-0.6 C
Munich
Thursday, March 2, 2023

BJP Leaders Drinks party in party office video gets viral hassan news | ಸೋಲಿನ ನೋವಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲೇ ಗುಂಡು ತುಂಡು ಪಾರ್ಟಿ, ಶಿಸ್ತಿನ ಪಕ್ಷದ ನಾಯಕರ ವಿಡಿಯೋ ವೈರಲ್

ಓದಲೇಬೇಕು

ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಲ್ಲಿ ಪಕ್ಷಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ ಸೋಲಿನ ನೋವಲ್ಲಿ ಪಕ್ಷದ ಕಚೇರಿಯಲ್ಲೇ ಬಿಜೆಪಿ ಮುಖಂಡರು ಎಣ್ಣೆ ಪಾರ್ಟಿ ಮಾಡಿದ್ದಾರೆ.

ಬಿಜೆಪಿ ಪಕ್ಷದ ಕಚೇರಿಯಲ್ಲೇ ಗುಂಡು ತುಂಡು ಪಾರ್ಟಿ

ಹಾಸನ: ಜಿಲ್ಲೆಯ ಸಕಲೇಶಪುರ ಪಟ್ಟಣದ ಬಿಜೆಪಿ ತಾಲೂಕು ಕಚೇರಿಯಲ್ಲಿ ಬಿಜೆಪಿ ಮುಖಂಡರು ಗುಂಡು ತುಂಡು ಪಾರ್ಟಿ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪಾರ್ಟಿಯ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ. ಮುಖಂಡರ ವರ್ತನೆಗೆ ಸ್ಥಳೀಯರು ಟೀಕೆ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ.

ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಲ್ಲಿ ಪಕ್ಷಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ ಸೋಲಿನ ನೋವಲ್ಲಿ ಪಕ್ಷದ ಕಚೇರಿಯಲ್ಲೇ ಬಿಜೆಪಿ ಮುಖಂಡರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಶಿಸ್ತಿನ ಪಕ್ಷದ ಬಿಜೆಪಿಯ ಕಚೇರಿಯಲ್ಲಿ ನಡೆದ ಪಾರ್ಟಿಯ ಫೋಟೋಗಳು, ವಿಡಿಯೋಗಳು ವೈರಲ್ ಆಗಿವೆ. ಶಿಸ್ತಿನ ಪಕ್ಷದಲ್ಲಿ ಮುಖಂಡರ ಆಸಿಸ್ತು ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ. ಅಶಿಸ್ತು ತೋರಿದವರ ವಿರುದ್ದ ಪಕ್ಷ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಬೆಂಬಲಿಗರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ಬೀಡು ಕೋಲಾರದಲ್ಲೊಂದು ಕೆಂಪು ಕ್ರಾಂತಿ! ಹಿಂದಿನ ಜಿಲ್ಲಾ ಎಸ್ಪಿ ಸಲಹೆಯಂತೆ ಕೃಷಿಯಲ್ಲಿ ತೊಡಗಿದ ನಿವೃತ್ತ ಶಿಕ್ಷಕರೊಬ್ಬರ ಯಶೋಗಾಥೆ ಇದು!

ಮೂರು ದಿನಗಳ ಹಿಂದೆ ಸಕಲೇಶಪುರ ತಾಲೂಕಿನ ಉಚ್ಚಂಗಿ ಮತ್ತು ವಣಗೂರು ಗ್ರಾ.ಪಂ.ಚುನಾವಣೆ ನಡೆದು ಫಲಿತಾಂಶ ಬಂದಿತ್ತು. ಫಲಿತಾಂಶದಲ್ಲಿ ಬಿಜೆಪಿಗೆ ಪರಾಜಯ ಆದ ಕಾರಣ ಬೇಸರದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಕಲೇಶಪುರ ತಾಲೂಕು ಮಂಡಲ ಅಧ್ಯಕ್ಷ ಮಂಜುನಾಥ ಸಾಂಗ್ವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೇಶ್ ಸೇರಿ ಹಲವು ಮುಖಂಡರು ಎಣ್ಣೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!