9.8 C
Munich
Friday, March 24, 2023

Chetan Chandra Pavana starrer Prabhuthva Kannada movie trailer gets 1 million views on YouTube | ‘ಮತದಾನ ನಮ್ಮನೆ ಹೆಣ್ಣುಮಕ್ಕಳ ರೀತಿ ಶ್ರೇಷ್ಠ, ಅದನ್ನು ಮಾರಿಕೊಳ್ಳಬೇಡಿ’: ‘ಪ್ರಭುತ್ವ’ ಟ್ರೇಲರ್​ ವೈರಲ್​

ಓದಲೇಬೇಕು

Prabhuthva Movie Trailer: ‘ಪ್ರಭುತ್ವ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದ್ದು, ಒಂದೇ ದಿನಕ್ಕೆ ಯೂಟ್ಯೂಬ್​ನಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಈ ಸಿನಿಮಾಗೆ ಆರ್​. ರಂಗನಾಥ್​ ನಿರ್ದೇಶನ ಮಾಡಿದ್ದಾರೆ.

ಪಾವನಾ, ಚೇತನ್ ಚಂದ್ರ

ರಾಜ್ಯದಲ್ಲಿ ಚುನಾವಣೆ (Karnataka Assembly Election 2023) ಕಾವು ಹೆಚ್ಚಾಗುತ್ತಿದೆ. ಪ್ರತಿ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ರಾಜಕೀಯದ ಚಟುವಟಿಕೆಗಳು ಗರಿಗೆದರಿವೆ. ಮತದಾನದ ಕುರಿತು ಜಾಗೃತಿ ಮೂಡಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ವಿಶೇಷ ಏನೆಂದರೆ, ಈ ಸಂದರ್ಭಕ್ಕೆ ಸರಿಯಾಗಿ ಕನ್ನಡದ ‘ಪ್ರಭುತ್ವ’ ಸಿನಿಮಾ (Prabhuthva Kannada Movie) ಟ್ರೇಲರ್​ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಚುನಾವಣೆ ಕುರಿತ ವಿಷಯ ಇದೆ. ಜನರು ಎಷ್ಟು ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂಬುದನ್ನು ತಿಳಿಸುವ ಸಲುವಾಗಿ ಈ ಚಿತ್ರ ತಯಾರಾಗಿದೆ. ‘ಮತದಾನ ನಮ್ಮನೆ ಹೆಣ್ಣುಮಕ್ಕಳ ರೀತಿ ಶ್ರೇಷ್ಠ, ಅದನ್ನು ಮಾರಿಕೊಳ್ಳಬೇಡಿ’ ಎಂದು ಕಥಾನಾಯಕ ಹೇಳಿದ ಡೈಲಾಗ್​ ಸಖತ್​ ವೈರಲ್​ ಆಗುತ್ತಿದೆ. ಚೇತನ್​ ಚಂದ್ರ (Chetan Chandra) ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ.

ಜಂಕಾರ್​ ಮ್ಯೂಸಿಕ್​ ಮೂಲಕ ‘ಪ್ರಭುತ್ವ’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಒಂದೇ ದಿನಕ್ಕೆ ಯೂಟ್ಯೂಬ್​ನಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಬಾರಿ ಈ ಟ್ರೇಲರ್​​ ವೀಕ್ಷಣೆ ಕಂಡಿದೆ. ಈ ಸಿನಿಮಾಗೆ ಆರ್​. ರಂಗನಾಥ್​ ನಿರ್ದೇಶನ ಮಾಡಿದ್ದಾರೆ. ರವಿರಾಜ್​ ಎಸ್​. ಕುಮಾರ್​ ಅವರ ನಿರ್ಮಾಣದಲ್ಲಿ ‘ಪ್ರಭುತ್ವ’ ಸಿನಿಮಾ ಮೂಡಿಬಂದಿದೆ. ಜನರಿಂದ ಈ ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಡೈಲಾಗ್​ಗಳು ಹೈಲೈಟ್​ ಆಗಿವೆ.

ಇದನ್ನೂ ಓದಿ: ಹುಟ್ಟೂರಿಗೆ ರಾಯಭಾರಿಯಾದ ರಾಜಮೌಳಿ; ಜನರಲ್ಲಿ ಮತದಾನದ ಜಾಗೃತಿ ಮೂಡಿಸಲಿರುವ ಖ್ಯಾತ ನಿರ್ದೇಶಕ

ಇದನ್ನೂ ಓದಿ



ಹಲವು ಜನಪ್ರಿಯ ಕಲಾವಿದರು ‘ಪ್ರಭುತ್ವ’ ಸಿನಿಮಾದಲ್ಲಿ ನಟಿಸಿದ್ದಾರೆ. ಚೇತನ್​ ಚಂದ್ರ ಅವರಿಗೆ ಜೋಡಿಯಾಗಿ ನಟಿ ಪಾವನಾ ಅಭಿನಯಿಸಿದ್ದಾರೆ. ನಾಸರ್​, ಶರತ್​ ಲೋಹಿತಾಶ್ವ, ಅರವಿಂದ್ ರಾವ್, ಹರೀಶ್ ರಾಯ್, ಆದಿ ಲೋಕೇಶ್, ಶಶಿಕುಮಾರ್​, ವಿಜಯ್ ಚೆಂಡೂರ್, ವೀಣಾ ಸುಂದರ್, ಅನಿತಾ‌ ಭಟ್, ರಾಜೇಶ್​ ನಟರಂಗ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Prabhuthva Trailer Release event

ಪ್ರಭುತ್ವ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮ

ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿನಯ್​ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಚೇತನ್​ ಚಂದ್ರ ನಟನೆಯ 12ನೇ ಸಿನಿಮಾ ಇದು. ಚಿತ್ರ ಮೂಡಿಬಂದಿರುವ ರೀತಿಯ ಬಗ್ಗೆ ಅವರಿಗೆ ಹೆಮ್ಮೆ ಇದೆ. ರಾಜಕೀಯದ ಬಗ್ಗೆ ಮೆಸೇಜ್​ ಇರುವಂತಹ ಈ ಸಿನಿಮಾವನ್ನು ಚುನಾವಣೆಗೂ ಮುನ್ನವೇ ತೆರೆಕಾಣಿಸಬೇಕು ಎಂದು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

ಮೇಘಡಹಳ್ಳಿ ಡಾ. ಶಿವಕುಮಾರ್ ಅವರು ‘ಪ್ರಭುತ್ವ’ ಸಿನಿಮಾಗೆ ಕಥೆ ಬರೆದಿದ್ದಾರೆ. ‘ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು ಎಂಬ ಸಂದೇಶ ಈ ಸಿನಿಮಾದಲ್ಲಿದೆ’ ಎಂದು ಶಿವಕುಮಾರ್ ಹೇಳಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!