-0.3 C
Munich
Friday, March 3, 2023

BJP MLA’s son Lokayukta in the trap, There is no question of protecting anyone; Kateel | ಬಿಜೆಪಿ ಶಾಸಕರ ಪುತ್ರ ಲೋಕಾಯುಕ್ತ ಬಲೆಗೆ: ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ಭ್ರಷ್ಟಾಚಾರದ ದಾಖಲೆ ಸಿಕ್ಕಿದ್ದಕ್ಕೆ ಡಿಕೆಶಿ ಜೈಲಿಗೆ ಹೋಗಿದ್ದು; ಕಟೀಲ್ ​

ಓದಲೇಬೇಕು

‘ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ಭ್ರಷ್ಟಾಚಾರದ ದಾಖಲೆ ಸಿಕ್ಕಿದ್ದಕ್ಕೆ ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದು, ಆದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾಕೆ ರಾಜೀನಾಮೆ ಕೊಡಲಿಲ್ಲ. ಮೊದಲು ಡಿಕೆಶಿ ರಾಜೀನಾಮೆ ಕೊಡಲಿ ಆಮೇಲೆ ನೋಡೋಣ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬೀದರ್​: ‘ಲೋಕಾಯುಕ್ತ ಸಂಸ್ಥೆಯನ್ನು ಸದೃಢ ಮಾಡಿದ್ದೇ ನಾವು, ತನಿಖೆಯಾಗಲಿ ಇದರಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪರವರು ಭಾಗಿಯಾಗಿದ್ದರೆ ಅವರ ವಿರುದ್ದವು ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಸರ್ಕಾರಿ ಅಧಿಕಾರಿಯಾಗಿದ್ದಾನೆ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬೀದರ್​​ನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ.

ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ​ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್​ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ‘ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ಭ್ರಷ್ಟಾಚಾರದ ದಾಖಲೆ ಸಿಕ್ಕಿದ್ದಕ್ಕೆ ಡಿಕೆಶಿ ತಿಹಾರ್ ಜೈಲಿಗೆ ಹೋಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾಕೆ ರಾಜೀನಾಮೆ ಕೊಡಲಿಲ್ಲ. ಮೊದಲು ಡಿಕೆಶಿ ರಾಜೀನಾಮೆ ಕೊಡಲಿ ಆಮೇಲೆ ನೋಡೋಣ ಎಂದಿದ್ದಾರೆ.

ಇದನ್ನೂ ಓದಿ:ಬಿಜೆಪಿ ಶಾಸಕ, ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ​: ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಕಾಂಗ್ರೆಸ್ ಅವಧಿಯ ಎಲ್ಲ ಕೇಸ್​ ತನಿಕೆಯಾಗಲಿದೆ ಎಂದ ಸಿಎಂ

ಸಂಜಯ್ ನಗರದ KMV ಮ್ಯಾನ್ಷನ್ ಅಪಾರ್ಟ್​​​ಮೆಂಟ್​​ನಲ್ಲಿರುವ ಶಾಸಕ ಮಾಡಾಳ್​​ ಪುತ್ರ ಪ್ರಶಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ​​ ಮಾಡಿದ್ದು, ನಿವಾಸದಲ್ಲಿ ಒಟ್ಟು 6 ಕೋಟಿ ರೂ ನಗದು ಹಣ ಹಾಗೂ ಬೆಂಗಳೂರು ನಗರದಲ್ಲಿರುವ ಕ್ರೆಸೆಂಟ್​ ರಸ್ತೆಯಲ್ಲಿರುವ ಪ್ರಶಾಂತ್​ ಕಚೇರಿಯಲ್ಲೂ ದಾಳಿ ಆಗಿದ್ದು, ಬರೊಬ್ಬರಿ 1.62 ಕೋಟಿ ರೂ. ನಗದು ಪತ್ತೆಯಾಗಿದ್ದು, ಮನೆ ಹಾಗೂ ಕಛೇರಿ ಸೇರಿ ಒಟ್ಟೂ 7.62 ಕೋಟಿ ರೂ ಹಣವನ್ನ ಜಪ್ತಿ ಮಾಡಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!