13.4 C
Munich
Sunday, March 19, 2023

Central Equipment Identity Register (CEIR) the new buzz in mobile lost world mangalore police distributes lost mobiles | ಇದೊಂದು ಹೊಸ ಟ್ರೆಂಡ್​ ಶುರುವಾಗಿದೆ! ಮೊಬೈಲ್ ಕಳೆದುಕೊಂಡವರು ಸೀದಾ ಈ ವೆಬ್​ಸೈಟ್​​ಗೆ ಭೇಟಿ ನೀಡ್ತಿದಾರೆ! ತಡವೇಕೆ? ಮೊಬೈಲ್ ಕಳೆದಿದ್ದರೆ ನೀವೂ ಹೀಗೆ ಮಾಡಿ!

ಓದಲೇಬೇಕು

Mobile Theft and Central Equipment Identity Register: CEIR ನಲ್ಲಿ ಕಳೆದು ಹೋದ ಮೊಬೈಲ್ ರಿಜಿಸ್ಟ್ರರ್ ಮಾಡಿದ್ರೆ ಸಿಗುತ್ತೆ ಮೊಬೈಲ್! ಮಂಗಳೂರು ನಗರ ಪೊಲೀಸರಿಂದ ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರ!

ತಡವೇಕೆ? ಮೊಬೈಲ್ ಕಳೆದಿದ್ದರೆ ನೀವೂ ಹೀಗೆ ಮಾಡಿ!

ಮೊಬೈಲ್ ಕಳೆದು ಹೋದ್ರೆ (Mobile Lost) ಕೆಲವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತಾರೆ. ಇನ್ನು ಕೆಲವರು ಪೊಲೀಸ್ ಠಾಣೆ ರಗಳೆಯೆಲ್ಲಾ ಯಾಕೆ ಅಂತಾ ಸುಮ್ಮನಾಗುತ್ತಾರೆ. ಆದ್ರೆ ಕೇಂದ್ರ ಸರ್ಕಾರ ಕಳೆದ ನಾಲ್ಕು ತಿಂಗಳ ಹಿಂದೆ ಇಡೀ ದೇಶದಲ್ಲಿ ಎಲ್ಲಿಯೇ ಮೊಬೈಲ್ ಕಳೆದು ಹೋದ್ರು ಒಂದೇ ವೆಬ್ ಸೈಟ್​ನಲ್ಲಿ  (Central Equipment Identity Register -CEIR) ತಾವಿದ್ದಲ್ಲಿಯೇ ದೂರು ದಾಖಲಿಸಬಹುದಾದ ಯೋಜನೆ ತಂದಿದೆ. ಸದ್ಯ ಅದರ ಫಲವೆಂಬಂತೆ ಕಳೆದು ಹೋದ ಮೊಬೈಲ್ ಆಸೆ ಬಿಟ್ಟವರೆಲ್ಲಾ ಈಗ ತಮ್ಮ ಮೊಬೈಲ್ ನ್ನು ವಾಪಾಸ್ ಪಡೆದುಕೊಳ್ಳುವ ಹಾಗಾಗಿದೆ! ಮಂಗಳೂರಿನ ಕೆಲ ನಿವಾಸಿಗಳು ಅದಾಗಲೆ ತಮ್ಮ ತಮ್ಮ ಮೊಬೈಲ್ ಗಳನ್ನು ಪೊಲೀಸರಿಂದ ಪಡೆದುಕೊಳ್ಳುತ್ತಿದ್ದಾರೆ. ಬಹಳಷ್ಟು ಮಂದಿ ಮಂಗಳೂರಿನ ನಾನಾ ಭಾಗಗಳಲ್ಲಿ ತಮ್ಮ ಮೊಬೈಲ್ ಗಳನ್ನು ಕಳೆದುಕೊಂಡಿದ್ದರು. ಕೆಲವರು ಮೊಬೈಲ್ ಕಳೆದುಕೊಂಡಿದ್ರೆ, ಇನ್ನು ಕೆಲವರ ಮೊಬೈಲ್ ಕಳ್ಳತನವಾಗಿತ್ತು (Mobile Theft). ಹಿಂದೆಲ್ಲಾ ಮೊಬೈಲ್ ಕಳೆದುಹೋದ್ರೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬೇಕಿತ್ತು. ಆದ್ರೆ ಈಗ ಕೇಂದ್ರ ಸರ್ಕಾರ ಇಡೀ ಭಾರತಕ್ಕೆ ಒಂದು ವೆಬ್ ಸೈಟ್ ಮಾಡಿದೆ. ಅದರಲ್ಲಿ ಕಳೆದು ಹೋದ ಮೊಬೈಲ್ ಡೀಟೇಲ್ಸ್ ಹಾಕಿದ್ರೆ ಸಾಕು ಅದನ್ನು ಪೊಲೀಸ್ ಇಲಾಖೆ ತನ್ನಷ್ಟಕ್ಕೆ ತಾನೇ ಹುಡುಕಿಕೊಡುತ್ತೆ. ಇಂಥದ್ದೊಂದು ತಂತ್ರಜ್ಞಾನದಿಂದ ಮೊಬೈಲ್ ಕಳೆದುಕೊಂಡು ಅದರ ಆಸೆ ಬಿಟ್ಟವರಿಗೂ ಈಗ ಮೊಬೈಲ್ ಸಿಗುತ್ತಿದೆ. ಮಂಗಳೂರಿನಲ್ಲಿ ಆ ರೀತಿ ದಾಖಲಾಗಿದ್ದ ಪ್ರಕರಣಗಳು ಟ್ರೇಸ್ ಆಗಿ ಸಿಕ್ಕ ಮೊಬೈಲ್ ಗಳನ್ನು ಪೊಲೀಸರು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ (Mangalore Police).

ಇನ್ನು ಮೊಬೈಲ್ ಕಳೆದುಕೊಂಡವರು ಪೊಲೀಸ್ ಠಾಣೆಗೆ ದೂರು ನೀಡೋಕೆ ಹೋದ್ರೆ ಪೊಲೀಸರು ಈ ವೆಬ್ ಸೈಟ್ ನಲ್ಲಿ ಅದರ ಡೀಟೇಲ್ಸ್ ತುಂಬಿಸುತ್ತಿದ್ದಾರೆ. ಇನ್ನು ಕೆಲವರು ಡೈರೆಕ್ಟ್ ಆಗಿ ಈ ವೆಬ್ ಸೈಟ್ ನ್ನು ಬಳಸುತ್ತಿದ್ದಾರೆ. ಮೊಬೈಲ್ ಕಳೆದುಕೊಂಡ ವೈದ್ಯೆ ಡಾ. ಗಾಯಿತ್ರಿ ಭಟ್ ಅದರ ಆಸೆ ಬಿಟ್ಟಿದ್ದು ಅದೀಗ ಸಿಕ್ಕಿದ್ದರಿಂದ ಖುಷಿಯಾಗಿದೆ ಅಂತಾ ಹೇಳಿದ್ರು.

Also Read:

Mobile Lost: ಮೊಬೈಲ್ ಕಳೆದುಹೋದರೆ ಸುಲಭದಲ್ಲಿ ನೀವೇ ಹುಡುಕುವುದು ಹೇಗೆ?

ಇನ್ನು ಶ್ರಾವ್ಯ ಎಂಬ ಹೆಣ್ಣುಮಗಳ ಮೊಬೈಲ್ ಅನ್ನು ಜಾತ್ರೋತ್ಸವದಲ್ಲಿ ಯಾರೋ ಕದ್ದಿದ್ರು. ಮೊಬೈಲ್ ಸಿಗುವಂತೆ ಸ್ವಾಮಿ ಕೊರಗಜ್ಜನಿಗೆ ಪ್ರಾರ್ಥನೆ ಮಾಡಿದ್ದರಂತೆ. ಮೊಬೈಲ್ ಸಿಕ್ಕಿದ್ದಕ್ಕೆ ಸ್ವಾಮಿ ಕೊರಗಜ್ಜನೇ ಕಾರಣ ಅಂತಾ ಈಕೆ ಹೇಳ್ತಾರೆ! ಜೊತೆಗೆ ಪೊಲೀಸರ ಶ್ರಮಕ್ಕೆ ಧನ್ಯವಾದ ಹೇಳಿದ್ದಾರೆ.

ಸದ್ಯ ಈ ವೆಬ್ ಸೈಟ್ ನಿಂದಾಗಿ ಮೊಬೈಲ್ ಕಳೆದು ಹೋದ ತಕ್ಷಣ ಮೊಬೈಲ್ ನ್ನು ಬ್ಲಾಕ್ ಮಾಡಬಹುದು. ಹೀಗೆ ರಿಜಿಸ್ಟ್ರರ್ ಮಾಡಿದ್ರೆ ಮೊಬೈಲ್ ಕದ್ದವರು ಕೂಡ ಆ ಮೊಬೈಲ್ ನ್ನು ಉಪಯೋಗಿಸಲು ಸಾಧ್ಯವಿರುವುದಿಲ್ಲ. ಈ ವೆಬ್ ಸೈಟ್ ನಿಂದಾಗಿ ಮೊಬೈಲ್ ಕಳ್ಳರು ಈಗ ಸುಲಭವಾಗಿ ಸಿಕ್ಕಿ ಬೀಳೋದಂತೂ ಖಂಡಿತ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!