ಯಡ್ರಾಮಿ: ತಾಲೂಕಿನ ಬಿಳವಾರ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಸಂಘಟನೆ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಹಾಗೂ ಧ್ವಜಾರೋಹಣ ಸಮಾರಂಭ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ ಮಹಮ್ಮದ್ ಯುನಸ್ ಬೀಳವಾರ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ವಹಿಸಿಕೊಂಡಿದ್ದರು ಧ್ವಜಾರೋಹಣ ಕಾರ್ಯಕ್ರಮವನ್ನು ಬೀಳವಾರ ಗ್ರಾಮ ಪಂಚಾಯತಿ ಸದಸ್ಯರು ನೀಲಮ್ಮ ಗಂಡ ಹಣಮಂತರಾಯ ಅವರು ವಹಿಸಿಕೊಂಡಿದ್ದರು ಕಾರ್ಯಕ್ರಮದ ಉಸ್ತುವಾರಿ ಭಾಷಾ ಪಟೇಲ್ ಮೂಲಿಮನಿ ಟಿಪ್ಪು ಸುಲ್ತಾನ್ ಸಂಘಟನೆಯ ಅಧ್ಯಕ್ಷರು ವಹಿಸಿಕೊಂಡಿದ್ದರು ಕಾರ್ಯಕ್ರಮದ ನಿರೂಪಣೆ ಹಸನ್ ಪಟೇಲ್ ಜಮಖಂಡಿ ಸಾರ್ವಜನಿಕ ಹೋರಾಟಗಾರ ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಬಿಳವಾರ ಅವರು ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಲಾಲ್ ಪಟೇಲ್ ಯರಗಲ್ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು ಹಾಗೂ ಕಾರ್ಯಕ್ರಮದ ಕುರಿತು ಮಾಜಿ ತಾಲೂಕ್ ಪಂಚಾಯತ್ ಸದಸ್ಯರು ಗೊಲ್ಲಾಳಪ್ಪ ಮ್ಯಾಗೇರಿ ಅವರು ಟಿಪ್ಪು ಸುಲ್ತಾನ್ ಅವರ ಜೀವನ ಚರಿತ್ರೆ ಅವರು ನಡೆದು ಬಂದ ದಾರಿ ದೇಶಕ್ಕೋಸ್ಕರ ತಮ್ಮ ಎರಡು ಮಕ್ಕಳನ್ನು ಬ್ರಿಟಿಷರಿಗೆ ವತ್ತೆ ಇಟ್ಟು ತಮ್ಮ ಪ್ರಾಣವನ್ನೇ ದೇಶಕ್ಕೋಸ್ಕರ ಬಲಿದಾನಗೈದ ಏಕೈಕ ದೇಶಪ್ರೇಮಿ ಹಜರತ್ ಟಿಪ್ಪು ಸುಲ್ತಾನ್ ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಅದೇ ರೀತಿಯಾಗಿ ಕಾಂಗ್ರೆಸ್ ಮುಖಂಡರಾದ ಹಾಲುಮತ ಸಮಾಜದ ಹೋರಾಟಗಾರರಾದ ಶರಣು ಪೂಜಾರಿ ದೊಡ್ಡಮನಿ ಹಜರತ್ ಟಿಪ್ಪು ಸುಲ್ತಾನ್ ಅವರ ಕುರಿತು ಮಾತನಾಡಿದರು.
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕ್ಷಿಪಣಿ ತಯಾರಕ ಟಿಪ್ಪು ಸುಲ್ತಾನ್ ವಿದೇಶದೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿದವರು ಟಿಪ್ಪು ಸುಲ್ತಾನ್ ಹಲವಾರು ದೇವಸ್ಥಾನಗಳಿಗೆ ಧಾರ್ಮಿಕ ಮನೋಭಾವನೆಯಿಂದ ಅಂದಿನ ಕಾಲದಲ್ಲಿ ರಕ್ಷಣೆ ನೀಡಿದ್ದು ಟಿಪ್ಪು ಸುಲ್ತಾನ ಅದೇ ರೀತಿಯಾಗಿ ರಾಮನಗರದಲ್ಲಿ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಬೆಳೆಗೆ ಉತ್ತೇಜನ ನೀಡಿದ್ದು ಟಿಪ್ಪು ಸುಲ್ತಾನ್. ಹಿಂದುಳಿದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿದ್ದು ರಕ್ಷಣೆ ನೀಡಿದ್ದು ಟಿಪ್ಪು ಸುಲ್ತಾನ್. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲು ಬ್ರಿಟಿಷರ ವಿರುದ್ಧ 17ನೇ ಶತಮಾನದಿಂದ18ಹಾಗೂ 19ನೇ ಶತಮಾನದವರಿಗೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದವರು.
ಮುಸ್ಲಿಂ ಹಾಗು ಹಿಂದೂ ಜನಾಂಗ ಆದರೆ ಇತ್ತೀಚಿನ ದಿನಗಳಲ್ಲಿ ಅಂದರೆ 20 ಹಾಗೂ21ನೇಯ ಶತಮಾನ ಬಂದ ಮೇಲೆ ರಾಜಕೀಯ ದುರುದ್ದೇಶದಿಂದ ಧರ್ಮ ಜಾತಿ ರಾಜಕೀಯ ನಡೆಸಲಾಗುತ್ತಿದೆ ಇದರಿಂದ ನಿಜವಾದ ಹೋರಾಟಗಾರರಿಗೆ ದೇಶಭಕ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಯಾರು ಸಮಾಜಕ್ಕೋಸ್ಕರ ಕೆಲಸ ಮಾಡುತ್ತಾರೋ ಯಾರು ಸಾಮಾನ್ಯ ಜನರಿಗೋಸ್ಕರ ಕೆಲಸ ಮಾಡುತ್ತಾರೋ ಯಾರು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ನ್ಯಾಯ ಕೊಡಿಸುತ್ತರೋ ಅವರೇ ನಿಜವಾದ ಸಮಾಜ ಸೇವಕರು ಯಾರು ಚುನಾವಣೆ ಸಂದರ್ಭದಲ್ಲಿ ಆಸೆ ಆಮಿಷಗಳು ಹೊಡ್ಡುತ್ತಾರೋ ಅಂಥವರಿಂದ ಈ ಸಮಾಜ ಯಾವತ್ತೂ ಉದ್ದಾರ ಆಗುವುದಿಲ್ಲ. ಆದ್ದರಿಂದ ಇಂದಿನ ಯುವ ಜನತೆ ಜಾತಿ ಮತ ಪಕ್ಷವೆನ್ನದೇ ನಿಮ್ಮ ಸೇವೆ ಯಾರು ಮಾಡುತ್ತಾರೋ ಅವರು ನಿಮ್ಮ ಕೆಲಸಗಾರರು.
ಒಳ್ಳೆಯ ಕೆಲಸಗಾರರನ್ನು ನಾವು ಮತದಾನದ ಮುಖಾಂತರ ಆಯ್ಕೆ ಮಾಡಬೇಕಿದೆ….ಅಂದು ರಾಜಪ್ರಭುತ್ವ ಇತ್ತು ಆದರೆ ಇಂದು ಪ್ರಜಾಪ್ರಭುತ್ವ. ಇದೆ ಇಂದಿನ ಪ್ರಜೆಗಳೇ ನಾಳಿನ ಮಾಲೀಕರು.. ಯಾರು ರಾಜಕೀಯ ಹಿಂಬಾಲಕರಾಗಬೇಡಿ ಎಲ್ಲರೂ ನಾಯಕರಾಗಿ. ನಿಮ್ಮ ಹಕ್ಕುಗಳನ್ನು ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿ ಕೇಳಿ ಪಡೆದುಕೊಳ್ಳಿ… ಜೈ ಹಿಂದ್, ಜೈ ಟಿಪ್ಪು ಸುಲ್ತಾನ್ ಎಂದು ಶರಣ್ ಕುಮಾರ್ ದೊಡ್ಮನಿ ಹಾಲುಮತ ಸಮಾಜದ ಮುಖಂಡರು ತುಂಬಾ ವಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೈದಾನ ಪಟೇಲ್ ಅಂಕಲಗಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು. ಚಾಂದ್ ಪಟೇಲ್ ಮಾಲಿ ಪಾಟೀಲ ಅವ್ರು ಕಾರ್ಯಕ್ರಮದ ನೇತ್ರತ್ವ ವಹಿಸಿಕೊಂಡಿದರು.. ಹಾಗೂ ರಿಯಾಜ್ ಪಟೇಲ್ ದೇಸಾಯಿ. ಹಾಗೂ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಯಡ್ರಾಮಿ ತಾಲೂಕ ಗೌರವ ಅಧ್ಯಕ್ಷರು ಆನಂದ್ ಕುಮಾರ್ ಬಿ ಬಡಿಗೇರ್ ವಿಶೇಷವಾಗಿ ಭಾಗವಹಿಸಿದ್ದರು.
ಹುಸೇನ್ ಪಟೇಲ್ ಮಾಲಿ ಪಾಟೀಲ್, ಮೈಬೂಬ್ ಪಟೇಲ್ ಕಾಚೂರು ಗ್ರಾಮ ಪಂಚಾಯತ್ ಸದಸ್ಯರು, ಶೇಖಪ್ಪ ತಳಗೇರಿ ಮಾಜಿ ತಾಲೂಕ್ ಪಂಚಾಯತ್ ಸದಸ್ಯರು ಹಾಗೂ ರಾಮನಗೌಡ ಕೊಂಡ, ಆರ್‌ಟಿಐ ಕಾರ್ಯಕರ್ತ ಮೈಬೂಬ್ ಪಟೇಲ್ ನಡುವಿನಮನಿ, ಮಹಮ್ಮದ ಆಸಿಪ ಧರ್ಮ ಗುರುಗಳು, ಜಟ್ಟಪ್ಪ ಪೂಜಾರಿ ಜಮಖಂಡಿ, ಶ್ರೀಶೈಲ್ ಮ್ಯಾಗೇರಿ, ಕಾಶಿಮ್ ಪಟೇಲ್ ನಡುವಿನಮನಿ, ಹುಸೇನ್ ಪಟೇಲ್ ಮಾಲಿ ಪಾಟೀಲ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.