10.1 C
Munich
Thursday, March 9, 2023

Bollywood actor and director Satish Kaushik Passed Away at the age of 66 | Satish Kaushik Passes Away: ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ಹೃದಯಾಘಾತದಿಂದ ನಿಧನ

ಓದಲೇಬೇಕು

ಬಾಲಿವುಡ್​ನ ಹಿರಿಯ ನಟ ಅನುಪಮ್ ಖೇರ್ ಜೊತೆ ಸತೀಶ್​​ ಕೌಶಿಕ್​ಗೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಸತೀಶ್ ನಿಧನ ವಾರ್ತೆಯನ್ನು ಅನುಪಮ್​ ಖೇರ್​ ಅವರು ತಿಳಿಸಿದ್ದಾರೆ.

ಭಾರತೀಯ ಚಿತ್ರರಂಗ ಇತ್ತೀಚೆಗೆ ಅನೇಕರನ್ನು ಕಳೆದುಕೊಳ್ಳುತ್ತಿದೆ. ಈಗ ಬಾಲಿವುಡ್​​ನ ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಅವರು ಬುಧವಾರ (ಮಾರ್ಚ್​ 8) ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಬಾಲಿವುಡ್​ನ ಹಿರಿಯ ನಟ ಅನುಪಮ್ ಖೇರ್ (Anupam Kher) ಜೊತೆ ಸತೀಶ್​​ ಕೌಶಿಕ್​ಗೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಸತೀಶ್ ನಿಧನ ವಾರ್ತೆಯನ್ನು ಅನುಪಮ್​ ಖೇರ್​ ಅವರು ತಿಳಿಸಿ, ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

‘ನನಗೆ ಗೊತ್ತು ಸಾವು ಈ ಜಗತ್ತಿನ ಪರಮ ಸತ್ಯ. ನಾನು ಬದುಕಿರುವಾಗ ನನ್ನ ಆತ್ಮೀಯ ಗೆಳೆಯ ಸತೀಶ್ ಕೌಶಿಕ್ ಬಗ್ಗೆ ಈ ವಿಷಯ ಬರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲೂ ಯೋಚಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಇದ್ದಕ್ಕಿದ್ದಂತೆ ಪೂರ್ಣ ವಿರಾಮ. ನೀನಿಲ್ಲದೆ ನನ್ನ ಜೀವನ ಎಂದಿಗೂ ಮೊದಲಿನಂತೆ ಆಗುವುದಿಲ್ಲ ಸತೀಶ್. ಓಂ ಶಾಂತಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅನುಪಮ್ ಖೇರ್​ನ ಟ್ವೀಟ್​ನ ಎಲ್ಲರೂ ಶೇರ್ ಮಾಡಿಕೊಂಡು ಸಂತಾಪ ಸೂಚಿಸುತ್ತಿದ್ದಾರೆ. ಗೆಳೆಯನನ್ನು ಕಳೆದುಕೊಂಡ ಅನುಪಮ್​​ಗೆ ಫ್ಯಾನ್ಸ್ ಕಡೆಯಿಂದ ಧೈರ್ಯ ತುಂಬುವ ಕೆಲಸ ಆಗಿದೆ.

ಇದನ್ನೂ ಓದಿಸತೀಶ್ ಅವರು ಹಲವು ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. 1983ರಲ್ಲಿ ಮೊದಲ ಬಾರಿಗೆ ಅವರು ಬಣ್ಣ ಹಚ್ಚಿದರು. ‘ಜಲ್ವಾ’, ‘ಸ್ವರ್ಗ್​’, ‘ಆಂಟಿ ನಂಬರ್ 1’, ‘ಕಲ್ಕತ್ತಾ ಮೇಲ್​’, ‘ಭಾಗಿ 3’ ಸೇರಿ ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಂಗನಾ ರಣಾವತ್ ನಿರ್ದೇಶಿಸಿ, ನಟಿಸುತ್ತಿರುವ ‘ಎಮರ್ಜೆನ್ಸಿ’ ಚಿತ್ರದಲ್ಲಿ ಜಗ್​ಜೀವನ್ ರಾಮ್ ಪಾತ್ರವನ್ನು ಅವರು ಮಾಡುತ್ತಿದ್ದರು. ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ಸತೀಶ್​ ನಿಧನ ಹೊಂದಿದ್ದು ನಿಜಕ್ಕೂ ದುಃಖದ ಸಂಗತಿ. ಈ ಬಗ್ಗೆ ಕಂಗನಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Anupam Kher Birthday: ‘ಘೋಸ್ಟ್​’ ನಟ ಅನುಪಮ್​ ಖೇರ್​ಗೆ ಜನ್ಮದಿನದ ಸಡಗರ; 68ನೇ ವಯಸ್ಸಲ್ಲೂ ಫುಲ್​ ಆ್ಯಕ್ಟೀವ್​

1992ರಲ್ಲಿ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಸ್ಕ್ಯಾಮ್ ನಡೆದಿತ್ತು. ಇದನ್ನು ಆಧರಿಸಿ ಸಿದ್ಧಗೊಂಡ ‘ಸ್ಕ್ಯಾಮ್​ 1992’ ವೆಬ್ ಸೀರಿಸ್ 2020ರಲ್ಲಿ ರಿಲೀಸ್ ಆಯಿತು. ಇದರಲ್ಲಿ ಮನು ಮುಂದ್ರಾ ಪಾತ್ರವನ್ನು ಸತೀಶ್ ಕೌಶಿಕ್ ನಿರ್ವಹಿಸಿದ್ದರು. ಈ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅವರನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ..

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!