ರಾಜ್ಯ ಸರ್ಕಾರ ರಚನೆ ಮಾಡಿದ್ದ ದತ್ತಪೀಠ ವ್ಯವಸ್ಥಾಪನ ಮಂಡಳಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಉರುಸ್ಗೆ ಬೆಂಬಲ ನೀಡಲು ಮುಸ್ಲಿಂ ಸಮುದಾಯ ನಿರಾಕರಿಸಿದೆ.
ಮುಸ್ಲಿಂ ಸಮುದಾಯದಿಂದ ಸಭೆ, ಸಿ.ಟಿ ರವಿ
ಚಿಕ್ಕಮಗಳೂರು: ರಾಜ್ಯ ಸರ್ಕಾರ ರಚನೆ ಮಾಡಿದ್ದ ದತ್ತಪೀಠ ವ್ಯವಸ್ಥಾಪನ ಮಂಡಳಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ (Bababudangiri) ದರ್ಗಾದಲ್ಲಿ ಉರುಸ್ಗೆ ಬೆಂಬಲ ನೀಡಲು ಮುಸ್ಲಿಂ ಸಮುದಾಯ ನಿರಾಕರಿಸಿದೆ. ದತ್ತಪೀಠದಲ್ಲಿ ವಿಜೃಂಭಣೆಯಿಂದ ಉರುಸ್ ಆಚರಣೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಪ್ಲಾನ್ ಮಾಡಿದ್ದರು. ಆದರೆ ವ್ಯವಸ್ಥಾಪನ ಮಂಡಳಿ ನೇತೃತ್ವದಲ್ಲಿ ಉರುಸ್ ಆಚರಣೆಗೆ ಮುಸ್ಲಿಂ ಸಮುದಾಯ ತಿರಸ್ಕರಿಸಿದ್ದಾರೆ. ಅಲ್ಲಿಗೆ ಚುನಾವಣಾ ಮುನ್ನವೇ ಸಿ.ಟಿ ರವಿಗೆ ಸಂಕಷ್ಟ ಎದುರಾಗಿದ್ದು, ತನ್ನದೇ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ತಿರುಗಿಬಿದ್ದಿದೆ.
ಚಿಕ್ಕಮಗಳೂರು ಡಿಸಿ ರಮೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಉರುಸ್ ಪೂರ್ವಭಾವಿ ಸಭೆಗೆ ಮುಸ್ಲಿಂ ಸಮುದಾಯದವರು ಬೈಕಟ್ ಮಾಡಿದರು. ರಾಜ್ಯ, ಹೊರ ರಾಜ್ಯದಿಂದ ಉರುಸ್ಗೆ ಮುಸ್ಲಿಂ ಸಮುದಾಯದವರು ಆಗಮಿಸಲಿದ್ದಾರೆ. ಮಾರ್ಚ್ 8, 9, 10 ರಂದು ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಉರುಸ್ ನಡೆಯ ಬೇಕಿದೆ.
ಇದನ್ನೂ ಓದಿ: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ: ರಾಜ್ಯ ಸರ್ಕಾರದಿಂದ ಆಡಳಿತ ಮಂಡಳಿ ರಚನೆ
ರಾಜ್ಯ ಸರ್ಕಾರಕ್ಕೆ ನಾಲ್ಕು ಬೇಡಿಕೆ ಇಟ್ಟಿರುವ ಮುಸ್ಲಿಂ ಸಮುದಾಯ
ಅರ್ಚಕ ನೇಮಕಾತಿ ರದ್ದು, ವ್ಯವಸ್ಥಾಪನ ಮಂಡಳಿ ರದ್ದು, ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿ ಪೂಜೆ, ನಮಾಜ್ ಮಾಡಲು ಅವಕಾಶ ನೀಡುವಂತೆ ಪಟ್ಟು ಹಿಡಿಯಲಾಗಿದೆ. ಜಿಲ್ಲಾಧಿಕಾರಿ ರಮೇಶ್ ಮುಂದೆ ನಾಲ್ಕು ಬೇಡಿಕೆಗಳನ್ನು ಇಟ್ಟು ಉರುಸ್ ಆಚರಣೆಗೆ ಮುಸ್ಲಿಂ ಒಕ್ಕೂಟ ಬೇಡಿಕೆ ಇಟ್ಟಿದೆ. ಕಳೆದ ದತ್ತ ಜಯಂತಿ ವೇಳೆ ರಾಜ್ಯ ಸರ್ಕಾರ ಅರ್ಚಕರ ನೇಮಕ ಆಡಳಿತ ಮಂಡಳಿ ರಚನೆ ಮಾಡಿತ್ತು. ಈ ಆಡಳಿತ ಮಂಡಳಿಯಲ್ಲಿ ಓರ್ವ ಮುಸ್ಲಿಂ ಸದಸ್ಯ ಸೇರಿ 8 ಜನರು ಇರಲಿದ್ದಾರೆ. ಅರ್ಚಕರ ನೇಮಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಿಟಿ ರವಿ ಆಪ್ತ ಫಾರ್ಮ್ ಹೌಸ್ ಸೀಕ್ರೆಟ್ ಬಿಚ್ಚಿಟ್ಟ
ಬಾಬಾಬುಡನ್ಗಿರಿ ಮತ್ತು ರಾಜಕಾರಣ
ದತ್ತಪೀಠಕ್ಕೆ ಹಿಂದೂ ಮತ್ತು ಮುಸ್ಲಿಮರು ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಮರ ಪ್ರಭಾವ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಕ್ಷೇತ್ರವು ದೇಶವ್ಯಾಪಿ ಗಮನ ಸೆಳೆಯಿತು. ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿಯಾಗಿ ಕೋಮು ಸೌಹಾರ್ದ ವೇದಿಕೆಯೂ ಚಿಕ್ಕಮಗಳೂರಿನಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿತ್ತು. ಕ್ಷೇತ್ರದಲ್ಲಿದ್ದ ಮುಜಾವವರು ಎರಡೂ ಪದ್ಧತಿಗಳ ಪ್ರಕಾರ ಪೂಜೆ ಮಾಡಿಕೊಡುತ್ತಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.