚ್​ಎಸ್​ಪಿಡಿಪಿ, ಪಿಡಿಎಫ್ ಪಕ್ಷಗಳೂ 2 ಸದಸ್ಯರನ್ನು ಹೊಂದಿವೆ.

ಎನ್​ಪಿಪಿ, ಯುಡಿಪಿ, ಬಿಜೆಪಿ ಮತ್ತಿತರ ಪಕ್ಷಗಳು ಸೇರಿ ಕಳೆದ ಬಾರಿ ಮೇಘಾಲಯದಲ್ಲಿ ಸರ್ಕಾರ ರಚಿಸಿದ್ದವು. ಆದರೆ ಈ ಬಾರಿ ಈ ಎಲ್ಲಾ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ಹಿಂದಿನ ಸಿಎಂ ಕಾನ್ರಾಡ್ ಸಾಂಗ್ಮಾ ನೇತೃತ್ವದಲ್ಲಿ ಮತ್ತೊಮ್ಮೆ ಈ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.

ಬಿಜೆಪಿ ನಮಗೆ ಅಧಿಕೃತವಾಗಿ ಬೆಂಬಲ ನೀಡಿದೆ. ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ನಮ್ಮನ್ನು ಆಹ್ವಾನಿಸುವಂತೆ ಕೇಳಿಕೊಳ್ಳುತ್ತೇವೆ. ಸರ್ಕಾರ ರಚಿಸಲು ಬೇಕಾದ ಸಂಖ್ಯೆ ನಮ್ಮಲ್ಲಿದೆ ಎಂದು ಮೇಘಾಲಯ ಸಿಎಂ ಕಾನ್ರಾಡ್ ಸಾಂಗ್ಮಾ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿG20 Meet: ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸಲು ಭಾರತ-ಚೀನಾ ಭರವಸೆ, ಗಡಿಯಲ್ಲಿ ಶಾಂತಿ ಬಗ್ಗೆ ಚರ್ಚೆ

ಹಿಂದಿನ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ಆಗಿದೆ ಎಂದು ಬಿಜೆಪಿ ಅಸಮಾಧಾನಗೊಂಡಿತ್ತು. ಈ ಕಾರಣಕ್ಕೆ ಚುನಾವಣೆಯಲ್ಲಿ ಎನ್​ಪಿಪಿ ಮೈತ್ರಿಕೂಟದಲ್ಲಿ ಬಿರುಕು ಮೂಡಿ ಸ್ವತಂತ್ರ ಸ್ಪರ್ಧೆಗೆ ಕಾರಣವಾಗಿದ್ದು. ಈಗ ಎನ್​ಪಿಪಿ ಜೊತೆ ಬಿಜೆಪಿ ಹೋಗದಿದ್ದರೆ ಕಾಂಗ್ರೆಸ್, ಟಿಎಂಸಿ ಮತ್ತಿತರ ಪಕ್ಷಗಳು ಸೇರಿ ಸರ್ಕಾರ ರಚಿಸುವ ಸಾಧ್ಯತೆ ಅರಿತ ಬಿಜೆಪಿಯ ವರಿಷ್ಠರು ನಿನ್ನೆ ಕ್ಷಿಪ್ರವಾಗಿ ಎನ್​ಪಿಪಿ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ಮಾಡಿದ್ದಾರೆ.

ನಾಗಾಲೆಂಡ್, ತ್ರಿಪುರಾದಲ್ಲಿ ಬಹುಮತ

ನಿನ್ನೆ ಫಲಿತಾಂಶ ಘೋಷಣೆಯಾದ 3 ರಾಜ್ಯಗಳಲ್ಲಿ ತ್ರಿಪುರಾ ಮತ್ತು ನಾಗಾಲ್ಯಾಂಡ್​ನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿವೆ. 60 ಸದಸ್ಯ ಬಲದ ನಾಗಾಲೆಂಡ್​ನಲ್ಲಿ ಬಿಜೆಪಿ+ 38 ಸ್ಥಾನಗಳನ್ನು ಪಡೆದಿದೆ. ಇದರಲ್ಲಿ ಎನ್​ಡಿಪಿಪಿ 26 ಸ್ಥಾನ ಗಳಿಸಿದರೆ ಬಿಜೆಪಿ 12ರಲ್ಲಿ ಗೆದ್ದಿದೆ.

ತ್ರಿಪುರಾದಲ್ಲಿ ಬಿಜೆಪಿ ಸ್ವಂತಬಲದಲ್ಲೇ ಅಧಿಕಾರ ಹಿಡಿದಿದೆ. 60 ಸ್ಥಾನಗಳ ಪೈಕಿ ಬಿಜೆಪಿಯೊಂದೇ 32ರಲ್ಲಿ ಗೆದ್ದಿದೆ. ಅದರ ಮಿತ್ರಪಕ್ಷವಾಗಿದ್ದ ಐಪಿಎಫ್​ಟಿ 1ರಲ್ಲಿ ಮಾತ್ರ ಗೆದ್ದಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟ 14 ಸ್ಥಾನಗಳನ್ನು ಗೆದ್ದಿದೆ. ತ್ರಿಪುರಾದಲ್ಲಿ ಬಿಜೆಪಿಯ ಪ್ರತಿಮಾ ಭೌಮಿಕ್ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆ ದಟ್ಟವಾಗಿದೆ. ಹಾಗೊಂದು ವೇಳೆ ಅದು ನಿಜವಾದಲ್ಲಿ ತ್ರಿಪುರಾಗೆ ಮೊದಲ ಮಹಿಳಾ ಸಿಎಂ ಸಿಕ್ಕಂತಾಗುತ್ತದೆ. ನಾಗಾಲೆಂಡ್​ನಲ್ಲಿ ಎನ್​ಡಿಪಿಪಿಯ ನೇಫಿಯು ರಯೋ ಅವರು ಸತತ 5ನೇ ಅವಧಿಗೆ ಸಿಎಂ ಆಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!