1.5 C
Munich
Wednesday, March 8, 2023

BJP MLA CT Ravi Slams Congress Leader Mithun Rai in Belagavi | ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ಅರಸರು ಹೇಳಿಕೆ ವಿಚಾರ: ಮಿಥುನ್​ ರೈಗೆ, ಸಿಟಿ ರವಿ ತಿರುಗೇಟು

ಓದಲೇಬೇಕು

ಭಾರತ ಹೆಸರು ಕೊಟ್ಟಿದ್ದು ಮುಸ್ಲಿಂರು ಅಂತ ಹೇಳಿದರು ಅಚ್ಚರಿ ಇಲ್ಲ. ಮುಸ್ಲಿಂರು ನಾಮಕರಣ ಮಾಡಿದ್ದಾರೆಂದು ಹೇಳಿದರೂ ಅಚ್ಚರಿ ಇಲ್ಲ. ಕೇವಲ ಕೃಷ್ಣ ಮಠ ಅಲ್ಲ, ‘ಭಾರತ’ ಹೆಸರು ಕೊಟ್ಟಿದ್ದು ಮುಸಲ್ಮಾನರು ಹೀಗೆ ಕಾಂಗ್ರೆಸ್​​ನವರು ಹೇಳಿದರೂ ನಾವೆಲ್ಲಾ ಅಚ್ಚರಿ ಪಡಬೇಕಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.

ಶಾಸಕ ಸಿಟಿ ರವಿ

ಬೆಳಗಾವಿ: ಉಡುಪಿ ಕೃಷ್ಣ ಮಠಕ್ಕೆ (Udupi Krishna Mutt) ಜಾಗ ಕೊಟ್ಟಿದ್ದು ಮುಸ್ಲಿಂ (Muslim) ಅರಸರು ಕಾಂಗ್ರೆಸ್ (Congress)​ ಯುವ ನಾಯಕ ಮಿಥುನ್ ರೈ (Mithun Rai) ಹೇಳಿಕೆಗೆ ಬಿಜೆಪಿ ಶಾಸಕ ಸಿಟಿ ರವಿ (CT Ravi) ತಿರುಗೇಟು ನೀಡಿದ್ದಾರೆ. ಭಾರತ ಹೆಸರು ಕೊಟ್ಟಿದ್ದು ಮುಸ್ಲಿಂರು ಅಂತ ಹೇಳಿದರು ಅಚ್ಚರಿ ಇಲ್ಲ. ಮುಸ್ಲಿಂರು ನಾಮಕರಣ ಮಾಡಿದ್ದಾರೆಂದು ಹೇಳಿದರೂ ಅಚ್ಚರಿ ಇಲ್ಲ. ಕೇವಲ ಕೃಷ್ಣ ಮಠ ಅಲ್ಲ, ‘ಭಾರತ’ ಹೆಸರು ಕೊಟ್ಟಿದ್ದು ಮುಸಲ್ಮಾನರು. ಮುಸಲ್ಮಾನ ದೊರೆಗಳೇ ರಾಮಮಂದಿರ ನಿರ್ಮಾಣ ಮಾಡಿದ್ದು. ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು. ಕಾಂಗ್ರೆಸ್​​ನವರು ಹೀಗೆ ಹೇಳಿದರೂ ನಾವೆಲ್ಲಾ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದರು.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ 2 ಮುಖಗಳು. ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ವಾಗ್ದಾಳಿ ಮಾಡಿದರು.

ಸಿ.ಟಿ.ರವಿ ವಿತರಣೆ ಮಾಡಿದ್ದ ಸೀರೆ ಸುಟ್ಟು ಹಾಕಿದ ವಿಚಾರವಾಗಿ ಮಾತನಾಡಿದ ಅವರು ಅವರೆಲ್ಲಾ ಡ್ರಾಮಾ ಆಡ್ತಾರೆ, ಆ ರೀತಿ ನಾವು ವಿತರಣೆ ಮಾಡುತ್ತಿಲ್ಲ. ಅದೆಲ್ಲ ಕಾಂಗ್ರೆಸ್​ನವರ ಹಳೆ ನಾಟಕಕಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮಿಥುನ್​ ರೈ ಹೇಳಿಕೆಗೆ ಸಾಕಷ್ಟು ವಿರೋಧವ್ಯಕ್ತವಾಗುತ್ತಿದೆ.

ಮಿಥುನ್​ ರೈ ನೀಡಿರುವ ವಿವಾದಾತ್ಮ ಹೇಳಿಕೆ

ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಮಿಥುನ್ ರೈ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯಲ್ಲಿ ನಡೆದ ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ನಾನು ಸೌಹಾರ್ದಯುತ ಹೇಳಿಕೆ ನೀಡಿದ್ದೇನೆ

ಕಾಂಗ್ರೆಸ್ ನಾಯಕ ಮಿಥುನ್​ ರೈ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಬಂದಿದ್ದ ವರದಿ ನೋಡಿ ನಾನು ಹೇಳಿಕೆ ನೀಡಿದ್ದೇನೆ. ನಾನು ಸೌಹಾರ್ದಯುತ ಹೇಳಿಕೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಮಿಥುನ್ ರೈ ಹೇಳಿಕೆಗೆ ಹಿಂದೂ ಮುಖಂಡರ ಆಕ್ರೋಶ

ಮಿಥುನ್ ರೈ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದದು. ಶ್ರೀಕೃಷ್ಣ ಮಠಕ್ಕೆ 800 ವರ್ಷಗಳ ಇತಿಹಾಸ ಇದೆ. ಹಿಂದೂಗಳಿಗೆ ಅವಮಾನ ಆಗುವಂತಹ ಹೇಳಿಕೆ ನೀಡಿದ್ದಾರೆ. ಮಿಥುನ್ ರೈ ಕೂಡಲೇ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಮಿಥುನ್ ರೈ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಖಂಡನೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!