10.5 C
Munich
Thursday, March 30, 2023

CBI registers Corruption case against Manish Sisodia over alleged irregularities in Delhi Feedback Unit | Manish Sisodia: ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿರುವ ಮನೀಷ್ ಸಿಸೋಡಿಯಾ ವಿರುದ್ಧ ಬೇಹುಗಾರಿಕೆ ಪ್ರಕರಣ ದಾಖಲಿಸಿದ ಸಿಬಿಐ

ಓದಲೇಬೇಕು

ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ.

ಮನೀಶ್ ಸಿಸೋಡಿಯಾ

ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವಿರುದ್ಧ ಸಿಬಿಐ ಬೇಹುಗಾರಿಕೆ ಪ್ರಕರಣ ದಾಖಲಿಸಿದೆ. ಸಿಸೋಡಿಯಾ ಸೇರಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಫೆಬ್ರವರಿ 26 ರಂದು ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಬೇಹುಗಾರಿಕೆ ಪ್ರಕರಣದಲ್ಲಿ ದೆಹಲಿಯ ಮಾಜಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಸಿಸೋಡಿಯಾ ವಿರುದ್ಧ ಕ್ರಿಮಿನಲ್ ಪಿತೂರಿ, ಅಪ್ರಾಮಾಣಿಕವಾಗಿ ಆಸ್ತಿ ದುರ್ಬಳಕೆ, ವಂಚನೆ ಮತ್ತು ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ.

ತನಿಖಾ ಸಂಸ್ಥೆಯು ದೆಹಲಿ ಸರ್ಕಾರದ ಫೀಡ್​ಬ್ಯಾಕ್​ ಯುನಿಟ್​ನಿಂದ ಸಾಕಷ್ಟು ಮಂದಿ ಬೇಹುಗಾರಿಕೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಸಿಸೋಡಿಯಾ ಹೊರತಾಗಿ, ಪ್ರಕರಣ ದಾಖಲಿಸಿರುವ ಇತರ 5 ಜನರಲ್ಲಿ ಆಗಿನ ವಿಜಿಲೆನ್ಸ್ ಕಾರ್ಯದರ್ಶಿ ಸುಕೇಶ್ ಕುಮಾರ್ ಜೈನ್, ನಿವೃತ್ತ ಡಿಐಜಿ, ಸಿಐಎಸ್‌ಎಫ್ ಮತ್ತು ಸಿಎಂ ಮತ್ತು ಜಂಟಿ ನಿರ್ದೇಶಕ ಪ್ರತಿಕ್ರಿಯೆ ಘಟಕದ ವಿಶೇಷ ಸಲಹೆಗಾರ, ನಿವೃತ್ತ ಜಂಟಿ ಉಪ ನಿರ್ದೇಶಕ ಪ್ರದೀಪ್ ಕುಮಾರ್ ಪುಂಜ್ (ಉಪ ನಿರ್ದೇಶಕ ಎಫ್‌ಬಿಯು), ನಿವೃತ್ತ ಸಹಾಯಕ ಕಮಾಂಡೆಂಟ್ ಸಿಐಎಸ್ಎಫ್ ಸತೀಶ್ ಖೇತ್ರಪಾಲ್ (ಫೀಡ್ ಬ್ಯಾಕ್ ಆಫೀಸರ್), ಗೋಪಾಲ್ ಮೋಹನ್ (ದೆಹಲಿ ಸಿಎಂಗೆ ಸಲಹೆಗಾರ) ಮತ್ತು ಇನ್ನೊಂದು ಹೆಸರನ್ನು ಸೇರಿಸಲಾಗಿದೆ.

ಈ ಎಫ್​ಐಆರ್​ನಲ್ಲಿ ಮನೀಷ್​ ಸಿಸೋಡಿಯಾರನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!